ಇಂದು ಟಾಕ್ಸಿಕ್ ಟ್ರೇಲರ್ ಬಿಡುಗಡೆ; ಬೆಂಗಳೂರಿನಲ್ಲಿ ಅದ್ದೂರಿ ವೇದಿಕೆ ಸಜ್ಜು
ರಾಕಿಂಗ್ ಸ್ಟಾರ್ ಯಶ್ ಅಭಿನಯ, ಗೀತು ಮೋಹನ್ದಾಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್’ ಸಿನಿಮಾದ ಟ್ರೇಲರ್ ಇಂದು (ಆ.8) ಬಿಡುಗಡೆಯಾಗುತ್ತಿದೆ. ಈ ಬಗ್ಗೆ ನಿರ್ದೇಶಕಿ ಗೀತು ಮೋಹನ್ದಾಸ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.ಇಂದು (ಆ.8) ಸಂಜೆ 7 ಗಂಟೆ 1 ನಿಮಿಷಕ್ಕೆ ಟ್ರೇ

ರಾಕಿಂಗ್ ಸ್ಟಾರ್ ಯಶ್ ಅಭಿನಯ, ಗೀತು ಮೋಹನ್ದಾಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್’ ಸಿನಿಮಾದ ಟ್ರೇಲರ್ ಇಂದು (ಆ.8) ಬಿಡುಗಡೆಯಾಗುತ್ತಿದೆ. ಈ ಬಗ್ಗೆ ನಿರ್ದೇಶಕಿ ಗೀತು ಮೋಹನ್ದಾಸ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.ಇಂದು (ಆ.8) ಸಂಜೆ 7 ಗಂಟೆ 1 ನಿಮಿಷಕ್ಕೆ ಟ್ರೇಲರ್ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಬೆಂಗಳೂರಿನ ಕಪಾಲಿ ಎಎಂಬಿ ಸಿನಿಮಾಸ್ನಲ್ಲಿ ಟಾಕ್ಸಿಕ್ ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಟ್ರೇಲರ್ ಬಿಡುಗಡೆಗೆ ದೊಡ್ಡ ವೇದಿಕೆ ಸಜ್ಜಾಗುತ್ತಿದೆ. ಆಗಸ್ಟ್ 8ರಂದು ಟಾಕ್ಸಿಕ್ ಟ್ರೇಲರ್: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಯಶ್ ಯಶ್ ಜತೆ ಕಿಯಾರಾ.. ಟಾಕ್ಸಿಕ್ ಸಿನಿಮಾದಲ್ಲಿ ನಟಿಸಲು ಅಸಲಿ ಕಾರಣ ಬಿಚ್ಚಿಟ್ಟ ನಟಿDETONATING.7:01 PM | TODAY#ToxicTrailer pic.twitter.com/FJAE0ku8Ro— KVN Productions (@KvnProductions) August 8, 2026 ಟಾಕ್ಸಿಕ್ ಚಿತ್ರತಂಡ ಅಧಿಕೃತವಾಗಿ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಬೆಂಗಳೂರಿನಿಂದಲೇ ಸಿನಿಮಾ ಪ್ರಚಾರವನ್ನು ಆರಂಭಿಸಲಿದೆ. ಆ ಬಳಿಕ ದೇಶದ ನಾನಾ ಭಾಗಗಳಿಗೆ ನಟ ಯಶ್ ಹಾಗೂ ಚಿತ್ರತಂಡ ಪ್ರಚಾರಕ್ಕೆ ತೆರಳಲಿದೆ.ಇನ್ನು, ಈ ಕಾರ್ಯಕ್ರವನ್ನು ಖ್ಯಾತ ಹಾಸ್ಯನಟ, ರೇಡಿಯೊ ಜಾಕಿ, ನೊಗರಾಜ್ ಮತ್ತು ಮಿಸ್ಟರ್ ನಾಗ್ಸ್ ಎಂದೇ ಜನಪ್ರಿಯರಾಗಿರುವ ನಟ ಡ್ಯಾನಿಶ್ ಸೇಠ್ ಅವರು ನಿರೂಪಣೆ ಜವಬ್ದಾರಿಯನ್ನು ವಹಿಸಿಕೊಂಡಿದ್ದಾರೆ.ಟಾಕ್ಸಿಕ್ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಯಾರು ಆಗಮಿಸಲಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಈ ಹಿಂದೆ ‘ಕೆಜಿಎಫ್’ ಸಿನಿಮಾದ ಟ್ರೇಲರ್ ಬಿಡುಗಡೆ ವೇಳೆ ನಟ ಶಿವರಾಜ್ ಕುಮಾರ್ ಅವರು ಆಗಮಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಈ ಬಾರಿ ಟಾಕ್ಸಿಕ್ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಯಾರು ಬರಲಿದ್ದಾರೆ ಎಂದು ಕಾದು ನೋಡಬೇಕಿದೆ.