ಅರ್ಹರಿಗೆ ಸಚಿವ ಸ್ಥಾನ ಸಿಗದೇ ಇರುವುದು ಇಡೀ ದೇಶದಲ್ಲಿನ ಸಮಸ್ಯೆ: ಅಜಯ್ ಸಿಂಗ್
ರಾಯಚೂರು: ಅರ್ಹರಿಗೆ ಸಚಿವ ಸ್ಥಾನ ಸಿಗದೇ ಇರುವುದು ಕೇವಲ ನಮ್ಮ ರಾಜ್ಯ ಅಥವಾ ಕಾಂಗ್ರೆಸ್ (Congress) ಪಕ್ಷದ ಸಮಸ್ಯೆಯಲ್ಲ. ಇಡೀ ದೇಶದಲ್ಲೇ (Cabinet Expansion) ಈ ಸಮಸ್ಯೆ ಇದೆ. ಬಹಳಷ್ಟು ಜನ ಹಿರಿಯರು ಹಾಗೂ ಅರ್ಹರು ಇದ್ದಾರೆ. ಈ ಬಾರಿ ಕೆಲವು ಯುವಕರಿಗೆ ಹಾಗೂ ಕೆಲವು ಹಿರಿಯರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ನೂತನ ಸಚಿವ ಅಜಯ್ ಸಿಂಗ್ (Ajay Singh) ಹೇಳಿದ್ದಾ

ರಾಯಚೂರು: ಅರ್ಹರಿಗೆ ಸಚಿವ ಸ್ಥಾನ ಸಿಗದೇ ಇರುವುದು ಕೇವಲ ನಮ್ಮ ರಾಜ್ಯ ಅಥವಾ ಕಾಂಗ್ರೆಸ್ (Congress) ಪಕ್ಷದ ಸಮಸ್ಯೆಯಲ್ಲ. ಇಡೀ ದೇಶದಲ್ಲೇ (Cabinet Expansion) ಈ ಸಮಸ್ಯೆ ಇದೆ. ಬಹಳಷ್ಟು ಜನ ಹಿರಿಯರು ಹಾಗೂ ಅರ್ಹರು ಇದ್ದಾರೆ. ಈ ಬಾರಿ ಕೆಲವು ಯುವಕರಿಗೆ ಹಾಗೂ ಕೆಲವು ಹಿರಿಯರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ನೂತನ ಸಚಿವ ಅಜಯ್ ಸಿಂಗ್ (Ajay Singh) ಹೇಳಿದ್ದಾರೆ. ರಾಯಚೂರಿನಲ್ಲಿ ಬರ ಪರಿಶೀಲನೆ ವೇಳೆ ಮಾತನಾಡಿದ ಸಚಿವ ಅಜಯ್ ಸಿಂಗ್ ಸ್ಥಾನ ಸಿಗದೇ ಹಲವು ಶಾಸಕರು ಅಸಮಾಧಾನಗೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ. ನಮ್ಮ ತಂದೆ ಸಿಎಂ ಆಗಿದ್ದಾಗಲೂ 2004ರಿಂದ 15% ಕ್ಯಾಪ್ನಿಂದಾಗಿ ಬಹಳಷ್ಟು ಅರ್ಹರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಹೀಗಾಗಿ ಮುಖ್ಯಮಂತ್ರಿಗಳು ಎಲ್ಲರೂ ತಾಳ್ಮೆಯಿಂದ ಇರುವಂತೆ ಹೇಳಿದ್ದಾರೆ. ಅವರೂ ಕೂಡ 2004ರಿಂದ 2014ರವರೆಗೆ ಎರಡು ಬಾರಿ ಸಚಿವರಾಗಿರಲಿಲ್ಲ ಎಂದು ಅಜಯ್ ಸಿಂಗ್ ಹೇಳಿದರು. ಸಿಎಂ ಹಾಗೂ ಡಿಸಿಎಂ ಪರಮೇಶ್ವರ್ ಅವರನ್ನು ನೋಡಿಕೊಂಡು ಮುಂದುವರಿಯಬೇಕು. 2018 ಮತ್ತು 2023ರಲ್ಲೂ ನಾನು ಸಚಿವ ಸ್ಥಾನದಿಂದ ವಂಚಿತನಾಗಿದ್ದೆ. ಬಹಳಷ್ಟು ಜನ ಅರ್ಹರಿದ್ದಾರೆ. ಅವರಿಗೆ ಪಕ್ಷ ಸೂಕ್ತ ಸ್ಥಾನಮಾನ ನೀಡಲಿದೆ ಎಂದು ಸಿಎಂ ಹೇಳಿದ್ದಾರೆ ಎಂದರು. ಇದನ್ನೂ ಓದಿ: ಕೊಚ್ಚಿ | ವಿಮಾನ ಇಳಿಯುವಾಗ ತುರ್ತು ನಿರ್ಗಮನ ದ್ವಾರ ತೆರೆಯಲು ಪ್ರಯಾಣಿಕ ಯತ್ನ – ಮುಂದೇನಾಯ್ತು? ಸಚಿವ ಸ್ಥಾನ ವಂಚಿತ ಶಾಸಕರ ಅಸಮಾಧಾನವೂ ನಿಧಾನವಾಗಿ ಶಮನವಾಗುತ್ತಿದೆ. ಈಗಾಗಲೇ ರಾಜೀನಾಮೆ ನೀಡಿದ್ದ ಶಾಸಕರು ರಾಜೀನಾಮೆ ವಾಪಸ್ ಪಡೆದಿದ್ದಾರೆ. ಇದು ಕೇವಲ ನಮ್ಮ ಪಕ್ಷದಲ್ಲಿ ಅಥವಾ ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಸಮಸ್ಯೆಯಲ್ಲ. ಇಡೀ ದೇಶದಲ್ಲೇ ರಾಜಕೀಯದಲ್ಲಿ ಇಂತಹ ಬೆಳವಣಿಗೆಗಳು ನಡೆಯುತ್ತವೆ ಎಂದು ಅಜಯ್ ಸಿಂಗ್ ಹೇಳಿದರು. ಇನ್ನು ಸಚಿವ ಸಂಪುಟದಲ್ಲಿ ಒಂದು ಸ್ಥಾನ ಬಾಕಿ ಇದ್ದು, ಅದನ್ನು ಮಹಿಳೆಯರಿಗೆ ನೀಡಲಾಗುತ್ತದೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪಕ್ಷದ ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸಚಿವ ಅಜಯ್ ಸಿಂಗ್ ಸ್ಪಷ್ಟಪಡಿಸಿದರು. ಇದನ್ನೂಓದಿ: EMI ಕಟ್ಟಿಲ್ಲ ಅಂತ ರಾತ್ರಿ ಕರೆ ಮಾಡೋ ಹಾಗಿಲ್ಲ; ಸಾಲ ವಸೂಲಿಗೆ RBI ಹೊಸ ರೂಲ್ಸ್