ಡಾರ್ಕ್ ಪ್ಯಾಟರ್ನ್ಸ್: 7 ಕಂಪನಿಗೆ ದಂಡ
ನವದೆಹಲಿ : ‘ಡಾರ್ಕ್ ಪ್ಯಾಟರ್ನ್ಸ್’ ಅನುಸರಿಸುತ್ತಿರುವ ಜೆಪ್ಟೊ ಸೇರಿದಂತೆ ಏಳು ಇ–ಕಾಮರ್ಸ್ ಕಂಪನಿಗಳಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಒಟ್ಟು ₹20 ಲಕ್ಷ ದಂಡ ವಿಧಿಸಿದೆ.ಜೆಪ್ಟೊ, ಫಿಸಿಕ್ಸ್ ವಲ್ಲಾಹ್, ಅನುಜ್ ಜಿಂದಾಲ್, ಫಸ್ಟ್ಕ್ರೈ, ಫಾರ್ಮಾಈಸಿ, ಮ್ಯಾಕ್ಅಫೀ ಮತ್ತು ಸ್ಪೈಸ್ಜೆಟ್ಗೆ ದಂಡ ವಿಧಿಸಿದೆ. ಇಂಟರ್ಗ್ಲೋಬ್ ಏವಿಯೇಷನ್ ಮತ್ತು ಬುಕ
ನವದೆಹಲಿ : ‘ಡಾರ್ಕ್ ಪ್ಯಾಟರ್ನ್ಸ್’ ಅನುಸರಿಸುತ್ತಿರುವ ಜೆಪ್ಟೊ ಸೇರಿದಂತೆ ಏಳು ಇ–ಕಾಮರ್ಸ್ ಕಂಪನಿಗಳಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಒಟ್ಟು ₹20 ಲಕ್ಷ ದಂಡ ವಿಧಿಸಿದೆ.ಜೆಪ್ಟೊ, ಫಿಸಿಕ್ಸ್ ವಲ್ಲಾಹ್, ಅನುಜ್ ಜಿಂದಾಲ್, ಫಸ್ಟ್ಕ್ರೈ, ಫಾರ್ಮಾಈಸಿ, ಮ್ಯಾಕ್ಅಫೀ ಮತ್ತು ಸ್ಪೈಸ್ಜೆಟ್ಗೆ ದಂಡ ವಿಧಿಸಿದೆ. ಇಂಟರ್ಗ್ಲೋಬ್ ಏವಿಯೇಷನ್ ಮತ್ತು ಬುಕ್ಮೈಶೋ ಕಂಪನಿಗಳಿಗೆ ನೋಟಿಸ್ ನೀಡಿದೆ.ಜೆಪ್ಟೊ ಕಂಪನಿಗೆ ಗರಿಷ್ಠ ₹7 ಲಕ್ಷ ದಂಡ ವಿಧಿಸಿದೆ.ಏನಿದು ಡಾರ್ಕ್ ಪ್ಯಾಟರ್ನ್ಸ್: ಗ್ರಾಹಕರಿಗೆ ಸುಳ್ಳು ಮಾಹಿತಿ ನೀಡುವುದು, ತುರ್ತಾಗಿ ಪ್ರತಿಕ್ರಿಯಿಸುವಂತೆ ‘ಅಲರ್ಟ್’ಗಳನ್ನು ರವಾನಿಸುವುದು, ಚಂದಾದಾರರಾಗುವಂತೆ ಪ್ರೇರೇಪಿಸಿ, ನಂತರ ಚಂದಾದಾರಿಕೆ ರದ್ದು ಮಾಡಲು ಬರದಂತೆ ಮಾಡುವುದು, ಆರಂಭದಲ್ಲಿ ವಸ್ತುಗಳ ದರ ಕಡಿಮೆ ಇರುವಂತೆ ತೋರಿಸಿ ನಂತರ ಹೆಚ್ಚುವರಿ ವೆಚ್ಚಗಳನ್ನು ಸೇರಿಸಿ ಕೊನೆಯಲ್ಲಿ ಹೆಚ್ಚಿನ ದರ ವಸೂಲಿ ಮಾಡುವಂತಹ ಪರಿಪಾಟಗಳನ್ನು ಕೆಲ ಇ–ಕಾಮರ್ಸ್ ಕಂಪನಿಗಳು ಅನುಸರಿಸುತ್ತವೆ. ಈ ವಿಧಾನವನ್ನು ‘ಡಾರ್ಕ್ ಪ್ಯಾಟರ್ನ್ಸ್’ ಎನ್ನಲಾಗುತ್ತದೆ.
Read the complete story at Prajavani