SIR ಮುಗಿದ ತಕ್ಷಣ ಶುರುವಾಗಲಿದೆ ಗೃಹಲಕ್ಷ್ಮೀ ಮರುಪರಿಶೀಲನೆ – ಮಾರ್ಗಸೂಚಿ ಪ್ರಕಟ
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ (SIR) ಮುಗಿದ ತಕ್ಷಣ ಗೃಹಲಕ್ಷ್ಮೀ (Gruhalakshmi) ಮರುಪರಿಶೀಲನೆ ಆರಂಭವಾಗಲಿದೆ. ಈ ಹಿನ್ನೆಲೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಗೃಹಲಕ್ಷ್ಮೀ ಮಾರ್ಗಸೂಚಿಗೆ ಸಿಎಂ ಡಿಕೆ ಶಿವಕುಮಾರ್ ಅವರು ಅಧಿಕೃತವಾಗಿ ಒಪ್ಪಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆ ಎಸ್ಐಆರ್ ಮುಗಿದ ತಕ್ಷಣ ರಾಜ್ಯದಲ್ಲಿ ಗೃಹಲಕ್ಷ್ಮೀ ಮರುಪರಿಶೀಲನೆ ಶ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ (SIR) ಮುಗಿದ ತಕ್ಷಣ ಗೃಹಲಕ್ಷ್ಮೀ (Gruhalakshmi) ಮರುಪರಿಶೀಲನೆ ಆರಂಭವಾಗಲಿದೆ. ಈ ಹಿನ್ನೆಲೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಗೃಹಲಕ್ಷ್ಮೀ ಮಾರ್ಗಸೂಚಿಗೆ ಸಿಎಂ ಡಿಕೆ ಶಿವಕುಮಾರ್ ಅವರು ಅಧಿಕೃತವಾಗಿ ಒಪ್ಪಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆ ಎಸ್ಐಆರ್ ಮುಗಿದ ತಕ್ಷಣ ರಾಜ್ಯದಲ್ಲಿ ಗೃಹಲಕ್ಷ್ಮೀ ಮರುಪರಿಶೀಲನೆ ಶುರುವಾಗಲಿದ್ದು, ಗ್ಯಾರಂಟಿ ಅನುಷ್ಠಾನ ಸಮಿತಿ ಸಮ್ಮುಖದಲ್ಲಿ ಅರ್ಜಿ ಭರ್ತಿ ಹಾಗೂ ಮರುಪರಿಶೀಲನೆ ನಡೆಯಲಿದೆ. ಇದನ್ನೂ ಓದಿ: ಕೊಡಗಿನಲ್ಲಿ ಮತ್ತೆ ಬಿರುಸು ಪಡೆದ ಮಳೆ ಸರ್ಕಾರವು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಮಿತಿ ರಚನೆ ಮಾಡಿ ಆದೇಶ ಹೊರಡಿಸಿದೆ. ಜಿಲ್ಲಾಮಟ್ಟದ ಸಮಿತಿಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾಮಟ್ಟದ ಸರ್ಕಾರಿ ಅಧಿಕಾರಿಗಳು, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಸಮಿತಿಯಲ್ಲಿ ತಹಶೀಲ್ದಾರ್, ತಾಲ್ಲೂಕು ಮಟ್ಟದ ಸರ್ಕಾರದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಇರುತ್ತಾರೆ. ಗೃಹಲಕ್ಷ್ಮೀ ಫಲಾನುಭವಿಗಳ ಪತ್ತೆಗೆ ಮಾರ್ಗಸೂಚಿ ಪ್ರಕಟ: 1. ಆಹಾರ ಇಲಾಖೆಯ ಡೇಟಾನಲ್ಲಿ ಲಭ್ಯವಿರುವ ಬಯೋಮೆಟ್ರಿಕ್ ದೃಢೀಕರಣದ ಮೂಲಕ ಫಲಾನುಭವಿಗಳನ್ನ ಪತ್ತೆ ಹಚ್ಚಬೇಕು 2. ಪ್ರತಿ ನ್ಯಾಯಬೆಲೆ ಅಂಗಡಿಗಳ ಮೂಲಕ ಬಯೋಮೆಟ್ರಿಕ್ ಪರಿಶೀಲಿಸಿ, ಗುರುತು ಹಚ್ಚಬೇಕು 3. ಆಹಾರ ಇಲಾಖೆಯ ಡೇಟಾ ಬೇಸ್ನಲ್ಲಿ ಬಯೋಮೆಟ್ರಿಕ್ ಇರುವ ಫಲಾನುಭವಿ ಗೃಹಲಕ್ಷ್ಮೀ ಯೋಜನೆಗೆ ಬಯೋಮೆಟ್ರಿಕ್ ಕೊಡಬೇಕು 4. ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಕರ್ನಾಟಕ ಒನ್ಗಳಲ್ಲಿ ಬಯೋಮೆಟ್ರಿಕ್ ಕೊಡಬೇಕು 5. ಗೃಹಲಕ್ಷ್ಮೀ ಫಲಾನುಭವಿಗಳು ಸ್ವಇಚ್ಛೆಯಿಂದ ಸೌಲಭ್ಯ ನಿರಾಕರಿಸಬಹುದು.ಇದನ್ನೂ ಓದಿ: ಅಸಮಾಧಾನದಿಂದಲೇ ಸಿಎಂ ಮನೆಯಿಂದ ಹೊರನಡೆದ ಬಸವರಾಜ ಹೊರಟ್ಟಿ; ಅವಿಶ್ವಾಸ ನಿರ್ಣಯದ ಸವಾಲು ಗೃಹಲಕ್ಷ್ಮೀ ಯೋಜನೆಯ ಮರು ಪರಿಶೀಲನೆ ವೇಳೆ ಏನೆಲ್ಲ ಮಾಹಿತಿ ಸಂಗ್ರಹ: 1.ಪಿಂಚಣಿದಾರರು 2.ಐಟಿದಾರರು 3.ಜಿಎಸ್ಟಿದಾರರು 4.ಸರ್ಕಾರಿ ಸೇವೆಯಲ್ಲಿ ಇರುವವರ ಮಾಹಿತಿ 5.ನಿವೃತ್ತಿ ಪಿಂಚಣಿ ಪಡೆಯುತ್ತಿರುವವರ ಮಾಹಿತಿ ಸಂಗ್ರಹಕ್ಕೆ ಸೂಚನೆ 6.ಭಾವಚಿತ್ರದ ಜೊತೆಗೆ ಮತದಾರರ ಗುರುತಿನ ಚೀಟಿ.ಇದನ್ನೂ ಓದಿ: ಪೆಟ್ರೋಲ್ ವಾಹನಗಳಿಗೆ ಟಕ್ಕರ್ – ಪರ್ಯಾಯ ಇಂಧನ ವಾಹನಗಳ ಮಾರಾಟ ಭಾರೀ ಏರಿಕೆ