ಭದ್ರತಾ ಕಾಳಜಿ: ಪಾಕ್, ಸೌದಿ, ಟರ್ಕಿ ಜಂಟಿ ರಕ್ಷಣಾ ಒಪ್ಪಂದಕ್ಕೆ ಸಹಿ
ಮೆಕ್ಕಾ: ಪ್ರಾದೇಶಿಕ ಶಕ್ತಿಗಳ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಪಾಕಿಸ್ತಾನ, ಸೌದಿ ಅರೇಬಿಯಾ, ಟರ್ಕಿ ದೇಶಗಳು ಜಂಟಿ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ.ಮೂರು ರಾಷ್ಟ್ರಗಳ ಪೈಕಿ ಯಾವುದೇ ದೇಶದ ಮೇಲೆ ದಾಳಿ ನಡೆದರೂ ಅದು ಮೂರು ದೇಶಗಳ ಮೇಲೆ ನಡೆದ ದಾಳಿ ಎಂದು ಪರಿಗಣಿಸಲಾಗುತ್ತದೆ. ಹೆಚ್ಚುತ್ತಿರುವ ಭದ್ರತಾ ಕಾಳಜಿ ಹಿನ್ನೆಲೆಯಲ್ಲಿ ಈ ರಕ್ಷಣಾ ಒಪ್ಪಂದಕ್ಕೆ ಮೂರು ದೇಶಗಳ

ಮೆಕ್ಕಾ: ಪ್ರಾದೇಶಿಕ ಶಕ್ತಿಗಳ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಪಾಕಿಸ್ತಾನ, ಸೌದಿ ಅರೇಬಿಯಾ, ಟರ್ಕಿ ದೇಶಗಳು ಜಂಟಿ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ.ಮೂರು ರಾಷ್ಟ್ರಗಳ ಪೈಕಿ ಯಾವುದೇ ದೇಶದ ಮೇಲೆ ದಾಳಿ ನಡೆದರೂ ಅದು ಮೂರು ದೇಶಗಳ ಮೇಲೆ ನಡೆದ ದಾಳಿ ಎಂದು ಪರಿಗಣಿಸಲಾಗುತ್ತದೆ. ಹೆಚ್ಚುತ್ತಿರುವ ಭದ್ರತಾ ಕಾಳಜಿ ಹಿನ್ನೆಲೆಯಲ್ಲಿ ಈ ರಕ್ಷಣಾ ಒಪ್ಪಂದಕ್ಕೆ ಮೂರು ದೇಶಗಳು ಅನುಮತಿಸಿವೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಗುರುವಾರ ತಿಳಿಸಿದೆ.ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಸೌದಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್, ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ‘ಮಕ್ಕಾ ಜಂಟಿ ರಕ್ಷಣಾ ಒಪ್ಪಂದ’ಕ್ಕೆ ಇಲ್ಲಿನ ಮೆಕ್ಕಾ ನಗರದಲ್ಲಿ ಸಹಿ ಹಾಕಿದರು.ಯಾವುದೇ ಆಕ್ರಮಣಕಾರಿ ಕೃತ್ಯದ ವಿರುದ್ಧ ಸಾಮೂಹಿಕ ತಡೆಗಟ್ಟುವ ಉದ್ದೇಶವನ್ನು ಈ ರಕ್ಷಣಾ ಒಪ್ಪಂದ ಹೊಂದಿದೆ ಎಂದು ಪಾಕಿಸ್ತಾನ ತಿಳಿಸಿದೆ.
Read the complete story at Prajavani