ಸಚಿವ ಕೆ.ಜೆ ಜಾರ್ಜ್ ಬೆಂಗಾಲು ವಾಹನ ಅಪಘಾತ – ತಪ್ಪಿದ ಅನಾಹುತ
ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿರುವ ಅಮೃತ ಮಹಲ್ ತಳಿ ಸಂವರ್ಧನ ಕೇಂದ್ರಕ್ಕೆ ತೆರಳುವಾಗ ಸಚಿವ ಕೆ.ಜೆ ಜಾರ್ಜ್ (KJ George) ಅವರ ಬೆಂಗಾಲು ವಾಹನ ಅಪಘಾತಕ್ಕೀಡಾಗಿರುವ ಘಟನೆ ನಡೆದಿದೆ. ಸದ್ಯ ಸಚಿವ ಜಾರ್ಜ್ ಅವರು ಬರ ವೀಕ್ಷಣೆಗಾಗಿ ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಪ್ರವಾಸದಲ್ಲಿದ್ದಾರೆ. ಪಟ್ಟಣದ ಅಮೃತ್ ಮಹಲ್ ಸಂವರ್ಧನ ತಳಿ ಕೇಂದ್ರದತ್ತ ವಾಹನ ತೆರಳ

ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿರುವ ಅಮೃತ ಮಹಲ್ ತಳಿ ಸಂವರ್ಧನ ಕೇಂದ್ರಕ್ಕೆ ತೆರಳುವಾಗ ಸಚಿವ ಕೆ.ಜೆ ಜಾರ್ಜ್ (KJ George) ಅವರ ಬೆಂಗಾಲು ವಾಹನ ಅಪಘಾತಕ್ಕೀಡಾಗಿರುವ ಘಟನೆ ನಡೆದಿದೆ. ಸದ್ಯ ಸಚಿವ ಜಾರ್ಜ್ ಅವರು ಬರ ವೀಕ್ಷಣೆಗಾಗಿ ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಪ್ರವಾಸದಲ್ಲಿದ್ದಾರೆ. ಪಟ್ಟಣದ ಅಮೃತ್ ಮಹಲ್ ಸಂವರ್ಧನ ತಳಿ ಕೇಂದ್ರದತ್ತ ವಾಹನ ತೆರಳುತ್ತಿದ್ದಾಗ, ಬೆಂಗಾವಲು ವಾಹನ (Escort Vehicle )ಕೇಂದ್ರದ ಗೇಟ್ಗೆ ಡಿಕ್ಕಿಯೊಡೆದಿದೆ. ಸಚಿವರ ಕಾರಿನ ಮುಂಭಾಗದಲ್ಲಿದ್ದ ಪೊಲೀಸ್ ಜೀಪ್ನ ಚಾಲಕ ತಿರುವಿನಲ್ಲಿ ಬ್ರೇಕ್ ಹಿಡಿಯಲು ಮುಂದಾದಾಗ ನಿಯಂತ್ರಣ ಕಳೆದುಕೊಂಡಿದೆ. ಇದರಿಂದ ಜೀಪ್ ತಳಿ ಕೇಂದ್ರದ ಗೇಟ್ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ, ಪೊಲೀಸ್ ಜೀಪ್ನ ಮುಂಭಾಗದಲ್ಲಿ ಮಾತ್ರ ಡ್ಯಾಮೇಜ್ ಆಗಿದೆ. ಇದನ್ನೂ ಓದಿ: ಸೇತುವೆಗೆ ಡಿಕ್ಕಿಯಾಗಿ ಮೂರು ಪಲ್ಟಿಯಾದ ಕಾರು – ಸಿಗಂದೂರಿಗೆ ತೆರಳುತ್ತಿದ್ದ ಪ್ರವಾಸಿಗರಿಗೆ ಗಂಭೀರ ಗಾಯ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಆ.10 ರಂದು ಮಾಲೂರಿನಲ್ಲಿ ಬೃಹತ್ ಸಮಾವೇಶ – 3,200 ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ