‘ಅಗ್ನಿ–4’ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ
ನವದೆಹಲಿ: ಅಣ್ವಸ್ತ್ರ ಸಿಡಿತಲೆ ಹೊತ್ತು ಸಾಗಬಲ್ಲ ಅಗ್ನಿ–4 ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಗುರುವಾರ ಯಶಸ್ವಿಯಾಗಿ ನಡೆಸಲಾಗಿದೆ.ಒಡಿಶಾ ಕರಾವಳಿಯ ಚಾಂದಿಪುರದಲ್ಲಿರುವ ಸಮಗ್ರ ಪರೀಕ್ಷಾ ವಲಯದಲ್ಲಿ (ಐಟಿಆರ್) ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.ನೆಲದಿಂದ ಚಿಮ್ಮಿ ನೆಲದಲ್ಲಿನ ಗುರಿಯನ್ನು ನಾಶಪಡ

ನವದೆಹಲಿ: ಅಣ್ವಸ್ತ್ರ ಸಿಡಿತಲೆ ಹೊತ್ತು ಸಾಗಬಲ್ಲ ಅಗ್ನಿ–4 ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಗುರುವಾರ ಯಶಸ್ವಿಯಾಗಿ ನಡೆಸಲಾಗಿದೆ.ಒಡಿಶಾ ಕರಾವಳಿಯ ಚಾಂದಿಪುರದಲ್ಲಿರುವ ಸಮಗ್ರ ಪರೀಕ್ಷಾ ವಲಯದಲ್ಲಿ (ಐಟಿಆರ್) ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.ನೆಲದಿಂದ ಚಿಮ್ಮಿ ನೆಲದಲ್ಲಿನ ಗುರಿಯನ್ನು ನಾಶಪಡಿಸುವ ಸಾಮರ್ಥ್ಯವಿರುವ ಈ ಕ್ಷಿಪಣಿ 4 ಸಾವಿರ ಕಿ.ಮೀ.ಗೂ ಅಧಿಕ ದೂರ ಸಾಗಬಲ್ಲದು. ಕಾರ್ಯಾಚರಣೆ ಹಾಗೂ ತಾಂತ್ರಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಎಲ್ಲ ಮಾನದಂಡಗಳು ಈ ಪರೀಕ್ಷೆಯಲ್ಲಿ ದೃಢಪಟ್ಟವು ಎಂದು ಡಿಆರ್ಡಿಒ ಮೂಲಗಳು ಹೇಳಿವೆ.ಈ ಶ್ರೇಣಿಯ ಕ್ಷಿಪಣಿಗಳ ಪೈಕಿ ಅಗ್ನಿ–4 ಅತ್ಯಾಧುನಿಕ ಆಯುಧವಾಗಿದೆ.Agni-4’ Ballistic Missile successfully test-firedMedium Range Ballistic Missile ‘Agni-4’ was successfully test-fired from the Integrated Test Range, Chandipur in Odisha on August 06, 2026. The launch validated all operational and technical parameters. The test was carried out… pic.twitter.com/rOMaUMTVgy— ANI (@ANI) August 6, 2026