Gen-Z ಗಳ ಜೊತೆ ನಾಳೆ ರಾಹುಲ್ ಗಾಂಧಿ ಸಂವಾದ; ‘ಛಾತ್ರೋಂ ಕೀ ಗೂಂಜ್’ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ
ಲಕ್ನೋ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ ನಾಳೆ (ಶನಿವಾರ) ಪ್ರಯಾಗ್ರಾಜ್ನಲ್ಲಿ ಜೆನ್ ಝಿ (Gen-Z) ಯುವಕರು ಹಾಗೂ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ. ಇದಕ್ಕಾಗಿ ಸಂಜೆ 5 ಗಂಟೆಗೆ ‘ಛಾತ್ರೋಂ ಕೀ ಗೂಂಜ್’ (ವಿದ್ಯಾರ್ಥಿಗಳ ಧ್ವನಿ) ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ನಾಳೆ ನಡೆಯುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳು, ಶುಲ್

ಲಕ್ನೋ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ ನಾಳೆ (ಶನಿವಾರ) ಪ್ರಯಾಗ್ರಾಜ್ನಲ್ಲಿ ಜೆನ್ ಝಿ (Gen-Z) ಯುವಕರು ಹಾಗೂ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ. ಇದಕ್ಕಾಗಿ ಸಂಜೆ 5 ಗಂಟೆಗೆ ‘ಛಾತ್ರೋಂ ಕೀ ಗೂಂಜ್’ (ವಿದ್ಯಾರ್ಥಿಗಳ ಧ್ವನಿ) ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ನಾಳೆ ನಡೆಯುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳು, ಶುಲ್ಕ ಹೆಚ್ಚಳ, ಸೀಟು ಕಡಿತ, ಉದ್ಯೋಗ ಮತ್ತು ಯುವಕರ ಭವಿಷ್ಯದ ಬಗ್ಗೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮ ರಾಜಕೀಯ ಉದ್ದೇಶವಿಲ್ಲ, ವಿದ್ಯಾರ್ಥಿಗಳ ಸಮಸ್ಯೆಗಳೇ ಮುಖ್ಯ ವಿಚಾರವಾಗಿರಲಿದೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಕಾರ್ಯಕ್ರಮದ ನಡೆಯುವ ಸ್ಥಳದ ವಿಚಾರವಾಗಿ ಕಾಂಗ್ರೆಸ್ ಹಾಗೂ ಖಾಸಗಿ ಸಂಸ್ಥೆಯಾದ ಕೆಪಿ ಟ್ರಸ್ಟ್ ನಡುವೆ ಗೊಂದಲ ಉಂಟಾಗಿತ್ತು. ಕೆಪಿ ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ನೀಡಿದ್ದ ಅನುಮತಿಯನ್ನು ಟ್ರಸ್ಟ್ ರದ್ದುಪಡಿಸಿತ್ತು. ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುವ ಸಾಧ್ಯತೆ ಮತ್ತು ಮಳೆಗಾಲದ ಕಾರಣವನ್ನು ಟ್ರಸ್ಟ್ ಉಲ್ಲೇಖಿಸಿ ಕಾರ್ಯಕ್ರಮ ನಡೆಸದಿರಲು ತಿಳಿಸಿತ್ತು. ಆದರೆ, ರಾಹುಲ್ ಗಾಂಧಿಯವರು ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಟ್ರಸ್ಟ್ ಮತ್ತು ಅಧಿಕಾರಿಗಳಿಗೆ ಕಾರ್ಯಕ್ರಮ ನಡೆಸಲು ಅನುಮತಿ ನೀಡುವಂತೆ ಒತ್ತಾಯಿಸಿದ್ದರು. ಇದನ್ನೂ ಓದಿ:ಶಿವಾನಂದ ನೀಲಣ್ಣವರ್ ಬಹುಕೋಟಿ ವಂಚನೆ ಕೇಸ್ಗೆ ಇಡಿ ಎಂಟ್ರಿ – ಮೂರು ಕಡೆ ದಾಳಿ ಆರಂಭದಲ್ಲಿ ಗೊಂದಲ ಏರ್ಪಟ್ಟಿದ್ದರೂ, ಅಂತಿಮವಾಗಿ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಆಯೋಜಿಸಲಾಗಿರುವ ರಾಹುಲ್ ಗಾಂಧಿಯವರ ‘ಛಾತ್ರೋಂ ಕಿ ಗೂಂಜ್’ (ವಿದ್ಯಾರ್ಥಿಗಳ ಧ್ವನಿ) ಸಂವಾದ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿಯನ್ನು ನೀಡಲಾಗಿದೆ. ಇದನ್ನೂ ಓದಿ: ವಿಶ್ವದ ಗಮನ ಸೆಳೆದ ಧುರಂಧರ್ – ಹಾಲಿವುಡ್ ಸಿನಿಮಾಗಳನ್ನ ಹಿಂದಿಕ್ಕಿ ಹೊಸ ದಾಖಲೆ