ಚಿಕ್ಕೋಡಿ ಪಟ್ಟಣದಲ್ಲಿ ಸುಗಮ ಸಂಚಾರ ಮರೀಚಿಕೆ; ರಸ್ತೆ ಗುಂಡಿಗಳಿಂದ ಜನರಿಗೆ ತೊಂದರೆ
ಚಿಕ್ಕೋಡಿ: ಜಿಲ್ಲಾ ಕೇಂದ್ರದ ಅರ್ಹತೆ ಹೊಂದಿರುವ ಪಟ್ಟಣದಲ್ಲಿ ಸುಗಮ ಸಂಚಾರ ಮರೀಚಿಕೆಯಾಗಿದೆ.ಪಟ್ಟಣದ ಹೃದಯಭಾಗವಾದ ಬಸವೇಶ್ವರ ವೃತ್ತದಲ್ಲಿ ಸಂಚರಿಸಲು ಸವಾರರು ಮತ್ತು ಪಾದಚಾರಿಗಳು ಪರದಾಡುವಂತಾಗಿದೆ. ಇಲ್ಲಿನ ಬಹುತೇಕ ಮುಖ್ಯರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಇನ್ನೊಂದೆಡೆ ಕೆಲವು ಕಡೆ ಬೇಕಾಬಿಟ್ಟಿಯಾಗಿ ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿರುವುದು ಕಂಡುಬರುತ್ತದೆ. ಏಕ

ಚಿಕ್ಕೋಡಿ: ಜಿಲ್ಲಾ ಕೇಂದ್ರದ ಅರ್ಹತೆ ಹೊಂದಿರುವ ಪಟ್ಟಣದಲ್ಲಿ ಸುಗಮ ಸಂಚಾರ ಮರೀಚಿಕೆಯಾಗಿದೆ.ಪಟ್ಟಣದ ಹೃದಯಭಾಗವಾದ ಬಸವೇಶ್ವರ ವೃತ್ತದಲ್ಲಿ ಸಂಚರಿಸಲು ಸವಾರರು ಮತ್ತು ಪಾದಚಾರಿಗಳು ಪರದಾಡುವಂತಾಗಿದೆ. ಇಲ್ಲಿನ ಬಹುತೇಕ ಮುಖ್ಯರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಇನ್ನೊಂದೆಡೆ ಕೆಲವು ಕಡೆ ಬೇಕಾಬಿಟ್ಟಿಯಾಗಿ ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿರುವುದು ಕಂಡುಬರುತ್ತದೆ. ಏಕಮುಖ ಸಂಚಾರ ಇದ್ದೂ ಇಲ್ಲದಂತಾಗಿದೆ.ಪಟ್ಟಣದ ಪ್ರತಿ ಪ್ರಮುಖ ರಸ್ತೆಯಲ್ಲೂ ಸವಾರರು ಗುಂಡಿ ತಪ್ಪಿಸಿ ವಾಹನ ಚಲಾಯಿಸಲು ಪ್ರಯಾಸ ಪಡುತ್ತಿದ್ದಾರೆ.ಮಳೆಗಾಲದಲ್ಲಿ ರಸ್ತೆಯಲ್ಲಿ ಬಿದ್ದಿರುವ ಹೊಂಡಗಳಲ್ಲಿ ಎಮ್ಮೆ, ದನ–ಕರುಗಳು ವಿರಮಿಸುತ್ತಿವೆ. ರಸ್ತೆಪಕ್ಕ ಮಳೆ ನೀರು ಸುಲಭವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಕಾರಣ.ನಿಪ್ಪಾಣಿ-ಮುಧೋಳ ಹಾಗೂ ಸಂಕೇಶ್ವರ-ಜೇವರ್ಗಿ ರಾಜ್ಯ ಹೆದ್ದಾರಿಗಳು ಸಂಧಿಸಿರುವ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜನದಟ್ಟಣೆ ಹಾಗೂ ವಾಹನ ದಟ್ಟಣೆ ಹೆಚ್ಚಿದ್ದು, ಬೀಡಾಡಿ ದನಗಳ ಹಾವಳಿಯೂ ವಿಪರೀತವಾಗಿದೆ.40 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ಸಂಚಾರ ಪೊಲೀಸ್ ಠಾಣೆ ಒಂದು ದಶಕದಿಂದ ಕಾರ್ಯನಿರ್ವಹಣೆ ಮಾಡುತ್ತಿದೆ. ಆದರೆ, ಸಂಚಾರ ನಿಯಮ ಪಾಲನೆ ಎಂಬುದು ನೆಪ ಮಾತ್ರಕ್ಕೆ ಸೀಮಿತವಾಗಿದೆ.ಕೆ.ಸಿ. ರಸ್ತೆ ಸೇರಿ ಪಟ್ಟಣದ ಹಲವು ಕಡೆಗೆ ದಿನ ಬಿಟ್ಟು ದಿನ ವಾಹನಗಳ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಇದನ್ನು ಸಮರ್ಪಕ ನಿರ್ವಹಣೆ ಮಾಡುತ್ತಿಲ್ಲ.ಚಿಕ್ಕೋಡಿ ಸಂಚಾರ ಠಾಣೆಯಲ್ಲಿ ಪಿಎಸ್ಐ, ಮೂವರು ಎಎಸ್ಐ, 9 ಹೆಡ್ ಕಾನ್ಸ್ಟೆಬಲ್, 18 ಕಾನ್ಸ್ಟೆಬಲ್ ಇದ್ದಾರೆ. ಇಷ್ಟೊಂದು ಪ್ರಮಾಣದ ಸಿಬ್ಬಂದಿ ಇದ್ದರೂ ಸಂಚಾರ ವ್ಯವಸ್ಥೆ ಸಮರ್ಪಕ ನಿರ್ವಹಣೆಯಾಗದ್ದಕ್ಕೆ ಬೈಕ್ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ.ಕಾಜಲ್ ಕದಂ, ವಾಹನ ಸವಾರರುಚಿಕ್ಕೋಡಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹೊಂಡಗಳು ಬಿದ್ದಿದ್ದು, ಸುಗಮ ಸಂಚಾರ ಮರೀಚಿಕೆಯಾಗಿದೆ. ಸಂಬಂಧಿತ ಅಧಿಕಾರಿಗಳು ಇತ್ತ ಗಮನ ಹರಿಸಿ ವ್ಯವಸ್ಥೆ ಸುಧಾರಿಸಬೇಕು ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260807-21-1790676846