ಮೈಸೂರು | ಲೇಡಿ ʻಡಾಲಿʼ ಕಿರುಕುಳಕ್ಕೆ ಬೇಸತ್ತ ಮಹಿಳೆ, ಕೀಟನಾಶಕ ಸೇವಿಸಿ ಆತ್ಮಹತ್ಯೆ
ಮೈಸೂರು: ಲೇಡಿ ಸೂಪರ್ವೈಸರ್ (Lady Supervisor) ವಿರುದ್ಧ ಕಿರುಕುಳದ ಆರೋಪ ಕೇಳಿ ಬಂದಿದೆ. ತನ್ನದಲ್ಲದ ತಪ್ಪಿಗೆ ಟಾರ್ಗೆಟ್ ಮಾಡಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದು, ಅದರಲ್ಲಿ ಸೂಪರ್ವೈಸರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನ (M

ಮೈಸೂರು: ಲೇಡಿ ಸೂಪರ್ವೈಸರ್ (Lady Supervisor) ವಿರುದ್ಧ ಕಿರುಕುಳದ ಆರೋಪ ಕೇಳಿ ಬಂದಿದೆ. ತನ್ನದಲ್ಲದ ತಪ್ಪಿಗೆ ಟಾರ್ಗೆಟ್ ಮಾಡಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದು, ಅದರಲ್ಲಿ ಸೂಪರ್ವೈಸರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನ (Mysuru) ಹಿನಕಲ್ನಲ್ಲಿ ಈ ಘಟನೆ ನಡೆದಿದೆ. ತನ್ನದಲ್ಲದ ತಪ್ಪಿಗೆ ಕಂಪನಿಯಲ್ಲಿ ಟಾರ್ಗೆಟ್ ಮಾಡಿ ಕಿರುಕುಳ ನೀಡಲಾಗುತ್ತಿದೆ ಎಂದು ಡೆತ್ ನೋಟ್ ಬರೆದಿಟ್ಟು ನಾಗೇಶ್ವರಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಕಂಪನಿಯಲ್ಲಿ ನಾಗೇಶ್ವರಿ ಪ್ರಮೋಟರ್ ಆಗಿ ಕೆಲಸ ಮಾಡುತ್ತಿದ್ದರು. 4 ದಿನಗಳ ಹಿಂದೆ ಕಂಪನಿಗೆ ʻಡಾಲಿʼ ಎಂಬ ಮಹಿಳೆ ಸೂಪರ್ವೈಸರ್ ಆಗಿ ಬಂದಿದ್ದಾರೆ. ಅವರಿಂದ ಕಿರುಕುಳ ಶುರುವಾಯ್ತು ಎಂದು ಎಂದು ನಾಗೇಶ್ವರಿ ಡೆತ್ನೋಟ್ನಲ್ಲಿ ಆರೋಪಿಸಿದ್ದಾರೆ. ʻನನ್ನದಲ್ಲದ ತಪ್ಪಿಗೆ ನನ್ನನ್ನೇ ಟಾರ್ಗೆಟ್ ಮಾಡಲಾಗುತ್ತಿತ್ತು. ಕಳೆದ 4 ತಿಂಗಳಿನಿಂದ ಒಂದು ವೀಕ್ಆಫ್ ಕೂಡ ನೀಡಿಲ್ಲ. ತುರ್ತು ರಜೆ ಕೇಳಿದರೂ ರಜೆ ನೀಡಲಿಲ್ಲ. ಇಷ್ಟೇ ಅಲ್ಲ, ಈ ಬಗ್ಗೆ ಪ್ರಶ್ನೆ ಮಾಡಿದಾಗ ಕೆಲಸದಿಂದಲೇ ತೆಗೆದು ಹಾಕಿದ್ರು. ಕೆಲಸದಿಂದ ತೆಗೆದುಹಾಕಿದ ಬಳಿಕ ನೋಟಿಸ್ ಪಿರಿಯಡ್ ಕೂಡ ಮಾಡಿಸಿಲ್ಲ. ಡಾಲಿ ಮೇಡಂ ನೀಡಿದ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನ್ಯಾಯ ಕೊಡಿಸಿ ಎಂದು ನಾಗೇಶ್ವರಿ ಡೆತ್ ನೋಟ್ ನಲ್ಲಿ ಮನವಿ ಮಾಡಿದ್ದಾರೆ. ಕೆಲಸದ ಒತ್ತಡವೋ? ಸೂಪರ್ವೈಸರ್ ಕಿರುಕುಳವೋ? ನಾಗೇಶ್ವರಿಯ ಆತ್ಮಹತ್ಯೆಗೆ ನಿಜವಾದ ಕಾರಣವೇನು ಎಂಬುದು ತನಿಖೆಯಿಂದ ಹೊರಬರಬೇಕಿದೆ. ನಾಗೇಶ್ವರಿ ಬರೆದಿಟ್ಟಿದ್ದಾರೆ ಎನ್ನಲಾದ ಡೆತ್ನೋಟ್ ಈಗ ಪ್ರಕರಣದ ಪ್ರಮುಖ ಸಾಕ್ಷ್ಯವಾಗಿದೆ. ಆದರೆ, ಡೆತ್ನೋಟ್ನಲ್ಲಿರುವ ಆರೋಪಗಳು ಎಷ್ಟು ಸತ್ಯ? ಸೂಪರ್ವೈಸರ್ ಡಾಲಿ ಅವರಿಂದ ನಿಜವಾಗಿಯೂ ಕಿರುಕುಳ ನಡೆದಿತ್ತೇ? ಈ ಎಲ್ಲ ಪ್ರಶ್ನೆಗಳಿಗೆ ಪೊಲೀಸ್ ತನಿಖೆಯೇ ಉತ್ತರ ನೀಡಬೇಕಿದೆ.