ಪತ್ನಿ ಕೊಂದ ಪತಿ ಬಂಧನ: ಬೆಡ್ಶೀಟ್ನಲ್ಲಿ ಮೃತದೇಹ ಸುತ್ತಿಟ್ಟಿದ್ದ ಆರೋಪಿ
ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಿ ಮೃತದೇಹವನ್ನು ಬೆಡ್ಶೀಟ್ನಲ್ಲಿ ಸುತ್ತಿಟ್ಟು ಪರಾರಿಯಾಗಿದ್ದ ಪತಿಯನ್ನು ಕುಂಬಳಗೋಡು ಠಾಣೆ ಪೊಲೀಸರು, ಬಿಹಾರದಲ್ಲಿ ಬಂಧಿಸಿದ್ದಾರೆ.ಬಿಹಾರದ ಧೀರಜ್ಕುಮಾರ್ (24) ಬಂಧಿತ ಆರೋಪಿ. ರೀಮಾ ಕುಮಾರಿ (20) ಕೊಲೆಯಾದ ಮಹಿಳೆ.ಗೇರುಪಾಳ್ಯದ ಬಾಡಿಗೆ ಮನೆಯಲ್ಲಿ ದಂಪತಿ ನೆಲಸಿದ್ದರು. ರೀಮಾ ಕುಮಾರಿ ಅವರನ್ನು ಜು.27ರಂದು ಕೊಲೆ ಮಾಡಿ ಆರೋಪ

ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಿ ಮೃತದೇಹವನ್ನು ಬೆಡ್ಶೀಟ್ನಲ್ಲಿ ಸುತ್ತಿಟ್ಟು ಪರಾರಿಯಾಗಿದ್ದ ಪತಿಯನ್ನು ಕುಂಬಳಗೋಡು ಠಾಣೆ ಪೊಲೀಸರು, ಬಿಹಾರದಲ್ಲಿ ಬಂಧಿಸಿದ್ದಾರೆ.ಬಿಹಾರದ ಧೀರಜ್ಕುಮಾರ್ (24) ಬಂಧಿತ ಆರೋಪಿ. ರೀಮಾ ಕುಮಾರಿ (20) ಕೊಲೆಯಾದ ಮಹಿಳೆ.ಗೇರುಪಾಳ್ಯದ ಬಾಡಿಗೆ ಮನೆಯಲ್ಲಿ ದಂಪತಿ ನೆಲಸಿದ್ದರು. ರೀಮಾ ಕುಮಾರಿ ಅವರನ್ನು ಜು.27ರಂದು ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ವಿಶೇಷ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಿಹಾರದಲ್ಲಿ ಬಂಧಿಸಿದೆ ಎಂದು ಮೂಲಗಳು ಹೇಳಿವೆ.ಸ್ನೇಹಿತೆ ಕರೆ ಮಾಡಿದರೂ ರೀಮಾ ಕುಮಾರಿ ಅವರು ಕರೆ ಸ್ವೀಕರಿಸದಿದ್ದಾಗ ಅನುಮಾನಗೊಂಡು ಮನೆ ಬಳಿ ಬಂದು ಪರಿಶೀಲಿಸಿದಾಗ ಕೊಲೆ ಮಾಡಿ ಮೃತದೇಹವನ್ನು ಬೆಡ್ಶೀಟ್ನಲ್ಲಿ ಸುತ್ತಿಟ್ಟಿರುವುದು ಪತ್ತೆಯಾಗಿತ್ತು ಎಂದು ಮೂಲಗಳು ಹೇಳಿವೆ.‘ಕೆಲಸ ಅರಸಿಕೊಂಡು ಕಳೆದ ಡಿಸೆಂಬರ್ನಲ್ಲಿ ಬಿಹಾರದಿಂದ ದಂಪತಿ ನಗರಕ್ಕೆ ಬಂದಿದ್ದರು. ಗೇರುಪಾಳ್ಯದಲ್ಲಿ ಲಕ್ಷ್ಮಣ್ ಅವರ ಮನೆಯನ್ನು ಬಾಡಿಗೆಗೆ ಪಡೆದು ವಾಸವಾಗಿದ್ದರು. ರೀಮಾಕುಮಾರಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಧೀರಜ್ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಕೌಟುಂಬಿಕ ವಿಷಯಗಳಿಗೆ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು’ ಎಂದು ಪೊಲೀಸರು ಹೇಳಿದರು.‘ರೀಮಾ ಕುಮಾರಿ ಅವರನ್ನು ಆರೋಪಿ ಪ್ರೀತಿಸಿ ಮದುವೆಯಾಗಿದ್ದ. ಮನೆಯವರಿಗೆ ತಿಳಿಸದೇ ಬಿಹಾರದಿಂದ ನಗರಕ್ಕೆ ಕರೆದುಕೊಂಡು ಬಂದಿದ್ದ. ಆರಂಭದಲ್ಲಿ ದಂಪತಿ ಮಧ್ಯೆ ಯಾವುದೇ ಮನಸ್ತಾಪ ಇರಲಿಲ್ಲ. ಇತ್ತೀಚಿಗೆ ಕೌಟುಂಬಿಕ ವಿಚಾರಕ್ಕೆ ಜಗಳ ನಡೆದಿತ್ತು. ಗಲಾಟೆ ವಿಕೋಪಕ್ಕೆ ಹೋಗಿ ಕತ್ತು ಹಿಸುಕಿ ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.ರೀಮಾ ಕುಮಾರಿ ರೀಮಾಗೆ ‘ರೀಲ್ಸ್’ ಅಭ್ಯಾಸ ರೀಮಾ ಕುಮಾರಿ ಅವರು ‘ರೀಲ್ಸ್’ ಮಾಡಿ ಆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಮನೆಯಲ್ಲಿ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಸಮಯಕ್ಕೆ ಸರಿಯಾಗಿ ಅಡುಗೆಯನ್ನು ಮಾಡುತ್ತಿರಲಿಲ್ಲ. ಈ ವಿಚಾರಕ್ಕೆ ಧೀರಜ್ ಹಾಗೂ ರೀಮಾ ನಡುವೆ ಗಲಾಟೆ ನಡೆದಿತ್ತು. ರೀಮಾ ಅವರ ಸ್ನೇಹಿತೆಗೂ ರೀಲ್ಸ್ ವಿಚಾರವನ್ನು ಆರೋಪಿ ತಿಳಿಸಿದ್ದ ಎಂದು ಮೂಲಗಳು ಹೇಳಿವೆ.