ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ
ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ.ನಾಲ್ಕೂವರೆ ದಶಕಗಳಿಂದ ಮೇಲ್ಮನೆಯ ಸದಸ್ಯರಾಗಿರುವ ಅವರು021ನೇ ಫೆಬ್ರುವರಿ 9ರಿಂದ ಸಭಾಪತಿ ಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಪರಿಷತ್ನಲ್ಲಿ ಕಾಂಗ್ರೆಸ್ ಬಲ ವೃದ್ಧಿಸಿದ್ದು, ಸಲೀಂ ಅಹಮದ್ ಅವರನ್ನು ಸಭಾಪತಿ ಅಭ್ಯರ್ಥಿ ಎಂದು ಆ ಪಕ್ಷದ ಹೈಕಮಾಂಡ್ ಘೋಷ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ.ನಾಲ್ಕೂವರೆ ದಶಕಗಳಿಂದ ಮೇಲ್ಮನೆಯ ಸದಸ್ಯರಾಗಿರುವ ಅವರು021ನೇ ಫೆಬ್ರುವರಿ 9ರಿಂದ ಸಭಾಪತಿ ಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಪರಿಷತ್ನಲ್ಲಿ ಕಾಂಗ್ರೆಸ್ ಬಲ ವೃದ್ಧಿಸಿದ್ದು, ಸಲೀಂ ಅಹಮದ್ ಅವರನ್ನು ಸಭಾಪತಿ ಅಭ್ಯರ್ಥಿ ಎಂದು ಆ ಪಕ್ಷದ ಹೈಕಮಾಂಡ್ ಘೋಷಿಸಿತ್ತು. ಆದರೆ, ಹೊರಟ್ಟಿ ಅವರು ರಾಜೀನಾಮೆ ನೀಡಲು ಒಪ್ಪಿರಲಿಲ್ಲ.‘ವಿಧಾನಸಭೆಗಿಂತ ವಿಧಾನಪರಿಷತ್ ಭಿನ್ನ. ಹೀಗಾಗಿ, ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ವಿರೋಧ ಪಕ್ಷಗಳ ಸದಸ್ಯರಿಗೂ ಸಭಾಪತಿಯಾಗುವ ಅವಕಾಶ ಸಿಕ್ಕಿದೆ. ಪರಿಷತ್ ಸದಸ್ಯ ಅವಧಿ ಮುಗಿಯುವವರೆಗೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಬೇಕಿದ್ದರೆ ಅವಿಶ್ವಾಸ ನಿರ್ಣಯ ಮಂಡಿಸಲಿ’ ಎಂದು ಹೊರಟ್ಟಿ ಅವರು ಸವಾಲು ಹಾಕಿದ್ದರು.ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಹೊರಟ್ಟಿ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದರು. ‘ಕಳಂಕರಹಿತ ರಾಜಕೀಯ ಜೀವನ ಸಾಗಿಸಿರುವ ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ನೀಡಬಾರದು’ ಎಂದು ಇಬ್ಬರೂ ನಾಯಕರು ವಿನಂತಿಸಿದ್ದರು. ನಂತರ ಹೊರಟ್ಟಿ ಅವರು ಅಧಿವೇಶನದ ಎರಡನೇ ದಿನ (ಆ. 14) ರಾಜೀನಾಮೆ ನೀಡುವ ಭರವಸೆ ನೀಡಿದ್ದರು. ಈಗದಿಢೀರ್ ರಾಜೀನಾಮೆ ನೀಡಿದ್ದಾರೆ. ಸಭಾಪತಿ ಸ್ಥಾನ ಖಾಲಿಯಾಗಿದೆ ಎಂದು ಪರಿಷತ್ ಪ್ರಭಾರ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ.