ಒಂದು ಸಾಕಾ, ಐದು ಬೇಕಾ?
‘ಥೋತ್ತೆರಿಕೆ... ಹಿಂಗಾಗಬಾರದಿತ್ತು’ ಎಂದ ಗುಡ್ಡೆ.‘ಹೆಂಗೆ?’ ಕೇಳಿದ ದುಬ್ಬೀರ.‘ಬಿಜೆಪಿ ರಾಷ್ಟ್ರಾಧ್ಯಕ್ಷರ ಕ್ಷೇತ್ರದಲ್ಲೇ ಬಿಜೆಪಿ ಸೋಲಬಾರದಿತ್ತು’ ಗುಡ್ಡೆ ಮಂಜಮ್ಮನ ಮುಖ ನೋಡಿ ನಕ್ಕ.ತಕ್ಷಣ ಮಂಜಮ್ಮ ‘ಥೋ ಥೋತ್ತೇರಿಕೆ, ಹಿಂಗಾಗಬಾರದಿತ್ತು...’ ಎಂದಳು.‘ಏನು, ಡಬ್ಬಲ್ ಥೋನಾ? ನಿಂದೆಂಗೆ?’ ದುಬ್ಬೀರ ಇತ್ತ ತಿರುಗಿದ.‘ಟ್ರಬಲ್ ಶೂಟರ್ ಸಿಎಂಗೇ ಸಚಿವ ಸಂಪುಟದ ಟ್ರಬಲ್ ಬ

‘ಥೋತ್ತೆರಿಕೆ... ಹಿಂಗಾಗಬಾರದಿತ್ತು’ ಎಂದ ಗುಡ್ಡೆ.‘ಹೆಂಗೆ?’ ಕೇಳಿದ ದುಬ್ಬೀರ.‘ಬಿಜೆಪಿ ರಾಷ್ಟ್ರಾಧ್ಯಕ್ಷರ ಕ್ಷೇತ್ರದಲ್ಲೇ ಬಿಜೆಪಿ ಸೋಲಬಾರದಿತ್ತು’ ಗುಡ್ಡೆ ಮಂಜಮ್ಮನ ಮುಖ ನೋಡಿ ನಕ್ಕ.ತಕ್ಷಣ ಮಂಜಮ್ಮ ‘ಥೋ ಥೋತ್ತೇರಿಕೆ, ಹಿಂಗಾಗಬಾರದಿತ್ತು...’ ಎಂದಳು.‘ಏನು, ಡಬ್ಬಲ್ ಥೋನಾ? ನಿಂದೆಂಗೆ?’ ದುಬ್ಬೀರ ಇತ್ತ ತಿರುಗಿದ.‘ಟ್ರಬಲ್ ಶೂಟರ್ ಸಿಎಂಗೇ ಸಚಿವ ಸಂಪುಟದ ಟ್ರಬಲ್ ಬರಬಾರದಿತ್ತು...’ ಮಂಜಮ್ಮ ನಕ್ಕಳು.‘ಎಲ್ಲೈತೆ ಟ್ರಬಲ್ಲು? ಬಂಡಾಯ ಎಲ್ಲ ಥಂಡಾಯ ಆಗೋತು’ ಗುಡ್ಡೆ ವಾದಿಸಿದ.‘ಮತ್ತೆ ಕೋಟಿ ಕೋಟಿ ಕೊಟ್ಟು ಮಂತ್ರಿ ಸ್ಥಾನ ಖರೀದಿಸಿದ ಆಡಿಯೊ ಬಾಂಬ್ ಸುಳ್ಳಾ?’‘ನಿಮ್ ಪಕ್ಷದಾಗೆ ಸಿಎಂ ಕುರ್ಚಿಗೆ ಎರಡು ಸಾವಿರ ಕೋಟಿ ರೂಪಾಯಿ ಕೊಡ್ಬೇಕು ಅಂತ ನಿಮ್ಮೋರೇ ಹೇಳಿದ್ದು ಸುಳ್ಳಾ?’ ಗುಡ್ಡೆ ತಿರುಗೇಟು ಕೊಟ್ಟ.‘ಥೋ ಬಿಡ್ರಪ್ಪ ಅತ್ಲಾಗೆ... ಮಂಜಮ್ಮ, ಈ ಸಲ ಮಹಿಳಾ ಮೀಸಲಾತಿ ಜಾರಿ ಆಗಂಗೆ ಕಾಣುಸ್ತತಿ, ರೆಡಿಯಾಗು, ಎಲೆಕ್ಷನ್ಗೆ ನಿಲ್ಲಂತೆ...’ ದುಬ್ಬೀರ ಬೆಣ್ಣೆ ಸವರಿದ.‘ಥೂ... ಈ ಕೊಳಕು, ದರಿದ್ರ ರಾಜಕೀಯಕ್ಕೆ ನಾ ಬರಲ್ಲ’ ಮಂಜಮ್ಮ ಮಸಿ ಬಟ್ಟೆ ಕೊಡವಿದಳು.‘ಲೇ ಗುಡ್ಡೆ, ಮಂಜಮ್ಮ ರಾಜಕೀಯಕ್ಕೆ ಬರಲ್ಲಂತೆ, ಹೋಗ್ಲಿ, ನಿಮ್ ಸಿಎಮ್ಮು ಬಂಡಾಯ ಹೆಂಗೆ ಥಂಡಾ ಮಾಡಿದ್ರಲೆ? ಅದನ್ನೇಳು’ ದುಬ್ಬೀರ ಕೇಳಿದ.‘ಅದಾ... ವೆರಿ ಸಿಂಪಲ್, ಸಿಎಮ್ಮು ಬಂಡಾಯ ಶಾಸಕರಿಗೆ ‘ಒಂದು ಸಾಕಾ? ಐದು ಬೇಕಾ?’ ಅಂತ ಕೇಳಿದ್ರಂತೆ. ಎಲ್ರೂ ಐದೇ ಬೇಕು ಅಂತ ಪಿಟಿಕ್ಕನ್ನದೆ ಬಂಡಾಯ ವಾಪಸ್ ತಗಂಡ್ರಂತೆ’.‘ಹೌದಾ? ಏನದು ಒಂದು ಸಾಕಾ ಐದು ಬೇಕಾ?’‘ಈಗ ಒಂದು ವರ್ಷದ ಮಂತ್ರಿಗಿರಿ ಸಾಕೋ ಮುಂದೆ ಐದು ವರ್ಷದ ಮಂತ್ರಿಗಿರಿ ಬೇಕೋ ಅಂತ ಕೇಳಿದ್ರಂತೆ... ಒಂದೇ ಮಾತು, ಖೇಲ್ ಖತಂ, ನಾಟಕ್ ಬಂದ್! ಹೆಂಗೆ?’ ಎಂದ ಗುಡ್ಡೆ.‘ಹಂಗೇ ಬಿಡಪ’ ಎಂದ ದುಬ್ಬೀರ. ಎಲ್ಲರೂ ನಕ್ಕರು.