‘ಲವ್ ಒನ್ಸ್ ಮೋರ್’ ಚಿತ್ರಕ್ಕೆ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಸಾಥ್
ಚಿತ್ರರಂಗದಲ್ಲಿ ಡಾಕ್ಟರ್, ಎಂಜಿನಿಯರ್, ರಾಜಕಾರಣಿ, ಲಾಯರ್ ಹೀಗೆ ಪ್ರತಿಯೊಬ್ಬರೂ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಇದೀಗ ಮತ್ತೊಬ್ಬ ವೈದ್ಯರ ಆಗಮನವಾಗಿದೆ. ಅವರೇ ಡಾ. ಕಿರಣ್ ಶೇಖರ್. ಸದ್ಯ ಆಸ್ಟ್ರೇಲಿಯಾದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಅವರು ‘ಮಿರಾನಾ ಪಿಕ್ಚರ್ಸ್’ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ ಆ ಮೂಲಕ ಸದಭಿರುಚಿಯ ಸಿನಿಮಾಗಳನ್ನು

ಚಿತ್ರರಂಗದಲ್ಲಿ ಡಾಕ್ಟರ್, ಎಂಜಿನಿಯರ್, ರಾಜಕಾರಣಿ, ಲಾಯರ್ ಹೀಗೆ ಪ್ರತಿಯೊಬ್ಬರೂ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಇದೀಗ ಮತ್ತೊಬ್ಬ ವೈದ್ಯರ ಆಗಮನವಾಗಿದೆ. ಅವರೇ ಡಾ. ಕಿರಣ್ ಶೇಖರ್. ಸದ್ಯ ಆಸ್ಟ್ರೇಲಿಯಾದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಅವರು ‘ಮಿರಾನಾ ಪಿಕ್ಚರ್ಸ್’ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ ಆ ಮೂಲಕ ಸದಭಿರುಚಿಯ ಸಿನಿಮಾಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಅವರ ಪ್ರಥಮ ಪ್ರಯತ್ನದಲ್ಲಿ ಮೂಡಿಬರುತ್ತಿರುವ ಚಿತ್ರವೇ ಲವ್ ಒನ್ಸ್ ಮೋರ್ (Love Once More). ತಮ್ಮ ಹೊಸ ಬ್ಯಾನರ್ ಲಾಂಚ್ ಹಾಗೂ ಹೊಸ ಚಿತ್ರದ ಟೈಟಲ್ ಅನಾವರಣ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಂಡಿದ್ದರು. ಈ ವೇಳೆ ಮಾತನಾಡಿದ ನಿರ್ಮಾಪಕ, ನಿರ್ದೇಶಕ ಡಾ. ಕಿರಣ್ ಶೇಖರ್, ನಮ್ಮೆಲ್ಲರಲ್ಲೂ ಕಥೆಗಳಿವೆ. ಕಥೆಗಳು ನಮ್ಮ ಜೀವನದ ಅವಿಭಾಜ್ಯ ಅಂಗ. ಅವು ಯಾವಾಗಲೂ ಸಮಾಜವನ್ನು ಪ್ರತಿಬಿಂಬಿಸುತ್ತವೆ. ಈಗಿನ ಯುವ ಜನಾಂಗಕ್ಕೆ ಪೂರಕವಾಗುವಂಥ ಕಥೆಗಳನ್ನು ಹೇಳಬೇಕೆನ್ನುವುದೇ ನಮ್ಮ ಉದ್ದೇಶ ಎಂದು ಹೇಳಿದರು. ಇದನ್ನೂ ಓದಿ: ನಾನಿ ಅಭಿನಯದ `ದಿ ಪ್ಯಾರಡೈಸ್’ ಸ್ಫೋಟಕ ಟೀಸರ್ ರಿಲೀಸ್ ಚಿತ್ರದ ಟೈಟಲ್ ಲಾಂಚ್ ಮಾಡಿದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ (Javagal Srinath), ಡಾ. ಕಿರಣ್ ನನ್ನ ಒಳ್ಳೆ ಸ್ನೇಹಿತ. ಅವರಲ್ಲಿ ತುಂಬಾ ನಾಲೆಡ್ಜ್ ಇದೆ. ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿದ್ದು ಈಗ ಸಿನಿಮಾಗೆ ಬಂದಿದ್ದಾರೆ. ಅವರ ಸಿನಿಮಾ ಸಕ್ಸಸ್ ಆಗಲಿ ಎಂದು ಹಾರೈಸಿದರು. ನಂತರ ಮಾತು ಮುಂದುವರೆಸಿದ ಡಾ. ಕಿರಣ್ ಶೇಖರ್, ಲವ್ ಒನ್ಸ್ ಮೋರ್ ಒಂದು ಸೈಕಲಾಜಿಕಲ್ ಜಾನರ್ ಕಥೆಯಾಗಿದ್ದು, ಪ್ರೀತಿ, ಪ್ರೇಮ ಜತೆಗೆ ಸಂಬಂಧಗಳ ಕುರಿತಾಗಿ ಈ ಚಿತ್ರ ಹೇಳಲಿದೆ. ನನ್ನ ವೃತ್ತಿಜೀವನವೂ ನನಗೊಂದು ಪಾಠ ಕಲಿಸಿದೆ. ಮನುಷ್ಯನಿಗೆ ತುಂಬಾ ಮುಖ್ಯವಾಗಿರುವುದು ಆರೋಗ್ಯ ಮತ್ತು ಅರ್ಥಗರ್ಭಿತ ಸಂಬಂಧಗಳು. ನಾವೆಲ್ಲಿ ದಾರಿ ತಪ್ಪಿದೆವು ಅಂತ ನೋಡುತ್ತ ಹೋದಾಗ ನನಗೆ ಒಂದಷ್ಟು ಐಡಿಯಾಗಳು ಹೊಳೆದವು. ನಮ್ಮ ಕಥೆ ದೂರದ ಆಸ್ಟ್ರೇಲಿಯಾಗೂ ಕರೆದುಕೊಂಡು ಹೋಗುತ್ತೆ. ಕಾಲಕ್ಕೆ ತಕ್ಕಂತೆ ಪ್ರೀತಿಯ ಪರಿಭಾಷೆಯೂ ಬದಲಾಗಿದೆ. ಈಗಿನ ಯುವ ಜನತೆಯ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ನಾನು ಈ ಸ್ಕ್ರಿಪ್ಟ್ ರಚಿಸಿದ್ದೇನೆ. ಸಾಕಷ್ಟು ವಿಷಯಗಳು ನಮ್ಮ ಚಿತ್ರದಲ್ಲಿರುತ್ತವೆ. ಚಿತ್ರದ ನಾಯಕನಾಗಿ ಆರ್.ಕೆ.ಚಂದನ್ ಕಾಣಿಸಿಕೊಂಡಿದ್ದು, ನಾಯಕಿಯ ಪಾತ್ರವನ್ನು ನಟಿ ವಿದ್ಯಾಪ್ರಭು ಅವರು ನಿರ್ವಹಿಸುತ್ತಿದ್ದಾರೆ. ಲೀ ಚಾರ್ಲಿ ಕ್ರಿಲ್ (ಆಸ್ಟ್ರೇಲಿಯಾ), ಪೂರ್ಣ ಎಸ್, ಖುಷಿ ಪ್ರಸಾದ್, ಸಾಗರ್, ಶ್ರದ್ದಾಗೌಡ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ನವೀನ್ ಪಂಚಾಕ್ಷರಿ ಅವರ ಛಾಯಾಗ್ರಹಣ, ರಿತ್ವಿಕ್ ಮುರಳೀಧರನ್, ವೇದಾಂತ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಮಂಜುನಾಥ್ ದೈವಜ್ಞ ಲೈನ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ನವೆಂಬರ್ 6ಕ್ಕೆ ಬೆಳ್ಳಿತೆರೆ ಮೇಲೆ ʻರಾಮಾಯಣʼ ದೈವಿಕ ಪರ್ವ ಶುರು