ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ: ದರ್ಶನ್ ವಿರುದ್ಧ ‘ಮಾಫಿ ಸಾಕ್ಷಿ’
ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ಮತ್ತೊಂದು ತಿರುವು ಪಡೆದಿದ್ದು, ‘ಮಾಫಿ ಸಾಕ್ಷಿ’ ಮಾಡುವಂತೆ ಕೋರಿ ಪ್ರಕರಣದ 14ನೇ ಆರೋಪಿ ಪ್ರದೂಷ್ ರಾವ್ ಅವರು 59ನೇ ಸಿಸಿಎಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ಆದೇಶ ಕಾಯ್ದಿರಿಸಿದರು.ಮುಂದಿನ ವಿಚಾರಣೆ (ಆ.10ಕ್ಕೆ) ಪೂರ್ಣಗೊಳಿಸಿ ಅಂತಿಮ ಆದೇಶ ಪ್ರಕಟಿಸು

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ಮತ್ತೊಂದು ತಿರುವು ಪಡೆದಿದ್ದು, ‘ಮಾಫಿ ಸಾಕ್ಷಿ’ ಮಾಡುವಂತೆ ಕೋರಿ ಪ್ರಕರಣದ 14ನೇ ಆರೋಪಿ ಪ್ರದೂಷ್ ರಾವ್ ಅವರು 59ನೇ ಸಿಸಿಎಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ಆದೇಶ ಕಾಯ್ದಿರಿಸಿದರು.ಮುಂದಿನ ವಿಚಾರಣೆ (ಆ.10ಕ್ಕೆ) ಪೂರ್ಣಗೊಳಿಸಿ ಅಂತಿಮ ಆದೇಶ ಪ್ರಕಟಿಸುವುದಾಗಿ ನ್ಯಾಯಾಧೀಶರು ಗುರುವಾರ ಪ್ರಕಟಿಸಿದರು. ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ ಬಳಿಕ ನಟ ದರ್ಶನ್, ಪವಿತ್ರಾಗೌಡ, ದರ್ಶನ್ ವ್ಯವಸ್ಥಾಪಕ ಆರ್.ನಾಗರಾಜ್, ಕಾರು ಚಾಲಕ ಲಕ್ಷ್ಮಣ್, ಉದ್ಯಮಿ ಪ್ರದೂಷ್ ರಾವ್, ಚಿತ್ರದುರ್ಗದ ಆಟೊ ಚಾಲಕರಾದ ಅನುಕುಮಾರ್, ಜಗದೀಶ್ ಅವರು ಎರಡನೇ ಬಾರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.ಎರಡು ದಿನಗಳ ಹಿಂದೆ ಪ್ರದೂಷ್ ಪರವಾಗಿ ವಕೀಲರು ನ್ಯಾಯಾಲಯಕ್ಕೆ ‘ಮಾಫಿ ಸಾಕ್ಷಿ’ಯ ಅರ್ಜಿ ಸಲ್ಲಿಸಿದ್ದಾರೆ. ಸತ್ಯಾಂಶವನ್ನು ಹೇಳುವುದಾಗಿ ಅರ್ಜಿಯಲ್ಲಿ ತಿಳಿಸಲಾಗಿದೆ. ಇದೇ ಪ್ರಕರಣದಲ್ಲಿ 10ನೇ ಆರೋಪಿ ವಿನಯ್ ಅವರೂ ‘ಮಾಫಿ ಸಾಕ್ಷಿ’ಗೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸುವಂತೆ ಪ್ರದೂಷ್ ಪರ ವಕೀಲರು ನ್ಯಾಯಾಲಯದಲ್ಲಿ ಕೋರಿದರು.ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದರ್ಶನ್ ಇರುವ ಬ್ಯಾರಕ್ನಲ್ಲಿ ಪ್ರದೂಷ್ ಅವರನ್ನು ಇರಿಸಲಾಗಿದೆ. ಪ್ರತ್ಯೇಕ ಬ್ಯಾರಕ್ ಕಲ್ಪಿಸುವಂತೆ ಪ್ರದೂಷ್ ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಿದರು.ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ವಾದ ಮಂಡಿಸಿದರೆ, ದರ್ಶನ್ ಪರವಾಗಿ ಹಸ್ಮತ್ ಪಾಷ ಪ್ರತಿವಾದ ಮಂಡಿಸಿದರು.ಕೆಲವು ಷರತ್ತುಗಳನ್ನು ಮುಂದಿಟ್ಟು ಪ್ರಾಸಿಕ್ಯೂಷನ್ ಪರವಾಗಿ ‘ಮಾಫಿ ಸಾಕ್ಷಿ’ಗೆ ಪ್ರಸನ್ನ ಕುಮಾರ್ ಒಪ್ಪಿಗೆ ಸೂಚಿಸಿ ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದರು. ಇದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪಿಸಿದರು. ಪ್ರದೂಷ್ ಅರ್ಜಿ ಪ್ರತಿ ನೀಡುವಂತೆ ಮನವಿ ಮಾಡಿದರು. ಅರ್ಜಿ ಪ್ರತಿಯನ್ನು ನೀಡುವುದಾಗಿ ನ್ಯಾಯಾಲಯವು ತಿಳಿಸಿತು.‘ಪ್ರಕರಣದ ಸಹ ಆರೋಪಿಗಳಿಗೆ ಕ್ಷಮದಾನ ನೀಡಬೇಕೇ ಬೇಡವೇ’ ಎಂಬುದರ ಕುರಿತು ಆದೇಶಿಸಲಾಗುವುದು ಎಂದು ನ್ಯಾಯಾಲಯವು ತಿಳಿಸಿ ವಿಚಾರಣೆ ಮುಂದೂಡಿದೆ.‘ಅರ್ಜಿಯ ಪ್ರತಿ ಲಭಿಸಿದ ಮೇಲೆ ಆಕ್ಷೇಪಣೆ ಸಲ್ಲಿಸಲಾಗುವುದು. ಸಾಕ್ಷಿಗಳ ಕೊರತೆ ಇರುವ ಪ್ರಕರಣ ಇದು ಅಲ್ಲ. ಸಾಕಷ್ಟು ಸಾಕ್ಷಿ ಇದೆ ಎಂದು ಪ್ರಾಸಿಕ್ಯೂಷನ್ ಹೇಳಿದೆ. ಆದರೂ, ‘ಮಾಫಿ ಸಾಕ್ಷಿ’ ಪಡೆಯಲು ಮುಂದಾಗಿರುವುದು ಯಾವ ಕಾರಣಕ್ಕೆ’ ಎಂದು ದರ್ಶನ್ ಪರ ವಕೀಲ ಹಸ್ಮತ್ ಪಾಷ ಪ್ರಶ್ನಿಸಿದರು.ಪವಿತ್ರಾ ಪ್ರದೂಷ್ ಪ್ರದೂಷ್ ಮೇಲಿರುವ ಆರೋಪಗಳು? * ಸಾಕ್ಷ್ಯನಾಶ ಪ್ರಕರಣ ಮುಚ್ಚಿಹಾಕಲು ಯತ್ನ * ನಟ ದರ್ಶನ್ ಕಡೆಯಿಂದ ₹30 ಲಕ್ಷ ಸ್ವೀಕರಿಸಿ ಬೇರೆ ವ್ಯಕ್ತಿಗಳನ್ನು ಶರಣಾಗಿಸಲು ಸಂಚು * ಘಟನಾ ಸ್ಥಳದಲ್ಲಿ ಉಪಸ್ಥಿತಿ * ಪಟ್ಟಣಗೆರೆಯ ಶೆಡ್ನಲ್ಲಿ ರೇಣುಕಸ್ವಾಮಿ ಮೃತಪಟ್ಟ ಬಳಿಕ ದರ್ಶನ್ಗೆ ಮಾಹಿತಿ ನೀಡಿದ್ದ ಆರೋಪಿ * ಪಟ್ಟಣಗೆರೆ ಶೆಡ್ಗೆ ಪವಿತ್ರಾಗೌಡ ಅವರನ್ನು ಕರೆತಂದಿದ್ದ ಪ್ರದೂಷ್ ಕೋಳಿ ಕೇಳಿ ಖಾರ ಅರೆಯಬೇಕಾ? ‘ಕೋಳಿ ಕೇಳಿ ಖಾರ ಅರೆಯಬೇಕಾ’ ಎಂಬ ಗಾದೆ ಉಲ್ಲೇಖಿಸಿ ವಾದ ಮಂಡಿಸಿದ ವಿಶೇಷ ಪ್ರಾಸಿಕ್ಯೂಟರ್ ಪಿ. ಪ್ರಸನ್ನಕುಮಾರ್ ‘ಮಾಫಿ ಸಾಕ್ಷಿ’ ಅರ್ಜಿ ಸಲ್ಲಿಕೆಗೆ ಇತರೆ ಆರೋಪಿಗಳ ಸಹಮತಿ ಅಗತ್ಯವಿಲ್ಲ. ‘ಮಾಫಿ ಸಾಕ್ಷಿ’ ಅಂಗೀಕರಿಸುವಾಗ ಆರೋಪಿ ಪಾತ್ರ ಕೂಡ ಪ್ರಮುಖವಾಗಿದೆ. ದರ್ಶನ್ ಹಲ್ಲೆ ಮಾಡುವಾಗ ಬೇಡ ಸರ್ ಎಂಬುದಾಗಿ ಹೇಳಿ ಪಕ್ಕಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು.