ಸಚಿವ ಸಂಪುಟ | ನನ್ನ ಅವಶ್ಯಕತೆ ಇರಲಿಲ್ಲವೇನೋ, ಕೈಬಿಟ್ಟರು: ಮಂಕಾಳ ವೈದ್ಯ
ಮೈಸೂರು: ‘ನನ್ನ ಅವಶ್ಯಕತೆ ಇರಲಿಲ್ಲವೇನೋ ಅದಕ್ಕಾಗಿ ನನ್ನ ಹೆಸರನ್ನು ಕೊನೆ ಕ್ಷಣದಲ್ಲಿ ಕೈ ಬಿಟ್ಟರು. ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದಿರುವುದರ ಹಿಂದಿನ ಉದ್ದೇಶವೇನು ಎಂಬುದು ಗೊತ್ತಿಲ್ಲ’ ಎಂದು ಶಾಸಕ ಮಂಕಾಳ ವೈದ್ಯ ಹೇಳಿದರು.ಇಲ್ಲಿನ ಚಾಮುಂಡಿಬೆಟ್ಟದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ‘ಯಾರಿಗೆ, ಯಾವ ಪ್ರದೇಶಕ್ಕೆ ಅನ್ಯಾಯ ಆಯಿತು ಎಂಬುದನ್ನು ಹೇಳಿದರೆ ಅದು ಮಾತಿನ

ಮೈಸೂರು: ‘ನನ್ನ ಅವಶ್ಯಕತೆ ಇರಲಿಲ್ಲವೇನೋ ಅದಕ್ಕಾಗಿ ನನ್ನ ಹೆಸರನ್ನು ಕೊನೆ ಕ್ಷಣದಲ್ಲಿ ಕೈ ಬಿಟ್ಟರು. ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದಿರುವುದರ ಹಿಂದಿನ ಉದ್ದೇಶವೇನು ಎಂಬುದು ಗೊತ್ತಿಲ್ಲ’ ಎಂದು ಶಾಸಕ ಮಂಕಾಳ ವೈದ್ಯ ಹೇಳಿದರು.ಇಲ್ಲಿನ ಚಾಮುಂಡಿಬೆಟ್ಟದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ‘ಯಾರಿಗೆ, ಯಾವ ಪ್ರದೇಶಕ್ಕೆ ಅನ್ಯಾಯ ಆಯಿತು ಎಂಬುದನ್ನು ಹೇಳಿದರೆ ಅದು ಮಾತಿನಲ್ಲಷ್ಟೆ ಉಳಿಯುತ್ತದೆ. ಜನರೇ ಎಲ್ಲವನ್ನೂ ತೀರ್ಮಾನಿಸುತ್ತಾರೆ’ ಎಂದರು. ‘ಮಂತ್ರಿಯಾಗಿ ಮೂರು ವರ್ಷ ಒಳ್ಳೆಯ ಕೆಲಸ ಮಾಡಿದ್ದೇನೆ. ಕೆಟ್ಟ ಹೆಸರನ್ನೇನೂ ತೆಗೆದುಕೊಂಡಿಲ್ಲ. ಅಷ್ಟು ಸಾಕು. ಅಂದು ಬೆಳಿಗ್ಗೆ 10ಕ್ಕೆ ಮುಖ್ಯಮಂತ್ರಿಯೇ ಫೋನ್ ಮಾಡಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆ ಬನ್ನಿ ಎಂದು ಕರೆದಿದ್ದರು. 11 ಗಂಟೆಗೆ ಮತ್ತೆ ಫೋನ್ ಮಾಡಿ, ನಿಮ್ಮ ಹೆಸರು ಕೈ ಬಿಟ್ಟಿದ್ದೇವೆ; ಮಲ್ಲಣ್ಣಗೆ (ಎಸ್.ಎಸ್. ಮಲ್ಲಿಕಾರ್ಜುನ) ಅವಕಾಶ ಕೊಟ್ಟಿದ್ದೇವೆ ಎಂದರು. ಈ ಅವಧಿಯಲ್ಲಿ ಏನೇನು ನಡೆಯಿತು ಎಂಬುದು ಗೊತ್ತಿಲ್ಲ’ ಎಂದು ಪ್ರತಿಕ್ರಿಯಿಸಿದರು.
Read the complete story at Prajavani