ಬ್ಲಿಟ್ಝ್ನಲ್ಲೂ ಮಿಂಚು; ಪ್ರಜ್ಞಾನಂದ ಚಾಂಪಿಯನ್
ಸೇಂಟ್ ಲೂಯಿ (ಅಮೆರಿಕ): ಭಾರತದ ಗ್ರ್ಯಾಂಡ್ಮಾಸ್ಟರ್ ಆರ್.ಪ್ರಜ್ಞಾನಂದ ಅವರು ಸೇಂಟ್ ಲೂಯಿ ರ್ಯಾಪಿಡ್ ಮತ್ತು ಬ್ಲಿಟ್ಝ್ ಟೂರ್ನಿಯಲ್ಲಿ ಮೊದಲ ಬಾರಿ ಪ್ರಶಸ್ತಿ ಗೆದ್ದುಕೊಂಡರು. ಗುರುವಾರ ಮುಕ್ತಾಯಗೊಂಡ ಈ ಟೂರ್ನಿಯಲ್ಲಿ ಒಂದು ಸುತ್ತು ಇರುವಾಗಲೇ ಅವರು ಪ್ರಶಸ್ತಿ ಖಚಿತಪಡಿಸಿಕೊಂಡಿದ್ದರು.20 ವರ್ಷ ವಯಸ್ಸಿನ ಪ್ರಜ್ಞಾನಂದ 23.5 ಪಾಯಿಂಟ್ಸ್ ಸಂಗ್ರಹಿಸಿದರು. ವಿಶ

ಸೇಂಟ್ ಲೂಯಿ (ಅಮೆರಿಕ): ಭಾರತದ ಗ್ರ್ಯಾಂಡ್ಮಾಸ್ಟರ್ ಆರ್.ಪ್ರಜ್ಞಾನಂದ ಅವರು ಸೇಂಟ್ ಲೂಯಿ ರ್ಯಾಪಿಡ್ ಮತ್ತು ಬ್ಲಿಟ್ಝ್ ಟೂರ್ನಿಯಲ್ಲಿ ಮೊದಲ ಬಾರಿ ಪ್ರಶಸ್ತಿ ಗೆದ್ದುಕೊಂಡರು. ಗುರುವಾರ ಮುಕ್ತಾಯಗೊಂಡ ಈ ಟೂರ್ನಿಯಲ್ಲಿ ಒಂದು ಸುತ್ತು ಇರುವಾಗಲೇ ಅವರು ಪ್ರಶಸ್ತಿ ಖಚಿತಪಡಿಸಿಕೊಂಡಿದ್ದರು.20 ವರ್ಷ ವಯಸ್ಸಿನ ಪ್ರಜ್ಞಾನಂದ 23.5 ಪಾಯಿಂಟ್ಸ್ ಸಂಗ್ರಹಿಸಿದರು. ವಿಶ್ವ ಚಾಂಪಿಯನ್ ಪಟ್ಟಕ್ಕೆ ಗುಕೇಶ್ ಅವರಿಗೆ ಚಾಲೆಂಜರ್ ಆಗಿರುವ ಉಜ್ಬೇಕಿಸ್ತಾನದ ಜಾವೊಖಿರ್ ಸಿಂದರೋವ್ (22 ಪಾಯಿಂಟ್ಸ್) ಎರಡನೇ ಸ್ಥಾನ ಪಡೆದರೆ, ಅಮೆರಿಕದ ವೆಸ್ಲಿ ಸೊ (20 ಪಾಯಿಂಟ್ಸ್) ಮೂರನೇ ಸ್ಥಾನ ಗಳಿಸಿದರು. ಟೂರ್ನಿಯಲ್ಲಿ 10 ಆಟಗಾರರು ಭಾಗವಹಿಸಿದ್ದರು.ಬ್ಲಿಟ್ಝ್ನ 18 ಪಂದ್ಯಗಳಲ್ಲಿ ಪ್ರಜ್ಞಾನಂದ ಒಂದನ್ನಷ್ಟೇ ಸೋತರು. ಈ ಸುತ್ತುಗಳಲ್ಲಿ ಸಂಭವನೀಯ 18 ರಲ್ಲಿ ಅವರು 11.5 ಪಾಯಿಂಟ್ಸ್ ಪಡೆದರು.ಇಲ್ಲಿನ ಯಶಸ್ಸಿನೊಂದಿಗೆ ಅವರು ಗ್ರ್ಯಾಂಡ್ ಚೆಸ್ ಟೂರ್ನ (ಜಿಸಿಟಿ) ಟೂರ್ನಿಗಳಲ್ಲಿ ಪ್ರಸ್ತುತ ಎರಡನೇ ಸ್ಥಾನದಲ್ಲಿದ್ದು, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಗ್ರ್ಯಾಂಡ್ ಫಿನಾಲೆಗೆ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದ್ದಾರೆ. ಅದಕ್ಕೆ ಮೊದಲು, ಬರುವ ಭಾನುವಾರ ಜಿಸಿಟಿ ಸರಣಿಯ ಕೊನೆಯ ಟೂರ್ನಿ ಆರಂಭವಾಗಲಿದ್ದು, ಇದು ಕ್ಲಾಸಿಕಲ್ ಮಾದರಿಯಲ್ಲಿ ನಡೆಯಲಿದೆ.ಜಿಸಿಟಿಯಿಂದ ಅಲಿರೇಝಾ ಫಿರೋಜ್ಝಾ ಹಿಂದೆಸರಿದ ಕಾರಣ ಪ್ರಜ್ಞಾನಂದ ಅವರು ಫಿನಾಲೆಯಲ್ಲಿ ಆಡುವ ಅವಕಾಶ ಹೆಚ್ಚಾಗಿದೆ. ಫ್ರಾನ್ಸ್ನ ಆಟಗಾರ ಬೇರೆ ಟೂರ್ನಿಯಲ್ಲಿ ಆಡಲಿರುವ ಕಾರಣ ಇಲ್ಲಿ ಸಂಪಾದಿಸಿದ ಅಂಕಗಳನ್ನೆಲ್ಲಾ ಕಳೆದುಕೊಳ್ಳಲಿದ್ದಾರೆ.ಅಂತಿಮ ಸ್ಥಾನ: 1. ಪ್ರಜ್ಞಾನಂದ (ಭಾರತ, 23.5), 2. ಜಾವೊಖಿರ್ ಸಿಂದರೊವ್ (ಉಜ್ಬೇಕಿಸ್ತಾನ, 22). 3. ವೆಸ್ಲಿ ಸೊ (ಅಮೆರಿಕ, 20.5), 4. ಲೆವೊನ್ ಅರೋನಿಯನ್ (ಅಮೆರಿಕ, 19), 5–7: ಫ್ಯಾಬಿಯಾನೊ ಕರುವಾನ (ಅಮೆರಿಕ), ಜೋರ್ಡಾನ್ ವಾನ್ ಫೊರಿಸ್ಟ್ (ನೆದರ್ಲೆಂಡ್ಸ್), ತಲಾ 17 ಪಾಯಿಂಟ್ಸ್), 8. ಅನಿಶ್ ಗಿರಿ (ನೆದರ್ಲೆಂಡ್ಸ್, 15.5), 9. ವಿನ್ಸೆಂಟ್ ಕೀಮರ್ (ಜರ್ಮನಿ, 14.5), 10. ಅವಾಂಡರ್ ಲಿಯಾಂಗ್ (ಅಮೆರಿಕ, 14).