ಜೋಗ್ ಫಾಲ್ಸ್ಗೆ ಜೀವಕಳೆ – ಪ್ರವಾಸಿಗರಿಗಾಗಿ ಕೆಎಸ್ಆರ್ಟಿಸಿಯಿಂದ ವಿಶೇಷ ಪ್ಯಾಕೇಜ್
– ಸಿಗಂದೂರು, ವರದಾಮೂಲ, ಇಕ್ಕೇರಿ, ಕೆಳದಿ ವಿಕ್ಷಣೆಗೂ ಸುವರ್ಣವಕಾಶ ಶಿವಮೊಗ್ಗ: ಮಲೆನಾಡಲ್ಲಿ ಮಳೆಯ (Rain) ಅಬ್ಬರ ಜೋರಾಗಿದ್ದು, ಜೋಗ ಜಲಪಾತಕ್ಕೆ ಜೀವಕಳೆ ಬಂದಿದೆ. ಈ ಹೊತ್ತಿನಲ್ಲಿ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ವಿಶ್ವವಿಖ್ಯಾತ ಜೋಗ್ ಫಾಲ್ಸ್ (Jog Falls) ವೀಕ್ಷಣೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಶಿವಮೊಗ್ಗ (Shivamogg) ವಿಭಾಗ ವಿಶೇ

– ಸಿಗಂದೂರು, ವರದಾಮೂಲ, ಇಕ್ಕೇರಿ, ಕೆಳದಿ ವಿಕ್ಷಣೆಗೂ ಸುವರ್ಣವಕಾಶ ಶಿವಮೊಗ್ಗ: ಮಲೆನಾಡಲ್ಲಿ ಮಳೆಯ (Rain) ಅಬ್ಬರ ಜೋರಾಗಿದ್ದು, ಜೋಗ ಜಲಪಾತಕ್ಕೆ ಜೀವಕಳೆ ಬಂದಿದೆ. ಈ ಹೊತ್ತಿನಲ್ಲಿ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ವಿಶ್ವವಿಖ್ಯಾತ ಜೋಗ್ ಫಾಲ್ಸ್ (Jog Falls) ವೀಕ್ಷಣೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಶಿವಮೊಗ್ಗ (Shivamogg) ವಿಭಾಗ ವಿಶೇಷ ಪ್ಯಾಕೇಜ್ ಸಾರಿಗೆ ಸೇವೆಯನ್ನು ಆರಂಭಿಸಿದೆ. ಸಾರ್ವಜನಿಕ ಪ್ರಯಾಣಿಕರು ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ಪ್ರತಿ ಶನಿವಾರ ಮತ್ತು ಭಾನುವಾರ ಈ ವಿಶೇಷ ಬಸ್ಸುಗಳ ಕಾರ್ಯಾಚರಣೆ ನಡೆಯಲಿದೆ. ಈ ವಿಶೇಷ ಸಾರಿಗೆಯು ಶಿವಮೊಗ್ಗ ಬಸ್ ನಿಲ್ದಾಣದಿಂದ ಹೊರಟು ಸಿಗಂದೂರು, ವರದಾಮೂಲ, ಇಕ್ಕೇರಿ ಮತ್ತು ಕೆಳದಿ ಮಾರ್ಗವಾಗಿ ಜೋಗ್ಫಾಲ್ಸ್ಗೆ ತಲುಪಲಿದೆ. ಇದನ್ನೂ ಓದಿ: ಧುಮ್ಮಿಕ್ಕುತ್ತಿರುವ ʻಜೋಗದ ಸಿರಿʼಯನ್ನು ಕಣ್ತುಂಬಿಕೊಂಡ ಸಾವಿರಾರು ಪ್ರವಾಸಿಗರು ಶಿವಮೊಗ್ಗದಿಂದ ಹೊರಡುವ ಸಮಯ ಬೆಳಿಗ್ಗೆ 08:00 ಗಂಟೆ, ಜೋಗ್ಫಾಲ್ಸ್ ತಲುಪುವ ಸಮಯ ಮಧ್ಯಾಹ್ನ 02 ಗಂಟೆ. ಜೋಗ್ಫಾಲ್ಸ್ನಿಂದ ಹಿಂತಿರುಗುವ ಸಮಯ ಸಂಜೆ 05 ಗಂಟೆ. ಶಿವಮೊಗ್ಗ ತಲುಪುವ ಸಮಯ ರಾತ್ರಿ 07:30 ಗಂಟೆ ಆಗಿರಲಿದೆ. ಪ್ರಯಾಣ ದರ: ವಯಸ್ಕರಿಗೆ 450 ರೂ. ಹಾಗೂ ಮಕ್ಕಳಿಗೆ 250 ರೂ. ಆಗಿರಲಿದೆ. ಮಳೆಗಾಲದಲ್ಲಿ ಸುಂದರ ಜಲಪಾತ ಹಾಗೂ ಸುತ್ತಮುತ್ತಲಿನ ಧಾರ್ಮಿಕ ಮತ್ತು ಐತಿಹಾಸಿಕ ತಾಣಗಳನ್ನು ವೀಕ್ಷಿಸಲು ಬಯಸುವ ಸಾರ್ವಜನಿಕರು ಹಾಗೂ ಪ್ರವಾಸಿಗರು ಈ ವಿಶೇಷ ಪ್ಯಾಕೇಜ್ ಸಾರಿಗೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಕೆಎಸ್ಆರ್ಟಿಸಿ ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಲೆನಾಡಲ್ಲಿ ಮಳೆಯಬ್ಬರ – ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಜೀವಕಳೆ