ದೇಶದ ವಿದೇಶಿ ಮೀಸಲು ಸಂಗ್ರಹ ಏರಿಕೆ
ಮುಂಬೈ: ಜುಲೈ 31ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ₹1 ಲಕ್ಷ ಕೋಟಿಗೆ ಏರಿಕೆಯಾಗಿದೆ. ಒಟ್ಟು ಸಂಗ್ರಹವು ₹65.96 ಲಕ್ಷ ಕೋಟಿ (692 ಬಿಲಿಯನ್ ಡಾಲರ್) ಆಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.ಪಶ್ಚಿಮ ಏಷ್ಯಾ ಸಂಘರ್ಷ ಆರಂಭವಾಗುವ ಹಿಂದಿನ ದಿನವಾದ ಫೆಬ್ರುವರಿ 27ರಂದು ₹69.35 ಲಕ್ಷ ಕೋಟಿ (728 ಬಿಲಿಯನ್ ಡಾಲರ್) ಇತ್ತು.

ಮುಂಬೈ: ಜುಲೈ 31ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ₹1 ಲಕ್ಷ ಕೋಟಿಗೆ ಏರಿಕೆಯಾಗಿದೆ. ಒಟ್ಟು ಸಂಗ್ರಹವು ₹65.96 ಲಕ್ಷ ಕೋಟಿ (692 ಬಿಲಿಯನ್ ಡಾಲರ್) ಆಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.ಪಶ್ಚಿಮ ಏಷ್ಯಾ ಸಂಘರ್ಷ ಆರಂಭವಾಗುವ ಹಿಂದಿನ ದಿನವಾದ ಫೆಬ್ರುವರಿ 27ರಂದು ₹69.35 ಲಕ್ಷ ಕೋಟಿ (728 ಬಿಲಿಯನ್ ಡಾಲರ್) ಇತ್ತು. ಇದು ಇದುವರೆಗಿನ ದಾಖಲೆಯ ಸಂಗ್ರಹವಾಗಿದೆ.ಚಿನ್ನದ ಮೀಸಲು ಸಂಗ್ರಹವು ₹16,042 ಕೋಟಿಯಷ್ಟು ಏರಿಕೆ ಆಗಿದ್ದು, ₹9.97 ಲಕ್ಷ ಕೋಟಿಗೆ ತಲುಪಿದೆ.ವಿದೇಶಿ ಕರೆನ್ಸಿಗಳ ಸಂಪತ್ತಿನ ಮೌಲ್ಯ ₹83,309 ಕೋಟಿಯಷ್ಟು ಏರಿಕೆಯಾಗಿದ್ದು, ₹53.76 ಲಕ್ಷ ಕೋಟಿಯಾಗಿದೆ. ಸ್ಪೆಷಲ್ ಡ್ರಾಯಿಂಗ್ ರೈಟ್ಸ್ (ಎಸ್ಡಿಆರ್) ₹1.77 ಲಕ್ಷ ಕೋಟಿ ಆಗಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಭಾರತದ ಪಾಲು ₹45,491 ಕೋಟಿಯಾಗಿದೆ ಎಂದು ತಿಳಿಸಿದೆ.
Read the complete story at Prajavani