ಲಂಕಾ ಟೆಸ್ಟ್ ಸರಣಿ: ಉಚಿತ ಪ್ರವೇಶ
ಕೊಲಂಬೊ : ಭಾರತ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಉಚಿತವಾಗಿ ಪ್ರವೇಶ ಅವಕಾಶ ಕಲ್ಪಿಸಲಾಗುವುದು ಎಂದು ಕ್ರಿಕೆಟ್ ಶ್ರೀಲಂಕಾ (ಎಸ್ಎಲ್ಸಿ) ಶುಕ್ರವಾರ ಪ್ರಕಟಿಸಿದೆ. ಮೊದಲ ಟೆಸ್ಟ್ ಇದೇ 15ರಂದು ಗಾಲ್ನಲ್ಲಿ ಆರಂಭವಾಗಲಿದೆ.‘ವಿಶ್ವ ದರ್ಜೆಯ ಕ್ರಿಕೆಟ್ ಪಂದ್ಯಗಳನ್ನು ಕಾಸು ಖರ್ಚು ಮಾಡದೇ ವೀಕ್ಷಿಸಲು ಅಭಿಮಾನಿಗಳ

ಕೊಲಂಬೊ : ಭಾರತ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಉಚಿತವಾಗಿ ಪ್ರವೇಶ ಅವಕಾಶ ಕಲ್ಪಿಸಲಾಗುವುದು ಎಂದು ಕ್ರಿಕೆಟ್ ಶ್ರೀಲಂಕಾ (ಎಸ್ಎಲ್ಸಿ) ಶುಕ್ರವಾರ ಪ್ರಕಟಿಸಿದೆ. ಮೊದಲ ಟೆಸ್ಟ್ ಇದೇ 15ರಂದು ಗಾಲ್ನಲ್ಲಿ ಆರಂಭವಾಗಲಿದೆ.‘ವಿಶ್ವ ದರ್ಜೆಯ ಕ್ರಿಕೆಟ್ ಪಂದ್ಯಗಳನ್ನು ಕಾಸು ಖರ್ಚು ಮಾಡದೇ ವೀಕ್ಷಿಸಲು ಅಭಿಮಾನಿಗಳಿಗೆ ಇದೊಂದು ಅತ್ಯುತ್ತಮ ಅವಕಾಶ’ ಎಂದು ಎಸ್ಎಲ್ಸಿ ಹೇಳಿಕೆಯಲ್ಲಿ ತಿಳಿಸಿದೆ. ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 23 ರಿಂದ 27ರವರೆಗೆ ನಡೆಯಲಿದೆ.ಶ್ರೀಲಂಕಾದಲ್ಲಿ ಟೆಸ್ಟ್ ಕ್ರಿಕೆಟ್ಗೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದಿಲ್ಲ. ಈ ಹಿಂದೆಯೂ ಭಾರತ ತಂಡಗಳು ಇಲ್ಲಿ ಆಡಿದ್ದಾಗ ಗ್ಯಾಲರಿಗಳು ಖಾಲಿ ಹೊಡೆಯುತ್ತಿದ್ದ ನಿದರ್ಶನಗಳಿವೆ.
Read the complete story at Prajavani