ಹೀರೊ ಮೋಟೊಕಾರ್ಪ್ ಲಾಭ ಇಳಿಕೆ
ನವದೆಹಲಿ: ಜೂನ್ ತ್ರೈಮಾಸಿಕದಲ್ಲಿ ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿ ಹೀರೊ ಮೋಟೊಕಾರ್ಪ್ನ ತೆರಿಗೆ ನಂತರದ ಲಾಭದಲ್ಲಿ (ಪಿಎಟಿ) ಶೇ 16.89ರಷ್ಟು ಇಳಿಕೆ ಆಗಿದೆ.ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹1,705 ಕೋಟಿ ಲಾಭ ಗಳಿಸಿತ್ತು. ಅದು ಈ ಬಾರಿ ₹1,417 ಕೋಟಿಗೆ ಇಳಿದಿದೆ ಎಂದು ಕಂಪನಿ ಷೇರುಪೇಟೆಗೆ ತಿಳಿಸಿದೆ. ವರಮಾನವು ₹9,727 ಕೋಟಿಯಿಂದ ₹13,12
ನವದೆಹಲಿ: ಜೂನ್ ತ್ರೈಮಾಸಿಕದಲ್ಲಿ ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿ ಹೀರೊ ಮೋಟೊಕಾರ್ಪ್ನ ತೆರಿಗೆ ನಂತರದ ಲಾಭದಲ್ಲಿ (ಪಿಎಟಿ) ಶೇ 16.89ರಷ್ಟು ಇಳಿಕೆ ಆಗಿದೆ.ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹1,705 ಕೋಟಿ ಲಾಭ ಗಳಿಸಿತ್ತು. ಅದು ಈ ಬಾರಿ ₹1,417 ಕೋಟಿಗೆ ಇಳಿದಿದೆ ಎಂದು ಕಂಪನಿ ಷೇರುಪೇಟೆಗೆ ತಿಳಿಸಿದೆ. ವರಮಾನವು ₹9,727 ಕೋಟಿಯಿಂದ ₹13,126 ಕೋಟಿಗೆ ಹೆಚ್ಚಳವಾಗಿದೆ. ಒಟ್ಟು ವೆಚ್ಚವು ₹11,621 ಕೋಟಿಗೆ ಏರಿಕೆಯಾಗಿದೆ. ಇದೇ ತ್ರೈಮಾಸಿಕದಲ್ಲಿ 16.77 ಲಕ್ಷ ದ್ವಿಚಕ್ರ ವಾಹನಗಳು ಮಾರಾಟವಾಗಿದ್ದು, ಶೇ 23ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ತಿಳಿಸಿದೆ.ವಾಹನದ ಬಿಡಿಭಾಗಗಳು, ಉಪಕರಣಗಳ ಮಾರಾಟದಿಂದ ₹1,689 ಕೋಟಿ ವರಮಾನ ಗಳಿಸಿದೆ. ಕಳೆದ ವರ್ಷದ ಜೂನ್ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 30ರಷ್ಟು ಬೆಳವಣಿಗೆ ಆಗಿದೆ. ಇದು ಒಟ್ಟಾರೆ ವರಮಾನ ಹೆಚ್ಚಳಕ್ಕೆ ಕಾರಣ ಎಂದು ತಿಳಿಸಿದೆ.
Read the complete story at Prajavani