25 ಮಾನಸಿಕ ಅಸ್ವಸ್ಥರ ಆಹುತಿ
25 ವರ್ಷಗಳ ಹಿಂದೆ; ಮಂಗಳವಾರ, 7–8–200125 ಮಾನಸಿಕ ಅಸ್ವಸ್ಥರ ಆಹುತಿ ರಾಮನಾಥಪುರಂ (ತಮಿಳುನಾಡು) ಆಗಸ್ಟ್ 6 (ಪಿಟಿಐ, ಯುಎನ್ಐ)– ಇಲ್ಲಿಂದ 25 ಕಿ.ಮೀ. ದೂರದ ಎರ್ವಾಡಿ ದರ್ಗಾದ ಬಳಿಯ ಮಾನಸಿಕ ಅಸ್ವಸ್ಥರ ನಿಲಯವೊಂದರಲ್ಲಿ ಇಂದು ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಕನಿಷ್ಠ 25 ಮಂದಿ ಮಾನಸಿಕ ಅಸ್ವಸ್ಥರು ಸಜೀವದಹನಗೊಂಡ ದಾರುಣ ಘಟನೆ ನಡೆದಿದೆ.ಮುಂಜಾನೆ 5 ಗಂಟೆಗೆ ಈ ದು

25 ವರ್ಷಗಳ ಹಿಂದೆ; ಮಂಗಳವಾರ, 7–8–200125 ಮಾನಸಿಕ ಅಸ್ವಸ್ಥರ ಆಹುತಿ ರಾಮನಾಥಪುರಂ (ತಮಿಳುನಾಡು) ಆಗಸ್ಟ್ 6 (ಪಿಟಿಐ, ಯುಎನ್ಐ)– ಇಲ್ಲಿಂದ 25 ಕಿ.ಮೀ. ದೂರದ ಎರ್ವಾಡಿ ದರ್ಗಾದ ಬಳಿಯ ಮಾನಸಿಕ ಅಸ್ವಸ್ಥರ ನಿಲಯವೊಂದರಲ್ಲಿ ಇಂದು ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಕನಿಷ್ಠ 25 ಮಂದಿ ಮಾನಸಿಕ ಅಸ್ವಸ್ಥರು ಸಜೀವದಹನಗೊಂಡ ದಾರುಣ ಘಟನೆ ನಡೆದಿದೆ.ಮುಂಜಾನೆ 5 ಗಂಟೆಗೆ ಈ ದುರಂತ ಸಂಭವಿಸಿದೆ. ಬೆಂಕಿಗೆ ಆಹುತಿಯಾದವರಲ್ಲಿ 11 ಮಹಿಳೆಯರು ಸೇರಿದ್ದಾರೆ. ಈ ನತದೃಷ್ಟಕರ ನಿವಾಸದಲ್ಲಿದ್ದ 46ಕ್ಕೂ ಹೆಚ್ಚು ಮಂದಿ ಮಾನಸಿಕ ಅಸ್ವಸ್ಥರನ್ನು ಸರಪಳಿಯಿಂದ ಅಲ್ಲಿನ ರೂಢಿಯಂತೆ ಕಟ್ಟಲಾಗಿತ್ತು.ದರ್ಗಾಕ್ಕೆ ಹೊಂದಿಕೊಂಡು ಇರುವ ಈ ನಿಲಯವನ್ನು ಖಾಸಗಿ ಸಂಸ್ಥೆಯೊಂದು ನಡೆಸುತ್ತಿದೆ. ಸರಪಳಿಯಿಂದ ಅವರನ್ನು ಬಿಗಿಯಾಗಿ ಕಟ್ಟಿಹಾಕಿದ್ದ ಕಾರಣ ಬೆಂಕಿಯಿಂದ ತಪ್ಪಿಸಿಕೊಂಡು ಓಡಲು ಅವರಿಂದ ಸಾಧ್ಯವಾಗಿಲ್ಲ. ಐದು ಜನರು ತೀವ್ರ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಕ್ರಿಕೆಟ್ ಬೆಟ್ಟಿಂಗ್: ವ್ಯಕ್ತಿ ಬಂಧನಬೆಳಗಾವಿ, ಆಗಸ್ಟ್ 6– ನಿನ್ನೆ ಕೊಲಂಬೊದಲ್ಲಿ ನಡೆದ ಭಾರತ–ಲಂಕಾ ಮಧ್ಯದ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯದ ಫಲಿತಾಂಶದ ಮೇಲೆ ನಗರದ ಮನೆಯೊಂದರಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಆತನಿಂದ ಬೆಟ್ಟಿಂಗ್ಗೆ ಸಂಬಂಧಿಸಿದ ರಿಜಿಸ್ಟರ್, ಮೊಬೈಲ್ ಹಾಗೂ ಇತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.