ಚಾಮುಂಡಿಬೆಟ್ಟದಲ್ಲಿ ‘ಸಿದ್ಧಕುಂಜಿಕಾ’ ಪಾರಾಯಣ ಆಗಸ್ಟ್ 11ರಂದು
ಮೈಸೂರು: ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಇಲ್ಲಿನ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಆ.11ರಂದು ಇದೇ ಪ್ರಥಮ ಬಾರಿಗೆ ‘ಸಿದ್ಧಕುಂಜಿಕಾ’ ಪಾರಾಯಣ ಮತ್ತು ನೃತ್ಯರೂಪಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.https://utsava.milieumedia.in/ ಮೂಲಕ ನೋಂದಾಯಿಸಿಕೊಳ್ಳಬಹುದು. ನೋಂದಾಯಿಸಿದವರು ಅಂದು ಬೆಳಿಗ್ಗೆ 8ಕ್ಕೆ ದೇವಾಲಯದ ಮುಂಭಾಗದಲ್ಲಿ ಹಾಜರಿ

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಇಲ್ಲಿನ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಆ.11ರಂದು ಇದೇ ಪ್ರಥಮ ಬಾರಿಗೆ ‘ಸಿದ್ಧಕುಂಜಿಕಾ’ ಪಾರಾಯಣ ಮತ್ತು ನೃತ್ಯರೂಪಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.https://utsava.milieumedia.in/ ಮೂಲಕ ನೋಂದಾಯಿಸಿಕೊಳ್ಳಬಹುದು. ನೋಂದಾಯಿಸಿದವರು ಅಂದು ಬೆಳಿಗ್ಗೆ 8ಕ್ಕೆ ದೇವಾಲಯದ ಮುಂಭಾಗದಲ್ಲಿ ಹಾಜರಿರಬೇಕು. ಹಳದಿ ಅಥವಾ ಕೆಂಪು ಬಣ್ಣದ ಉಡುಪನ್ನು ಧರಿಸಿ ಪಾಲ್ಗೊಳ್ಳಬೇಕು. ನೋಂದಣಿ ಮಾಡಿದ ಭಕ್ತರಿಗೆ ದೇವಿಯ ವಿಶೇಷ ದರ್ಶನದ ವ್ಯವಸ್ಥೆ ಮಾಡಲಾಗುವುದು. ಕಾರ್ಯಕ್ರಮದ ನಂತರ ಎಲ್ಲರಿಗೂ ಲಘು ಉಪಾಹಾರ ಹಾಗೂ ನೀರಿನ ವ್ಯವಸ್ಥೆ ಇರಲಿದೆ ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
Read the complete story at Prajavani