ಟಿ.ಟಿ: ಅರ್ಣವ್, ಧನ್ವಿತಾಗೆ ಪ್ರಶಸ್ತಿ
ಬೆಂಗಳೂರು: ಅರ್ಣವ್ ಮಿಥುನ್ ಮತ್ತು ಧನ್ವಿತಾ ಪಟ್ಟಣಕುಡಿ ಅವರು ಮಲ್ಲೇಶ್ವರಂ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ ಎರಡನೇ ದಿನವಾದ ಗುರುವಾರ ಕ್ರಮವಾಗಿ 13 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ವಿಭಾಗದ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಬಾಲಕರ ವಿಭಾಗದ ಫೈನಲ್ನಲ್ಲಿ ಅರ್ಣವ್ 11-6, 7-11, 11-13,

ಬೆಂಗಳೂರು: ಅರ್ಣವ್ ಮಿಥುನ್ ಮತ್ತು ಧನ್ವಿತಾ ಪಟ್ಟಣಕುಡಿ ಅವರು ಮಲ್ಲೇಶ್ವರಂ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ ಎರಡನೇ ದಿನವಾದ ಗುರುವಾರ ಕ್ರಮವಾಗಿ 13 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ವಿಭಾಗದ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಬಾಲಕರ ವಿಭಾಗದ ಫೈನಲ್ನಲ್ಲಿ ಅರ್ಣವ್ 11-6, 7-11, 11-13, 11-8, 11-5ರಿಂದ ಸುಚೇತ್ ಧರೆಣ್ಣವರ ವಿರುದ್ಧ ಜಯ ಸಾಧಿಸಿದನು. ಸೆಮಿಫೈನಲ್ನಲ್ಲಿ ಅರ್ಣವ್ 11-6, 11-2, 11-6ರಿಂದ ಯಶ್ ವಿಶ್ವಾಸ್ ವಿರುದ್ಧ; ಸುಚೇತ್ 11-9, 8-11, 13-11, 11-13, 11-3ರಿಂದ ವಿವಾನ್ ಪಂತ್ ವಿರುದ್ಧ ಗೆಲುವು ಸಾಧಿಸಿದ್ದರು. ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಧನ್ವಿತಾ 11-6, 4-11, 11-9, 9-11, 11-8ರಿಂದ ಸಾಕ್ಷ್ಯಾ ಸಂತೋಷ್ ವಿರುದ್ಧ ಗೆಲುವು ಸಾಧಿಸಿದಳು. ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಧನ್ವಿತಾ 11-7, 6-11, 11-5, 9-11, 11-8ರಿಂದ ಅನಯಾ ಅಗರವಾಲ್ ಎದುರು; ಸಾಕ್ಷ್ಯಾ 11-8, 11-9, 8-11, 11-6ರಿಂದ ಆಧ್ಯಾ ಎಂ. ಎದುರು ಗೆಲುವು ಸಾಧಿಸಿದ್ದರು. ಬೆಂಗಳೂರು ನಗರ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆಯ ಸಹಯೋಗದಲ್ಲಿ ಟೂರ್ನಿಯು ಇದೇ 9ರವರೆಗೆ ನಡೆಯಲಿದೆ.