ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಗೆ ಸಾಯಿ ಸುದರ್ಶನ್ ಅಲಭ್ಯ
ನವದೆಹಲಿ: ಅಗ್ರಕ್ರಮಾಂಕದ ಬ್ಯಾಟರ್ ಬಿ. ಸಾಯಿ ಸುದರ್ಶನ್ ಅವರು ಶ್ರೀಲಂಕಾ ಎದುರಿನ ಟೆಸ್ಟ್ ಕ್ರಿಕೆಟ್ ಸರಣಿಗೆ ಅಲಭ್ಯರಾಗಿದ್ದಾರೆ. ಅವರ ಸ್ಥಾನವನ್ನು ಕರ್ನಾಟಕದ ದೇವದತ್ತ ಪಡಿಕ್ಕಲ್ ತುಂಬಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಅವರು ಬ್ಯಾಟಿಂಗ್ ಮಾಡುವುದು ಬಹುತೇಕ ಖಚಿತವಾಗಿದೆ. ಪಡಿಕ್ಕಲ್ ಅವರು ಅಭ್ಯಾಸ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಹೋದ ತಿಂಗಳು ಶ್

ನವದೆಹಲಿ: ಅಗ್ರಕ್ರಮಾಂಕದ ಬ್ಯಾಟರ್ ಬಿ. ಸಾಯಿ ಸುದರ್ಶನ್ ಅವರು ಶ್ರೀಲಂಕಾ ಎದುರಿನ ಟೆಸ್ಟ್ ಕ್ರಿಕೆಟ್ ಸರಣಿಗೆ ಅಲಭ್ಯರಾಗಿದ್ದಾರೆ. ಅವರ ಸ್ಥಾನವನ್ನು ಕರ್ನಾಟಕದ ದೇವದತ್ತ ಪಡಿಕ್ಕಲ್ ತುಂಬಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಅವರು ಬ್ಯಾಟಿಂಗ್ ಮಾಡುವುದು ಬಹುತೇಕ ಖಚಿತವಾಗಿದೆ. ಪಡಿಕ್ಕಲ್ ಅವರು ಅಭ್ಯಾಸ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಹೋದ ತಿಂಗಳು ಶ್ರೀಲಂಕಾದಲ್ಲಿಯೇ ನಡೆದಿದ್ದ ಪಂದ್ಯದಲ್ಲಿ ಭಾರತ ಎ ತಂಡದಲ್ಲಿ ಸುದರ್ಶನ್ ಆಡಿದ್ದರು. ಆಗ ಅವರ ಕಾಲಿನ ಹೆಬ್ಬೆರಳಿಗೆ ಗಾಯವಾಗಿತ್ತು. ಅವರು ಇನ್ನೂ ಅದರಿಂದ ಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅವರು ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಆರೈಕೆಯಲ್ಲಿದ್ದಾರೆ. ‘ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಗೆ ಸಾಯಿ ಸುದರ್ಶನ್ ಅಲಭ್ಯರಾಗಿದ್ದಾರೆ. ಅವರ ಗಾಯ ಶಮನವಾಗಲು ಇನ್ನೂ ಬಹಳಷ್ಟು ಸಮಯ ಬೇಕಿದೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಆದರೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಚೇತರಿಕೆಯಾಗಬೇಕಿದೆ’ ಎಂದು ಬಿಸಿಸಿಐ ಸಿಒಇಯ ಮೂಲಗಳು ತಿಳಿಸಿವೆ.
Read the complete story at Prajavani