ಬ್ರಹ್ಮಗಂಟು ಧಾರಾವಾಹಿ ಅಂತ್ಯ:ನಿಮ್ಮ ಪ್ರೀತಿಗೆ ಸದಾ ಋಣಿ ಎಂದ ಸೌಂದರ್ಯ ಪಾತ್ರಧಾರಿ
ಕಿರುತೆರೆ ವೀಕ್ಷಕರ ನೆಚ್ಚಿನ ಧಾರಾವಾಹಿಗಳಲ್ಲಿ ಒಂದಾಗಿದ್ದ ‘ಬ್ರಹ್ಮಗಂಟು’ ತನ್ನ ಸುದೀರ್ಘ ಯಶಸ್ವಿ ಪಯಣವನ್ನು ಪೂರ್ಣಗೊಳಿಸಿ ಮುಕ್ತಾಯ ಕಂಡಿದೆ. ಧಾರಾವಾಹಿಯಲ್ಲಿ ‘ಸೌಂದರ್ಯ’ ಎಂಬ ಖಳನಾಯಕಿಯ ಪಾತ್ರದ ಮೂಲಕ ವೀಕ್ಷಕರ ಮನಸು ಗೆದ್ದಿದ್ದ ನಟಿ ಪ್ರೀತಿ ಶ್ರೀನಿವಾಸ್ ಈ ಪಯಣದ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.ಧಾರಾವಾಹಿಗೆ ಬೆಂಬಲ ನೀಡಿದ ಪ್ರೇಕ್ಷಕ

ಕಿರುತೆರೆ ವೀಕ್ಷಕರ ನೆಚ್ಚಿನ ಧಾರಾವಾಹಿಗಳಲ್ಲಿ ಒಂದಾಗಿದ್ದ ‘ಬ್ರಹ್ಮಗಂಟು’ ತನ್ನ ಸುದೀರ್ಘ ಯಶಸ್ವಿ ಪಯಣವನ್ನು ಪೂರ್ಣಗೊಳಿಸಿ ಮುಕ್ತಾಯ ಕಂಡಿದೆ. ಧಾರಾವಾಹಿಯಲ್ಲಿ ‘ಸೌಂದರ್ಯ’ ಎಂಬ ಖಳನಾಯಕಿಯ ಪಾತ್ರದ ಮೂಲಕ ವೀಕ್ಷಕರ ಮನಸು ಗೆದ್ದಿದ್ದ ನಟಿ ಪ್ರೀತಿ ಶ್ರೀನಿವಾಸ್ ಈ ಪಯಣದ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.ಧಾರಾವಾಹಿಗೆ ಬೆಂಬಲ ನೀಡಿದ ಪ್ರೇಕ್ಷಕರಿಗೆ, ವಾಹಿನಿಗೆ ಹಾಗೂ ತಾಂತ್ರಿಕ ವರ್ಗಕ್ಕೆ ಪ್ರೀತಿ ಶ್ರೀನಿವಾಸ್ ಅವರು ಕೃತಜ್ಞತೆ ತಿಳಿಸಿದ್ದಾರೆ.ಬ್ರಹ್ಮಗಂಟು ಧಾರಾವಾಹಿ ಮುಕ್ತಾಯದ ಬಗ್ಗೆ ನಟಿ ಕಾವ್ಯ ರಮೇಶ್ ಭಾವುಕ ಪೋಸ್ಟ್ಬ್ರಹ್ಮಗಂಟು ಧಾರಾವಾಹಿ: ದಿಶಾ ಆದ ದೀಪಾ, ಸ್ಥಾನ ಕಳೆದುಕೊಳ್ಳುವ ಭಯದಲ್ಲಿ ಸೌಂದರ್ಯ View this post on Instagram A post shared by Preethi Srinivasa (@preethi_srinivaas) ಸೌಂದರ್ಯ ಪಾತ್ರಕ್ಕೆ ನೀಡಿದ ಪ್ರೀತಿಗೆ ಸದಾ ಋಣಿ ಎಂದ ನಟಿ‘500ಕ್ಕೂ ಹೆಚ್ಚು ಸಂಚಿಕೆಗಳ ಕಾಲ ‘ಸೌಂದರ್ಯ’ಳನ್ನು ನಿಮ್ಮ ಮನೆ ಮಗಳಂತೆ ಆಶೀರ್ವದಿಸಿದ್ದೀರಿ. ಕೇವಲ ಒಂದು ಪಾತ್ರವಾಗಿ ಆರಂಭವಾದ ಈ ಪಯಣ, ಜನ ನನ್ನನ್ನು ಪ್ರೀತಿ ಎಂದು ಗುರುತಿಸುವುದಕ್ಕಿಂತ ಸೌಂದರ್ಯ ಅಂತಲೇ ಹೆಚ್ಚು ಗುರುತಿಸಿದ ಕ್ಷಣಗಳು ಅಪಾರ. ಪ್ರತಿ ಬಾರಿಯೂ ನಿಮ್ಮ ಆ ಪ್ರೀತಿಯನ್ನು ಅತ್ಯಂತ ಗೌರವದಿಂದ ಸ್ವೀಕರಿಸಿದ್ದೇನೆ’ ಎಂದಿದ್ದಾರೆ.‘ಸೌಂದರ್ಯ ಕೇವಲ ಪಾತ್ರವಾಗಿ ಉಳಿಯಲಿಲ್ಲ, ಸೌಂದರ್ಯ, ಸೀರೆಗಳ ವೈಭವ, ಕಂಗೊಳಿಸುವ ಶೈಲಿ, ಆತ್ಮವಿಶ್ವಾಸ ಹಾಗೂ ಗಾಂಭೀರ್ಯದ ಸಂಕೇತವಾಯಿತು. ಎಲ್ಲಿಗೆ ಹೋದರೂ ಜನ ಮುಗುಳುನಗುತ್ತಾ ಸೌಂದರ್ಯ ಮೇಡಂ ಎಂದು ಕರೆಯುತ್ತಿದ್ದಕ್ಕಿಂತ ದೊಡ್ಡ ಆಶೀರ್ವಾದ ಮತ್ತೊಂದಿಲ್ಲ. ಸೌಂದರ್ಯ ಪಾತ್ರವನ್ನು ದ್ವೇಷಿಸುತ್ತಲೇ ಪ್ರೀತಿಸಿದ್ದಕ್ಕೆ ನಿಮ್ಮೆಲರಿಗೂ ಧನ್ಯವಾದಗಳು’ ಎಂದಿದ್ದಾರೆ.‘ಜೀ ಕನ್ನಡ ವಾಹಿನಿಗೆ, ತಂಡಕ್ಕೆ, ಬರಹಗಾರರು, ನಿರ್ದೇಶಕರು, ತಾಂತ್ರಿಕ ಬಳಗ ಹಾಗೂ ಸಹ ಕಲಾವಿದರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ವಿಶೇಷವಾಗಿ ಇಂತಹ ಅದ್ಭುತ ನಿರ್ಮಾಣ ನೀಡಿ ಬೆಂಬಲಿಸಿದ ನಿರ್ಮಾಪಕರಾದ ದಿಲೀಪ್ ರಾಜ್ ಸರ್ ಹಾಗೂ ಶ್ರೀವಿದ್ಯಾ ಮೇಡಂ ಅವರಿಗೆ ಮತ್ತು ‘ಬ್ರಹ್ಮಗಂಟು’ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ನನ್ನ ಕೃತಜ್ಞತೆಗಳು. ಧಾರಾವಾಹಿ ಮುಕ್ತಾಯವಾಗಬಹುದು, ಆದರೆ ಸೌಂದರ್ಯಳಿಗೆ ನೀವು ನೀಡಿದ ಪ್ರೀತಿ ನನ್ನೊಂದಿಗೆ ಎಂದೆಂದಿಗೂ ಜೀವಂತವಾಗಿರುತ್ತದೆ. ಎಲ್ಲಾ ಕನ್ನಡ ವೀಕ್ಷಕರಿಗೆ ಹಾಗೂ ಅಭಿಮಾನಿಗಳಿಗೆ ಧನ್ಯವಾದಗಳು’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.