ಎಸ್ಐಆರ್: ಅರ್ಹರ ಹೊರಗಿರಿಸಿದ ಚುನಾವಣಾ ಆಯೋಗ
ಬೆಂಗಳೂರು: ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಹೆಸರಿನಲ್ಲಿ ಅರ್ಹ ಮತದಾರರ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂಬ ಆರೋಪದ ಮಧ್ಯೆಯೇ, ರಾಜ್ಯದಲ್ಲಿ ‘ಪತ್ತೆಯಾಗದ ಅಥವಾ ಶಾಶ್ವತ ಸ್ಥಳಾಂತರ ಅಥವಾ ಇತರೆ’ ಎಂದು ಕರಡು ಮತದಾರರ ಪಟ್ಟಿಯಿಂದ ಅರ್ಹರನ್ನು ಹೊರಗೆ ಇಡಲಾಗುತ್ತಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.ಎಸ್ಐಆರ್ ಭಾಗವಾಗಿ ರಾಜ್ಯದಾದ್ಯಂತ ಈವರೆಗೆ 1.10 ಕೋಟಿಗೂ

ಬೆಂಗಳೂರು: ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಹೆಸರಿನಲ್ಲಿ ಅರ್ಹ ಮತದಾರರ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂಬ ಆರೋಪದ ಮಧ್ಯೆಯೇ, ರಾಜ್ಯದಲ್ಲಿ ‘ಪತ್ತೆಯಾಗದ ಅಥವಾ ಶಾಶ್ವತ ಸ್ಥಳಾಂತರ ಅಥವಾ ಇತರೆ’ ಎಂದು ಕರಡು ಮತದಾರರ ಪಟ್ಟಿಯಿಂದ ಅರ್ಹರನ್ನು ಹೊರಗೆ ಇಡಲಾಗುತ್ತಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.ಎಸ್ಐಆರ್ ಭಾಗವಾಗಿ ರಾಜ್ಯದಾದ್ಯಂತ ಈವರೆಗೆ 1.10 ಕೋಟಿಗೂ ಹೆಚ್ಚು ಮತದಾರರನ್ನು ಪತ್ತೆಯಾಗದ (ಆಬ್ಸೆಂಟ್–ಎ), ಶಾಶ್ವತ ಸ್ಥಳಾಂತರ (ಶಿಫ್ಟೆಡ್–ಎಸ್), ಮೃತ (ಡೈಡ್–ಡಿ), ಹೆಚ್ಚು ಕಡೆ ನೋಂದಣಿ (ಡೂಪ್ಲಿಕೇಟ್–ಡಿ) ಮತ್ತು ಇತರೆ (ಅದರ್ಸ್–ಒ)–ಎಎಸ್ಡಿಡಿಒ ಎಂದು ವರ್ಗೀಕರಿಸಲಾಗಿದೆ.‘ಎಎಸ್ಡಿಡಿಒ ವರ್ಗೀಕರಣ ಮಾಡುವಾಗ ಅರ್ಹ ಮತದಾರರನ್ನೂ ಸೇರಿಸಲಾಗಿದೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ದೂರು ಮತ್ತು ಆಕ್ಷೇಪಗಳು ಸಲ್ಲಿಕೆಯಾಗಿವೆ. ಈ ಆಕ್ಷೇಪಗಳು ನಿಜ ಎಂಬುದನ್ನು ಪುಷ್ಟೀಕರಿಸುವಂತೆ ಎಎಸ್ಡಿಡಿಒ ಮತಗಳ ‘ರೋಲ್ಬ್ಯಾಕ್’ಗೆ (ಮರು ಸೇರ್ಪಡೆ) ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಅವಕಾಶ ಕಲ್ಪಿಸಿದೆ. ಈ ವರ್ಗೀಕರಣದಲ್ಲಿ ಆಗಿದ್ದ ತಪ್ಪನ್ನು ಈಗ ಸರಿಪಡಿಸಲಾಗುತ್ತಿದೆ.ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಆಗಸ್ಟ್ 4ರ ಸಂಜೆ ನೀಡಿದ ಪ್ರಕಟಣೆಯಲ್ಲಿ ರಾಜ್ಯದಾದ್ಯಂತ ಎಎಸ್ಡಿಡಿಒ ಎಂದು ವರ್ಗೀಕರಿಸಲಾದ ಮತದಾರರ ಸಂಖ್ಯೆ 1.11 ಕೋಟಿಯಷ್ಟಿತ್ತು. ರೋಲ್ಬ್ಯಾಕ್ಗೆ ಅವಕಾಶ ನೀಡಿದ ನಂತರ ಎಎಸ್ಡಿಡಿಒ ಮತದಾರರ ಸಂಖ್ಯೆ 1.10 ಕೋಟಿಗೆ ಇಳಿಕೆಯಾಗಿದೆ.ಆಗಸ್ಟ್ 5 ಮತ್ತು 6ರಂದು ಒಟ್ಟು 69,524 ಮತದಾರರನ್ನು ಎಎಸ್ಡಿಡಿಒ ವರ್ಗೀಕರಣದಿಂದ ಹೊರಗೆ ತೆಗೆದು (ರೋಲ್ಬ್ಯಾಕ್), ಅವರ ಗಣತಿ ನಮೂನೆಗಳನ್ನು ಡಿಜಿಟಲೀಕರಿಸಲಾಗಿದೆ. ಇದೇ ಅವಧಿಯಲ್ಲಿ 12,175 ಮತದಾರರನ್ನು ಹೊಸದಾಗಿ ಎಎಸ್ಡಿಡಿಒ ಪಟ್ಟಿಗೆ ಸೇರಿಸಲಾಗಿದೆ.‘ಗಣತಿ ನಮೂನೆ ವಿತರಣೆ ವೇಳೆ ಪ್ರಗತಿ ತೋರಿಸಬೇಕು ಎಂಬ ಒತ್ತಡ ಇತ್ತು. ಹೀಗಾಗಿ ಬಿಎಲ್ಒ ಆ್ಯಪ್ನಲ್ಲಿ ‘ವಿತರಣೆ’ ಎಂದು ನಮೂದಿಸಿ. ಆನಂತರ ನಮೂನೆಯನ್ನು ವಿತರಿಸಿ. ಮತದಾರರು ಸಿಗದೇ ಇದ್ದರೆ, ಎಎಸ್ಡಿಡಿಒ ಎಂದು ವರ್ಗೀಕರಿಸಿ. ಆನಂತರ ಮತದಾರರು ಬಂದರೆ, ಅರ್ಜಿ ಸಂಖ್ಯೆ–8 (ತಿದ್ದುಪಡಿ) ಸಲ್ಲಿಸಲು ಹೇಳಿ ಎಂದು ಮೇಲಧಿಕಾರಿಗಳು ಸೂಚಿಸಿದ್ದರು. ಹೀಗಾಗಿ ಎಎಸ್ಡಿಡಿಒ ವರ್ಗೀಕರಣ ಮಾಡಿದ್ದೇವೆ’ ಎಂದು ಬೆಂಗಳೂರಿನ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಯೊಬ್ಬರು (ಬಿಎಲ್ಒ) ‘ಪ್ರಜಾವಾಣಿ’ಗೆ ತಿಳಿಸಿದರು. ಅವರ ಮತಗಟ್ಟೆಯಲ್ಲಿ 811 ಮತದಾರರು ಇದ್ದು, 501 ಮತಗಳನ್ನು ಎಎಸ್ಡಿಡಿಒ ಎಂದು ವರ್ಗೀಕರಿಸಲಾಗಿದೆ.ಬೆಂಗಳೂರಿನ ಒಂದು ವಿಧಾನಸಭಾ ಕ್ಷೇತ್ರದ ಮತಗಟ್ಟೆ ಒಂದರಲ್ಲಿ 1,582 ಮತಗಳು ಇದ್ದು, ಆ ಪೈಕಿ 864 ಮತದಾರರನ್ನು ಎಎಸ್ಡಿಡಿಒ ಎಂದು ವರ್ಗೀಕರಿಸಲಾಗಿದೆ. ಈ ಕುರಿತು ‘ಪ್ರಜಾವಾಣಿ’ ಪ್ರಶ್ನಿಸಿದಾಗ ಸಂಬಂಧಿತ ಬಿಎಲ್ಒ ಸಹ ಮೇಲಿನಂತೆಯೇ ಉತ್ತರಿಸಿದರು. 1.11 ಕೋಟಿಆಗಸ್ಟ್ 4ರ ಸಂಜೆ ವೇಳೆಗೆ ರಾಜ್ಯದಾದ್ಯಂತ ಎಎಸ್ಡಿಡಿಒ ಎಂದು ವರ್ಗೀಕರಿಸಲಾಗಿದ್ದ ಮತದಾರರ ಸಂಖ್ಯೆ 1.10 ಕೋಟಿಆಗಸ್ಟ್ 6ರ ಸಂಜೆ ವೇಳೆಗೆ ರಾಜ್ಯದಾದ್ಯಂತ ಎಎಸ್ಡಿಡಿಒ ಎಂದು ವರ್ಗೀಕರಿಸಲಾಗಿದ್ದ ಮತದಾರರ ಸಂಖ್ಯೆ 69524ಆಗಸ್ಟ್ 4–6ರ ಅವಧಿಯಲ್ಲಿ ಎಎಸ್ಡಿಡಿಒ ಪಟ್ಟಿಯಿಂದ ಹೊರಗೆ ತೆಗೆದು (ರೋಲ್ಬ್ಯಾಕ್) ಗಣತಿ ನಮೂನೆ ಡಿಜಿಟಲೀಕರಿಸಲಾದ ಮತದಾರರು 12175ಇದೇ ಅವಧಿಯಲ್ಲಿ ಎಎಸ್ಡಿಡಿಒ ಪಟ್ಟಿಗೆ ಹೊಸದಾಗಿ ಸೇರಿಸಲಾದ ಮತದಾರರು ಸರಿಪಡಿಸಲು ಎರಡು ದಿನವಷ್ಟೇ ಅವಕಾಶಎಎಸ್ಡಿಡಿಒ ಎಂದು ವರ್ಗೀಕರಿಸಲಾದ ಮತದಾರರ ವಿವರಗಳನ್ನು ಸಾರ್ವಜನಿಕರು ಪರಿಶೀಲಿಸಬಹುದಾಗಿದೆ. ceo.karnataka.gov.in ಜಾಲತಾಣದಲ್ಲಿ ‘ASDDO LIST‘ ಎಂಬ ಲಿಂಕ್ ಇದ್ದು ಲಿಂಕ್ ಅನ್ನು ಕ್ಲಿಕ್ ಮಾಡಿದರೆ ರಾಜ್ಯ ಎಲ್ಲ ಜಿಲ್ಲೆಗಳ ಪ್ರತ್ಯೇಕ ಲಿಂಕ್ಗಳು ತೆರೆದುಕೊಳ್ಳುತ್ತವೆ.ಆಯಾ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳ ಪ್ರತ್ಯೇಕ ಲಿಂಕ್ ತೆರೆದುಕೊಳ್ಳುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಗೂಗಲ್ ಡ್ರೈವ್ ತೆರೆದುಕೊಳ್ಳುತ್ತದೆ. ಅಲ್ಲಿ ಆ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಮತಗಟ್ಟೆಗೆ ಸಂಬಂಧಿಸಿದ ಎಎಸ್ಡಿಡಿಒ ಪಟ್ಟಿಯ ಪ್ರತ್ಯೇಕ ಕಡತಗಳು ಇದ್ದು ಅದನ್ನು ತೆರೆದು ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಬಹುದು.ಅರ್ಹರು ಈ ಪಟ್ಟಿಯಲ್ಲಿದ್ದರೆ ಅವರು ತಮ್ಮ ಮತಗಟ್ಟೆ ವ್ಯಾಪ್ತಿಯ ಸಹಾಯಕ ಮತದಾರರ ನೋಂದಣಾಧಿಕಾರಿ ಅಥವಾ ಮತದಾರರ ನೋಂದಣಾಧಿಕಾರಿಗೆ ಕರೆ ಮಾಡಿ ತಮ್ಮ ಗಣತಿ ನಮೂನೆಯನ್ನು ರೋಲ್ಬ್ಯಾಕ್ ಮಾಡಲು ಮನವಿ ಸಲ್ಲಿಸಬೇಕು. ಆನಂತರ ಗಣತಿ ನಮೂನೆಯನ್ನು ಭರ್ತಿ ಮಾಡಿ ಬಿಎಲ್ಒಗೆ ಸಲ್ಲಿಸಬೇಕು. ಈ ಕೆಲಸ ಮಾಡಲು ಆಗಸ್ಟ್ 7ರ ಶುಕ್ರವಾರ ಮತ್ತು ಆಗಸ್ಟ್ 8ರ ಶನಿವಾರವಷ್ಟೇ ಅವಕಾಶವಿದೆ. ‘ಅವಧಿ ವಿಸ್ತರಿಸಿ’‘ಎಎಸ್ಡಿಡಿಒ ಪಟ್ಟಿಯನ್ನು ಆಗಸ್ಟ್ 4ರಂದು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ಇನ್ನೂ ಹಲವು ಕ್ಷೇತ್ರಗಳ ಎಲ್ಲ ಮತಗಟ್ಟೆಗಳ ಎಎಸ್ಡಿಡಿಒ ಪಟ್ಟಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಜಾಲತಾಣದಲ್ಲಿ ಅಪ್ಲೋಡ್ ಆಗಿಲ್ಲ. ರೋಲ್ಬ್ಯಾಕ್ ಅವಕಾಶ ಆಗಸ್ಟ್ 8ಕ್ಕೆ ಮುಗಿಯಲಿದೆ. ಅರ್ಹರನ್ನೂ ಎಎಸ್ಡಿಡಿಒ ಎಂದು ವರ್ಗೀಕರಿಸಿದ್ದು ಎಲ್ಲರೂ ರೋಲ್ಬ್ಯಾಕ್ ಮಾಡಲು ಈ ಸಮಯ ಸಾಲುವುದಿಲ್ಲ. ಹೀಗಾಗಿ ಎಎಸ್ಡಿಡಿಒ ರೋಲ್ಬ್ಯಾಕ್ ಅವಧಿಯನ್ನು ವಿಸ್ತರಿಸಿ’ ಎಂದು ಕೆಲವು ಸಂಘಟನೆಗಳು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದೆ.ರಾಜ್ಯ ಮುಖ್ಯ ಚುನಾವಣಾಧಿಕಾರಿ ಅವರು ರಾಜಕೀಯ ಪಕ್ಷಗಳ ಜತೆಗೆ ಬುಧವಾರ ನಡೆಸಿದ ಸಭೆಯಲ್ಲಿಯೂ ಈ ವಿಷಯ ಚರ್ಚೆಯಾಗಿದೆ.