ಕೊರಿಯಾ ಮಾಸ್ಟರ್ಸ್ ಫೈನಲ್ಗೆ ಅಶ್ಮಿತಾ
ಅಸಾನ್ (ದಕ್ಷಿಣ ಕೊರಿಯಾ): ಸ್ಫೂರ್ತಿಯುತ ಆಟ ಮುಂದುವರಿಸಿದ ಅಶ್ಮಿತಾ ಚಾಲಿಹಾ, ಸ್ವದೇಶದ ರಕ್ಷಿತಾ ರಾಮರಾಜ್ ಅವರನ್ನು ಸೋಲಿಸಿ, ಕೊರಿಯಾ ಮಾಸ್ಟರ್ಸ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ತಲುಪಿದರು.ಶನಿವಾರ 48 ನಿಮಿಷ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಶ್ಮಿತಾ 21–13, 16–21, 21–13 ರಿಂದ ಜಯಗಳಿಸಿ ಮೊದಲ ಬಾರಿ ಬಿಡಬ್ಲ್ಯುಎಫ್ ವಿಶ್ವ ಟೂರ್

ಅಸಾನ್ (ದಕ್ಷಿಣ ಕೊರಿಯಾ): ಸ್ಫೂರ್ತಿಯುತ ಆಟ ಮುಂದುವರಿಸಿದ ಅಶ್ಮಿತಾ ಚಾಲಿಹಾ, ಸ್ವದೇಶದ ರಕ್ಷಿತಾ ರಾಮರಾಜ್ ಅವರನ್ನು ಸೋಲಿಸಿ, ಕೊರಿಯಾ ಮಾಸ್ಟರ್ಸ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ತಲುಪಿದರು.ಶನಿವಾರ 48 ನಿಮಿಷ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಶ್ಮಿತಾ 21–13, 16–21, 21–13 ರಿಂದ ಜಯಗಳಿಸಿ ಮೊದಲ ಬಾರಿ ಬಿಡಬ್ಲ್ಯುಎಫ್ ವಿಶ್ವ ಟೂರ್ ಸಿಂಗಲ್ಸ್ ಫೈನಲ್ಗೆ ಲಗ್ಗೆಹಾಕಿದರು. 26 ವರ್ಷ ವಯಸ್ಸಿನ ಅಶ್ಮಿತಾ ಬಲ ಮೊಣಕಾಲಿನ ನೋವಿನಿಂದ ಮೂರು ತಿಂಗಳು ವಿಶ್ರಾಂತಿ ಪಡೆದ ನಂತರ ಮೇ ತಿಂಗಳಲ್ಲಿ ಸಕ್ರಿಯ ಆಟಕ್ಕೆ ಮರಳಿದ್ದರು. ಬಳಿಕ ಮಕಾವು ಓಪನ್ ಸೆಮಿಫೈನಲ್ ತಲುಪಿದ್ದರು.ಫೈನಲ್ನಲ್ಲಿ ಅವರು ಚೀನಾದ ಹಾನ್ ಕ್ವಿಯಾನ್ಷಿ ಅವರನ್ನು ಎದುರಿಸಲಿದ್ದಾರೆ. 35ನೇ ಕ್ರಮಾಂಕದ ಹಾನ್ 22–20, 18–21 21–14 ರಿಂದ ದಕ್ಷಿಣ ಕೊರಿಯಾದ ಗಾ ರಾಮ್ ಕಿನ್ ಅವರನ್ನು ಹಿಮ್ಮೆಟ್ಟಿಸಿದರು.ವಿಶ್ವ ಕ್ರಮಾಂಕಪಟ್ಟಿಯಲ್ಲಿ 50ನೇ ಸ್ಥಾನದಲ್ಲಿರುವ ಅಶ್ಮಿತಾ, ಗುವಾಹಟಿಯಲ್ಲಿ ಪಾರ್ಕ್ ತೇ–ಸಾಂಗ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಬಿಡಬ್ಲ್ಯುಎಫ್ ವಿಶ್ವ ಟೂರ್ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಭಾರತದ ಆಟಗಾರ್ತಿ ಫೈನಲ್ ತಲುಪಿದಂತಾಗಿದೆ. ಕಳೆದ ವಾರ ತೈಪಿ ಓಪನ್ನಲ್ಲಿ ತನ್ವಿ ಶರ್ಮಾ ವಿಜೇತರಾಗಿದ್ದರು.