‘ಶಾಂತಿ ಕ್ರಾಂತಿ’ ಸಿನಿಮಾದಲ್ಲಿ ಬಾಲ ಕಲಾವಿದೆಯಾಗಿದ್ದ ಖ್ಯಾತ ನಟಿ ಯಾರು ಗೊತ್ತೇ?
ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ‘ಶಾಂತಿ ಕ್ರಾಂತಿ’ ಸಿನಿಮಾವನ್ನು ಮರುಬಿಡುಗಡೆ ಮಾಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಶುರುವಾಗಿದೆ. ಇದರ ನಡುವೆ ಇದೇ ಸಿನಿಮಾದಲ್ಲಿ ‘ಬರಿ ಬೆತ್ತಲೆ ಜನರ ನಡುವೆ’ ಹಾಡಿನ ಮೊದಲ ಸಾಲಿನಲ್ಲೇ ಕಮಲಿಯಾಗಿ ಬರುವ ಬಾಲ ಕಲಾವಿದೆ ಯಾರೆಂಬುದನ್ನು ನಟ ಮಾಸ್ಟರ್ ಆನಂದ್ ರಿವೀಲ್ ಮಾಡಿದ್ದಾರೆ.ಈ ಕುರಿತು ಇನ್ಸ್ಟಾಗ್ರಾಂನಲ್ಲಿ ವಿಡಿಯೊ

ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ‘ಶಾಂತಿ ಕ್ರಾಂತಿ’ ಸಿನಿಮಾವನ್ನು ಮರುಬಿಡುಗಡೆ ಮಾಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಶುರುವಾಗಿದೆ. ಇದರ ನಡುವೆ ಇದೇ ಸಿನಿಮಾದಲ್ಲಿ ‘ಬರಿ ಬೆತ್ತಲೆ ಜನರ ನಡುವೆ’ ಹಾಡಿನ ಮೊದಲ ಸಾಲಿನಲ್ಲೇ ಕಮಲಿಯಾಗಿ ಬರುವ ಬಾಲ ಕಲಾವಿದೆ ಯಾರೆಂಬುದನ್ನು ನಟ ಮಾಸ್ಟರ್ ಆನಂದ್ ರಿವೀಲ್ ಮಾಡಿದ್ದಾರೆ.ಈ ಕುರಿತು ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಿರುವ ಮಾಸ್ಟರ್ ಆನಂದ್ ಅವರು, ‘ಶಾಂತಿ ಕ್ರಾಂತಿ ಸಿನಿಮಾ ಮರು ಬಿಡುಗಡೆ ಆಗಬೇಕು. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ’ ಎಂದಿದ್ದಾರೆ. ಇದರ ಜೊತೆಗೆ ನಟಿ ಸಂಗೀತಾ ಅವರ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.'ಸೆರಗ ಸರ್ಸೆ'ವಿವಾದ: ಸರಿ ಮಾಡ್ಕೋತಾರೆ, ತಲೆಕೆಡಿಸಿಕೊಂಡ್ರೆ ಆಗಲ್ಲ; ರವಿಚಂದ್ರನ್ View this post on Instagram ವಿಡಿಯೊದಲ್ಲಿ ಮಾಸ್ಟರ್ ಆನಂದ್ ಹೇಳಿದ್ದೇನು?‘ಕಳೆದ 2-3 ದಿನಗಳಿಂದ ‘ಶಾಂತಿ ಕ್ರಾಂತಿ’ ಸಿನಿಮಾದ ಮರುಬಿಡುಗಡೆ ಮಾಡಬೇಕು ಎಂದು ಸಾಕಷ್ಟು ಜನರು ಟ್ಯಾಗ್ ಮಾಡುತ್ತಿದ್ದಾರೆ. ಈ ಚಿತ್ರದ ಮರುಬಿಡುಗಡೆಗೆ ಬೆಂಬಲಿಸುವುದು ನಮ್ಮ ಕರ್ತವ್ಯ. ಬಾಲ್ಯದಲ್ಲಿ ನಾವು ಬೆಳೆಯುವ ವಯಸ್ಸಿನಲ್ಲಿ ನಟಿಸಿರುವ ಸಿನಿಮಾ ಇದು. ಈ ಸಿನಿಮಾ ನಮಗೆ ಮತ್ತೆ ಸಿಹಿ ನೆನಪುಗಳನ್ನು ತಂದುಕೊಡುತ್ತದೆ ಎಂದರೆ ನಮ್ಮ ಕಡೆಯಿಂದ ಬೆಂಬಲ ಇರುತ್ತದೆ. ಆದರೆ, ಈ ಬಗ್ಗೆ ರವಿಚಂದ್ರನ್ ಅವರ ಕಡೆಯಿಂದ ಅಧಿಕೃತ ಮಾಹಿತಿ ಬರಬೇಕಿದೆ’ ಎಂದು ಆನಂದ್ ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಆನಂದ್, ‘ಶಾಂತಿ ಕ್ರಾಂತಿ ಚಿತ್ರೀಕರಣದ ಸಮಯದಲ್ಲಿ ನನ್ನಂತೆಯೇ ಬಾಲ ಕಲಾವಿದೆಯಾಗಿ ನಟಿಸಿದ್ದ ಕಮಲಿ (ಸಂಗೀತಾ) ಅವರು, ನನ್ನನ್ನು ನಿಮ್ಮ ಸಿನಿಮಾಗೆ ನಾಯಕಿ ಮಾಡೋದಿಲ್ವಾ ಎಂದು ರವಿಚಂದ್ರನ್ ಸರ್ ಅವರನ್ನು ಕೇಳಿದ್ದರು. ಅದಕ್ಕೆ ರವಿ ಸರ್, ನಿನಗೆ ಈಗ ಎಷ್ಟು ವಯಸ್ಸು? 8 ವರ್ಷ ಅಲ್ವಾ? ಇನ್ನೊಂದು 8 ವರ್ಷ ಬಿಟ್ಟು ಬಾ, ನಿನ್ನನ್ನ ನಾಯಕಿ ಮಾಡುತ್ತೇನೆ ಎಂದಿದ್ದರು. ಅಚ್ಚರಿ ಎಂಬಂತೆ 1991ರಲ್ಲಿ ಶಾಂತಿ ಕ್ರಾಂತಿ ಬಿಡುಗಡೆಯಾದ ನಂತರ, 8 ವರ್ಷಗಳ ಬಳಿಕ (1998ರಲ್ಲಿ) ‘ಯಾರೇ ನೀನು ಚೆಲುವೆ’ ಚಿತ್ರದ ಮೂಲಕ ಸಂಗೀತಾ ಅವರನ್ನು ರವಿ ಸರ್ ನಾಯಕಿಯನ್ನಾಗಿ ಮಾಡಿದರು’ ಎಂದು ನೆನಪಿಸಿಕೊಂಡರು.ಮಾಸ್ಟರ್ ಆನಂದ್ ಪುತ್ರಿ ಹೆಸರು ಹೇಳಿಕೊಂಡು ವಂಚನೆ: ನಿಶಾ ವಿರುದ್ಧ 30 ಮಂದಿ ದೂರುಮಾಸ್ಟರ್ ಆನಂದ್ ಪುತ್ರಿ, ಬಾಲನಟಿ ವಂಶಿಕಾ ಹೆಸರಿನಲ್ಲಿ ವಂಚನೆ: ಎಫ್ಐಆರ್ನಟಿ ಸಂಗೀತ ಮಾಧವನ್ಸದ್ಯ ನಟಿ ಸಂಗೀತ ಮಾಧವನ್ ನಾಯರ್ ಅವರು ಕನ್ನಡ, ಮಲಯಾಳಂ ಮತ್ತು ತಮಿಳು ಸಿನಿಮಾಗಳಲ್ಲೂ ನಟಿಸಿ ಖ್ಯಾತಿ ಪಡೆದುಕೊಂಡಿದ್ದಾರೆ. ಬರೋಬ್ಬರಿ 25 ವರ್ಷಗಳ ಬಳಿಕ ಸಂಗೀತಾ ಮಾಧವನ್ ನಾಯರ್ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಇನ್ನೂ ಶೀರ್ಷಿಕೆ ಇಡದ ಚಿತ್ರದಲ್ಲಿ ಭಾಗ್ಯ ಎಂಬ ಪಾತ್ರದಲ್ಲಿ ಸಂಗೀತಾ ಮಾಧವನ್ ನಾಯರ್ ನಟಿಸುತ್ತಿದ್ದಾರೆ. ನಾಯಕನ ತಾಯಿಯಾಗಿ ಅವರು ಜೀವ ತುಂಬಲಿದ್ದಾರೆ.