ಬಿಜೆಪಿಯಲ್ಲಿ ಅಮರಿಂದರ್ ಸಿಂಗ್ ನನ್ನ ನೆಚ್ಚಿನ ನಾಯಕ: ರಾಹುಲ್ ಗಾಂಧಿ
ಚಂಡೀಗಢ: ಬಿಜೆಪಿ ನಾಯಕರ ಪೈಕಿ ಪಂಜಾಬಿನ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ತಮ್ಮ ನೆಚ್ಚಿನ ರಾಜಕಾರಣಿ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಣ್ಣಿಸಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿರುವ ಪಂಜಾಬಿನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಅವರು, ‘ರಾಹುಲ್ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಅವರ ಜತೆಗೆ ನನಗೆ ಉತ್ತಮ ಬಾಂಧವ್ಯ ಇದ್ದು, ಅದು ಮುಂದುವರಿಯ

ಚಂಡೀಗಢ: ಬಿಜೆಪಿ ನಾಯಕರ ಪೈಕಿ ಪಂಜಾಬಿನ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ತಮ್ಮ ನೆಚ್ಚಿನ ರಾಜಕಾರಣಿ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಣ್ಣಿಸಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿರುವ ಪಂಜಾಬಿನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಅವರು, ‘ರಾಹುಲ್ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಅವರ ಜತೆಗೆ ನನಗೆ ಉತ್ತಮ ಬಾಂಧವ್ಯ ಇದ್ದು, ಅದು ಮುಂದುವರಿಯುತ್ತದೆ. ಅದರೆ, ರಾಜಕೀಯವಾಗಿ ನಾನು ಬಿಜೆಪಿಗೆ ಬದ್ಧರಾಗಿರುತ್ತೇನೆ’ ಎಂದು ಹೇಳಿದ್ದಾರೆ.ಇನ್ಸ್ಟಾಗ್ರಾಮ್ನಲ್ಲಿ ‘ಜೆನ್–ಜಿ’ ವರ್ಗದವರ ಜತೆಗೆ ಗುರುವಾರ ರಾಹುಲ್ ಅವರು ಆರಂಭಿಸಿದ ‘ಆಸ್ಕ್ ಮಿ ಎನಿಥಿಂಗ್‘ (ನನ್ನನ್ನು ಏನು ಬೇಕಾದರೂ ಕೇಳಿ) ಸಂವಾದದಲ್ಲಿ ಅಮರಿಂದರ್ ಸಿಂಗ್ ಅವರ ಬಗ್ಗೆ ಉಲ್ಲೇಖಿಸಿದ್ದಾರೆ.‘ಅಮರಿಂದರ್ ಅವರ ಜತೆ ನನಗೆ ಉತ್ತಮ ಒಡನಾಟವಿದೆ. ಅವರು ಸೌಮ್ಯ ಸ್ವಭಾವದವರು. ಸೇನಾ ಇತಿಹಾಸ ತಜ್ಞರು. ನಮಸ್ಕಾರ ಅಂಕಲ್’ ಎಂದು ಹೇಳಿದ್ದಾರೆ.‘ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದು ಸಂತೋಷದ ವಿಷಯ’ ಎಂದು ಪ್ರತಿಕ್ರಿಯಿಸಿರುವ ಅಮರಿಂದರ್, ‘ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರು ಚಿಕ್ಕವರಿದ್ದಾಗಿನಿಂದಲೂ ನನಗೆ ಪರಿಚಿತರು. ಅವರ ತಂದೆ ಹಾಗೂ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರು ನನ್ನ ಸಹಪಾಠಿ ಮತ್ತು ಸ್ನೇಹಿತ’ ಎಂದು ಸ್ಮರಿಸಿದ್ದಾರೆ.