‘ತ್ವರಿತ, ಪಾರದರ್ಶಕ ನೇಮಕಾತಿ ಸಾಧ್ಯ’
ಎರಡು ಹಂತಗಳಲ್ಲಿ ಪರೀಕ್ಷಾ ಸುಧಾರಣೆಗೆ ಆದ್ಯತೆ ನೀಡಲಾಗಿದೆ. ಒಂದು ಪರೀಕ್ಷಾ ಪೂರ್ವಸಿದ್ಧತೆಯ ಹಂತ, ಮತ್ತೊಂದು ಪರೀಕ್ಷೆ–ಫಲಿತಾಂಶದ ಹಂತ. ಯಾವುದೇ ಹುದ್ದೆಯ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ತಕ್ಷಣವೇ ಪರೀಕ್ಷೆಯ ಪೂರ್ವಸಿದ್ಧತೆಗಳನ್ನು ಆರಂಭಿಸಲಾಗುತ್ತದೆ.* ಪರೀಕ್ಷಾ ಸುಧಾರಣೆಗೆ ಕೈಗೊಂಡ ಕ್ರಮಗಳು ಏನು?ಎರಡು ಹಂತಗಳಲ್ಲಿ ಪರೀಕ್ಷಾ ಸುಧಾರಣೆಗೆ ಆದ್ಯತೆ ನೀಡಲಾಗಿದೆ. ಒ

ಎರಡು ಹಂತಗಳಲ್ಲಿ ಪರೀಕ್ಷಾ ಸುಧಾರಣೆಗೆ ಆದ್ಯತೆ ನೀಡಲಾಗಿದೆ. ಒಂದು ಪರೀಕ್ಷಾ ಪೂರ್ವಸಿದ್ಧತೆಯ ಹಂತ, ಮತ್ತೊಂದು ಪರೀಕ್ಷೆ–ಫಲಿತಾಂಶದ ಹಂತ. ಯಾವುದೇ ಹುದ್ದೆಯ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ತಕ್ಷಣವೇ ಪರೀಕ್ಷೆಯ ಪೂರ್ವಸಿದ್ಧತೆಗಳನ್ನು ಆರಂಭಿಸಲಾಗುತ್ತದೆ.* ಪರೀಕ್ಷಾ ಸುಧಾರಣೆಗೆ ಕೈಗೊಂಡ ಕ್ರಮಗಳು ಏನು?ಎರಡು ಹಂತಗಳಲ್ಲಿ ಪರೀಕ್ಷಾ ಸುಧಾರಣೆಗೆ ಆದ್ಯತೆ ನೀಡಲಾಗಿದೆ. ಒಂದು ಪರೀಕ್ಷಾ ಪೂರ್ವಸಿದ್ಧತೆಯ ಹಂತ, ಮತ್ತೊಂದು ಪರೀಕ್ಷೆ–ಫಲಿತಾಂಶದ ಹಂತ. ಯಾವುದೇ ಹುದ್ದೆಯ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ತಕ್ಷಣವೇ ಪರೀಕ್ಷೆಯ ಪೂರ್ವಸಿದ್ಧತೆಗಳನ್ನು ಆರಂಭಿಸಲಾಗುತ್ತದೆ. ಪರೀಕ್ಷಾ ಕೇಂದ್ರಗಳ ಆಯ್ಕೆ, ಪ್ರಶ್ನೆಪತ್ರಿಕೆ ರೂಪಿಸುವುದು, ಪರೀಕ್ಷಾ ಮೇಲ್ವಿಚಾರಣೆ, ಸಿ.ಸಿ.ಟಿ.ವಿ. ಕ್ಯಾಮೆರಾಗಳ ಪರಿಶೀಲನೆಗೆ ಒತ್ತು ನೀಡಲಾಗುತ್ತದೆ.ಪರೀಕ್ಷಾ ದಿನ ಮೊಬೈಲ್ ಆ್ಯಪ್ ಮೂಲಕ ಅಭ್ಯರ್ಥಿಗಳ ಮುಖಚಹರೆ ಪರಿಶೀಲಿಸಿಯೇ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ನೀಡಲಾಗುತ್ತದೆ. ಅಭ್ಯರ್ಥಿಯ ಮುಖಚಹರೆ ಮತ್ತು ಕ್ಯುಆರ್ ಕೋಡ್ ವ್ಯವಸ್ಥೆ ಮೂಲಕ ಅಭ್ಯರ್ಥಿಯ ನೈಜತೆ ಪರಿಶೀಲಿಸಲಾಗುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿ, ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಪಡೆಯುವ ಅಭ್ಯರ್ಥಿಯ ಮುಖಚಹರೆ ಹೊಂದಾಣಿಕೆ ಆಗಲೇಬೇಕು. ಆ ಮೂಲಕ ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದನ್ನು ಸಂಪೂರ್ಣ ತಡೆಯಲಾಗಿದೆ.ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಮೊಬೈಲ್ ಜಾಮರ್ ಅಳವಡಿಸಲಾಗುತ್ತದೆ. ಇದರಿಂದ ಪರೀಕ್ಷಾ ಮೇಲ್ವಿಚಾರಕರು ಮೊಬೈಲ್ ಮೂಲಕ ಹೊರಗಿನ ವ್ಯಕ್ತಿಗಳಿಗೆ ಪ್ರಶ್ನೆಗಳನ್ನು ರವಾನಿಸಲು, ಕರೆ ಮಾಡಲು ಅವಕಾಶ ಆಗುವುದಿಲ್ಲ. ಪರೀಕ್ಷಾ ಅಕ್ರಮಗಳನ್ನು ತಡೆಯಲು ವೆಬ್ಕಾಸ್ಟಿಂಗ್ ಮೂಲಕ ನೇರವಾಗಿ ನಿಗಾ ವಹಿಸಲಾಗುತ್ತದೆ.* ಪ್ರಶ್ನೆಪತ್ರಿಕೆ ಸೋರಿಕೆ ತಡೆ ಸಂಪೂರ್ಣ ಸಾಧ್ಯವಾಗಿದೆಯೇ?ನೇಮಕಾತಿ ಪರೀಕ್ಷೆಗಳ ಬಹುದೊಡ್ಡ ಸವಾಲು ಎಂದರೆ ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ನೋಡಿಕೊಳ್ಳುವುದು. ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಹಂತದಿಂದ ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ತಲುಪಿಸುವವರೆಗೆ ಪ್ರತಿ ಹಂತದಲ್ಲೂ ಎಚ್ಚರ ವಹಿಸದೇ ಇದ್ದರೆ ಪ್ರಾಧಿಕಾರದ ಶ್ರಮ, ವಿದ್ಯಾರ್ಥಿಗಳ ಭವಿಷ್ಯದ ಕನಸು ನುಚ್ಚುನೂರಾಗುತ್ತವೆ. ಹಾಗಾಗಿ, ಒಂದು ವಿಷಯದ ಅಧ್ಯಾಪಕರ ಗುಂಪಿಗೆ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಹೊಣೆಗಾರಿಕೆ ನೀಡುವುದನ್ನು ನಿಲ್ಲಿಸಲಾಗಿದೆ. ಒಂದು ವಿಷಯದ ಹಲವು ಅಧ್ಯಾಪಕರ ಗುಂಪಿನಿಂದ ಪ್ರಶ್ನೆಗಳನ್ನು ಪಡೆಯಲಾಗುತ್ತದೆ. ಭಾಷಾ ವಿಷಯ ಹೊರತುಪಡಿಸಿ ಇತರೆ ವಿಷಯಗಳಿಗೆ ಹೊರ ರಾಜ್ಯದ ವಿಷಯ ತಜ್ಞರ ನೆರವನ್ನೂ ಪಡೆಯಲಾಗುತ್ತದೆ. ಅಂತಹ ಪ್ರಶ್ನೆಗಳ ಬ್ಯಾಂಕ್ ಮೂಲಕ ನೇಮಕಾತಿ ಪರೀಕ್ಷೆಯ ಪ್ರಶ್ನೆಗಳನ್ನು ಬಳಸಿಕೊಳ್ಳಲಾಗುತ್ತದೆ. ಹಾಗಾಗಿ, ಪ್ರಶ್ನೆಗಳನ್ನು ನೀಡಿದವರಿಗೂ ಪ್ರಶ್ನೆಪತ್ರಿಕೆಯಲ್ಲಿ ಇರಬಹುದಾದ ಪ್ರಶ್ನೆಗಳ ಬಗ್ಗೆ ಗೊತ್ತಾಗುವುದಿಲ್ಲ.ಪ್ರಶ್ನೆಪತ್ರಿಕೆಗಳನ್ನು ಅತ್ಯಂತ ವಿಶ್ವಾಸಾರ್ಹ ಮುದ್ರಣಾಲಯಗಳಿಂದ ಮುದ್ರಿಸಿ, ಏಳು ಪದರಗಳನ್ನು ಒಳಗೊಂಡ ಬಾಕ್ಸ್ ಮಾಡಿ ಖಜಾನೆಗಳಿಗೆ ಕಳುಹಿಸಲಾಗುತ್ತದೆ. ಪರೀಕ್ಷೆ ಆರಂಭವಾಗುವ ಒಂದು ಗಂಟೆ ಮೊದಲು ಕೋಡ್ ನೀಡಲಾಗುತ್ತದೆ. ಕೋಡ್ ಕೊಡುವ ವೇಳೆಗೆ ಶೇ 90ರಷ್ಟು ವಿದ್ಯಾರ್ಥಿಗಳು ಕೊಠಡಿಯ ಒಳಗೆ ಇರುತ್ತಾರೆ. ಏಳು ಪದರಗಳನ್ನು ತೆರೆಯುವ ಮೊದಲು ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಸಿಬ್ಬಂದಿ ಜತೆಗೆ ಐವರು ವಿದ್ಯಾರ್ಥಿಗಳು ಕಡ್ಡಾಯವಾಗಿ ಇರಬೇಕು. ಪ್ರತಿ ಕೊಠಡಿಗೆ ಕಳುಹಿಸಿದ ಬಂಡಲ್ಗಳನ್ನು ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲಿನಲ್ಲಿ ತೆರೆಯಲಾಗುತ್ತದೆ. ಇಂತಹ ನಿರಂತರ ಪ್ರಯತ್ನ, ನಿಗಾ ವ್ಯವಸ್ಥೆಯ ಫಲವಾಗಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿಲ್ಲ.* ಸುಧಾರಣೆ ಸಾಧ್ಯವಾಗಿದ್ದು ಹೇಗೆ?ನೇಮಕಾತಿ ಪರೀಕ್ಷೆಗಳ ಬಗ್ಗೆ ಅಭ್ಯರ್ಥಿಗಳಿಗೆ ಇರುವ ಅನುಮಾನ, ಹಣ ಕೊಟ್ಟರೆ ಕೆಲಸ ಆಗುತ್ತದೆ, ಪ್ರಭಾವ ಇದ್ದವರಿಗೆ ಅವಕಾಶ ಸಿಗುತ್ತದೆ, ಕಷ್ಟಪಟ್ಟು ಓದಿದ ಪ್ರತಿಭಾವಂತರಿಗೆ ಕೆಲಸ ಸಿಗುವುದು ಕಷ್ಟ... ಇತ್ಯಾದಿ ನಕಾರಾತ್ಮಕ ಅಂಶಗಳ ಮೇಲೆ ಗಮನ ಸೆಳೆದಿದ್ದು ಸಾಮಾಜಿಕ ಜಾಲತಾಣಗಳು. ಪ್ರತಿ ಪರೀಕ್ಷೆ ನಡೆದಾಗಲೂ ಅಭ್ಯರ್ಥಿಗಳು ವ್ಯಕ್ತಪಡಿಸುವ ಇಂತಹ ಅನುಮಾನ, ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ್ದು ಮತ್ತು ಆರೋಪಗಳಲ್ಲಿನ ಸತ್ಯಾಸತ್ಯತೆ ಕಂಡುಕೊಳ್ಳಲು ನಡೆಸಿದ ಸರಣಿ ಕಾರ್ಯಾಗಾರಗಳ ಫಲವಾಗಿ ಪ್ರಾಧಿಕಾರ ನಡೆಸುವ ಪರೀಕ್ಷೆಗಳ ಸುಧಾರಣೆಗೆ ಸಹಕಾರಿಯಾಯಿತು.* ಹಣ ಇದ್ದವರಿಗೆ ಹುದ್ದೆ ಎಂಬುದು ಸತ್ಯವೇ?ಕೆಲವರಿಗೆ ಅಂತಹ ಅನುಭವ ಆಗಿರಬಹುದು. ಇಂತಹ ವಿಚಾರಗಳಲ್ಲಿ ಪರೀಕ್ಷಾ ಆಯೋಗ, ಪ್ರಾಧಿಕಾರಗಳ ಒಂದು ಪಾಲು ತಪ್ಪಿದ್ದರೆ, ಉದ್ಯೋಗ ಪಡೆಯಲು ವಾಮ ಮಾರ್ಗವನ್ನೇ ನಂಬಿಕೊಂಡ ಅಭ್ಯರ್ಥಿಗಳ ತಪ್ಪು ದೊಡ್ಡ ಪಾಲು. ಈಚೆಗೆ ನಡೆದ ಒಂದು ಉದಾಹರಣೆ ಹೇಳುವೆ. ನಮ್ಮ ಪರಿಚಿತರೊಬ್ಬರ ಸಂಬಂಧಿ ಹುಡುಗ ಮೂರು ವರ್ಷಗಳಿಂದ ಪಶುವೈದ್ಯ ಹುದ್ದೆಯ ನೇಮಕಾತಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ. ಬುದ್ಧಿವಂತ ಹುಡುಗ. ಮಧ್ಯವರ್ತಿಯೊಬ್ಬರ ಆಮಿಷಕ್ಕೆ ಒಳಗಾಗಿ ಒಎಂಆರ್ ಶೀಟ್ ಖಾಲಿ ಬಿಟ್ಟು ಬಂದಿದ್ದ. ಹಣ, ಅವಕಾಶ ಎರಡೂ ಕಳೆದುಕೊಂಡಿದ್ದಾನೆ. ಇಂತಹ ವಾಮಮಾರ್ಗಗಳಿಗೆ ಉದ್ಯೋಗಾಕಾಂಕ್ಷಿಗಳು ಬಲಿಯಾಗಬಾರದು. ಮೊದಲು ಒಬ್ಬ ವಿದ್ಯಾರ್ಥಿಯ ಫಲಿತಾಂಶವನ್ನು ಆತನೊಬ್ಬನೇ ನೋಡಬಹುದಿತ್ತು. ಈಗ ಎಲ್ಲ ವಿದ್ಯಾರ್ಥಿಗಳ ಅಂಕಗಳನ್ನೂ ಪರಿಶೀಲಿಸಬಹುದು. ಒಎಂಆರ್ ಶೀಟ್ ಡೌನ್ಲೋಡ್ ಮಾಡಿಕೊಂಡು ಹೋಲಿಕೆ ಮಾಡಬಹುದು. ಒಂದು ಅಂಕ ವ್ಯತ್ಯಾಸವಾದರೂ ದೂರು ನೀಡುವ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಅಭ್ಯರ್ಥಿ ಪೋಷಕರಿಗೂ ಸುಳ್ಳು ಹೇಳಿ, ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.* ಒಎಂಆರ್ ಶೀಟ್ ಖಾಲಿ ಬಿಡುವುದು ಏಕೆ? ಮಧ್ಯವರ್ತಿಗಳು ವ್ಯವಸ್ಥೆಯನ್ನು ಬಳಸಿಕೊಂಡು ಖಾಲಿ ಬಿಟ್ಟ ಒಎಂಆರ್ ಶೀಟ್ ತುಂಬಿ ಮೌಲ್ಯ ಮಾಪನಕ್ಕೆ ನೀಡುತ್ತಾರೆ ಎಂಬ ಸುದ್ದಿ ಕೇಳಿದ್ದೆ. ಆದರೆ, ಕರ್ನಾಟಕದಲ್ಲಿ ಈಗ ಅಂತಹ ಸಾಧ್ಯತೆಗಳು ಕಡಿಮೆ. ಪರೀಕ್ಷಾ ವ್ಯವಸ್ಥೆ ಸಾಕಷ್ಟು ಸುಧಾರಣೆಯಾಗಿದೆ. ನೇಮಕಾತಿ ಪರೀಕ್ಷೆಗಳು ನಡೆದ ದಿನವೇ ಕೆಇಎ ಅಭ್ಯರ್ಥಿಗಳ ಒಎಂಆರ್ ಶೀಟ್ಗಳನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸುತ್ತದೆ. ಪರೀಕ್ಷೆಯ ನಂತರ ಒಎಂಆರ್ ಶೀಟ್ಗಳನ್ನು ತಿದ್ದದಂತೆ ಮಾಡಲು ಒಎಂಆರ್ ಶೀಟ್ಗಳಲ್ಲಿ ನಾಲ್ಕು ವೃತ್ತದ ಬದಲು ಐದು ವೃತ್ತಗಳನ್ನು ಪರಿಚಯಿಸಿದೆ. ಸರಿ ಉತ್ತರ ತಿಳಿಯದ ವಿದ್ಯಾರ್ಥಿಗಳು ಮೊದಲು ಆ ವತ್ತಗಳನ್ನು ಖಾಲಿ ಬಿಡುತ್ತಿದ್ದರು. ಈಗ ಉತ್ತರ ಗೊತ್ತಿಲ್ಲದಿದ್ದರೆ ಐದನೇ ವೃತ್ತ (ಉತ್ತರ ಗೊತ್ತಿಲ್ಲ) ತುಂಬುವುದನ್ನು ಕಡ್ಡಾಯಗೊಳಿಸಲಾಗಿದೆ. * ಸಹಾಯಕ ಪ್ರಾಧ್ಯಾಪಕರ ನೇಮಕದಲ್ಲಿ ಅಕ್ರಮ ನಡೆದಿತ್ತಲ್ಲ ? ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ 1,242 ಹುದ್ದೆಗಳಿಗೆ ಕೆಲ ವರ್ಷಗಳ ಹಿಂದೆ ನಡೆದಿದ್ದ ನೇಮಕಾತಿಯಲ್ಲಿ ಒಂದು ವಿಷಯದ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ್ದ ಪ್ರಾಧ್ಯಾಪಕರು ಲೋಪ ಎಸಗಿದ್ದರಂತೆ. ಹಾಗಾಗಿಯೇ, ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಬದಲು ಪ್ರಶ್ನೆಪತ್ರಿಕೆ ಬ್ಯಾಂಕ್ ರೂಪಿಸಲಾಗಿದೆ. ಲೋಪಗಳಿಲ್ಲದೆ ಪರೀಕ್ಷೆಗಳನ್ನು ನಡೆಸಲು ನಿರಂತರ ಪ್ರಯತ್ನ ನಡೆಸಲಾಗುತ್ತಿದೆ. ಕೆಇಎ ಶೇ 99ರಷ್ಟು ಪಾರದರ್ಶಕ ಪರೀಕ್ಷೆ ನಡೆಸುವ ಹಂತಕ್ಕೆ ತಲುಪಿದೆ. ಪ್ರತಿ ಪರೀಕ್ಷೆಯನ್ನೂ ಕಟ್ಟೆಚ್ಚರಗಳೊಂದಿಗೆ ನಡೆಸಲಾಗುತ್ತಿದೆ.* ತ್ವರಿತ ಫಲಿತಾಂಶದಿಂದ ಅಭ್ಯರ್ಥಿಗಳಿಗೆ ಹೇಗೆ ಸಹಾಯವಾಗುತ್ತದೆ?ಯಾವುದೇ ಪರೀಕ್ಷೆಯನ್ನು ನಡೆಸಿದ ತಕ್ಷಣ ಮೌಲ್ಯಮಾಪನ ನಡೆಸಿ, 10–15 ದಿನಗಳ ಒಳಗೆ ಫಲಿತಾಂಶ ನೀಡಿದರೆ ವಿದ್ಯಾರ್ಥಿಗಳಲ್ಲಿ ನಂಬಿಕೆ ಬೆಳೆಯುತ್ತದೆ. ಯಶಸ್ಸು ಸಿಗದ ವಿದ್ಯಾರ್ಥಿ ಮುಂದಿನ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಾನೆ. ಅದಕ್ಕಾಗಿಯೇ ನಿಗದಿತ ಅವಧಿಯಲ್ಲಿ ನೇಮಕಾತಿಗಳು ನಿರಂತರವಾಗಿ ನಡೆಯಬೇಕು. ಆಗ ಅಭ್ಯರ್ಥಿ ಒಂದಿಲ್ಲೊಂದು ಪರೀಕ್ಷೆಯಲ್ಲಿ ಯಶ ಕಾಣುತ್ತಾನೆ. ಅಲ್ಲದೆ, ಕೇಂದ್ರ ಮತ್ತು ರಾಜ್ಯ ಪರೀಕ್ಷಾ ಪಠ್ಯಕ್ರಮಗಳು ಏಕರೀತಿಯಲ್ಲಿ ಇದ್ದರೆ ಕೇಂದ್ರ, ರಾಜ್ಯಗಳ ಹುದ್ದೆಗಳಿಗೂ ಏಕರೀತಿಯಲ್ಲಿ ಪ್ರಯತ್ನ ಮಾಡಬಹುದು.* ಕೆಇಎ ನೇಮಕಾತಿಗೆ ಬೇಡಿಕೆ ಹೆಚ್ಚುತ್ತಿದೆಯಲ್ಲ?ಕೆಇಎ ಅತ್ಯಂತ ಪಾರದರ್ಶಕವಾಗಿ, ತ್ವರಿತವಾಗಿ ನೇಮಕಾತಿ ಪರೀಕ್ಷೆಗಳನ್ನು ನಡೆಸುತ್ತಿರುವ ಕಾರಣ ಹಲವು ಇಲಾಖೆಗಳು ಖಾಲಿ ಹುದ್ದೆಗಳ ಭರ್ತಿಗೆ ಪರೀಕ್ಷೆ ನಡೆಸುವ ಜವಾಬ್ದಾರಿ ನೀಡುತ್ತಿವೆ.ಸರ್ಕಾರದ 18 ಇಲಾಖೆಗಳ ವಿವಿಧ ವೃಂದಗಳ 11,938 ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಿದ್ಧತೆ ನಡೆಸಿದೆ. ಯಾವುದೇ ಅಕ್ರಮಗಳಿಗೆ ಆಸ್ಪದ ಇಲ್ಲದಂತೆ, ಪಾರದರ್ಶಕತೆಯಿಂದ ತ್ವರಿತಗತಿಯಲ್ಲಿ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಕಾರಣಕ್ಕೆ ಬಹುತೇಕ ಇಲಾಖೆಗಳು ಖಾಲಿ ಹುದ್ದೆಗಳ ಭರ್ತಿಗೆ ಕೆಇಎ ಕಡೆಗೆ ಒಲವು ತೋರಿಸುತ್ತಿವೆ.ಎರಡು ವರ್ಷಗಳಲ್ಲಿ ಸುಮಾರು 9,500 ಹುದ್ದೆಗಳ ಭರ್ತಿಗೆ ಯಶಸ್ವಿಯಾಗಿ ಪರೀಕ್ಷೆ ನಡೆಸಿ, ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಆಯಾ ಇಲಾಖೆಗಳಿಗೆ ನೀಡಲಾಗಿದೆ. ಈ ನೇಮಕಾತಿ ಸಂದರ್ಭದಲ್ಲಿ ಅಂದಾಜು 22.50 ಲಕ್ಷ ಮಂದಿ ಅರ್ಜಿ ಸಲ್ಲಿಸಿ, ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, ಅದರ ನಿರ್ವಹಣೆಯನ್ನು ವ್ಯವಸ್ಥಿತವಾಗಿ, ಯಾವುದೇ ವಿವಾದ ಇಲ್ಲದೆ ಮಾಡಿ ಮುಗಿಸಲಾಗಿದೆ. ಕೆಲವು ಇಲಾಖೆಗಳಲ್ಲಿನ ಖಾಲಿ ಹುದ್ದೆಗಳಿಗೆ ನಡೆಸಿದ ನೇಮಕಾತಿಯ ಫಲಿತಾಂಶವನ್ನು ಕೇವಲ ಹತ್ತು ದಿನಗಳಲ್ಲೇ ನೀಡಲಾಗಿದೆ.* ಕೆಪಿಎಸ್ಸಿ ಮಾದರಿ ಅಧಿಕಾರ ಕೆಇಎಗೆ ಶಕ್ತಿ ತುಂಬಲಿದೆಯೇ?ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಮಾದರಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಲು, ದಾಖಲೆಗಳ ಪರಿಶೀಲನೆ ನಡೆಸಿ, ಅಭ್ಯರ್ಥಿ ಆಯ್ಕೆಪಟ್ಟಿ ಪ್ರಕಟಿಸಲು ಸರ್ಕಾರ ಅನುಮತಿ ನೀಡಿರುವುದರಿಂದ ಭವಿಷ್ಯದ ನೇಮಕಾತಿ ಪರೀಕ್ಷೆಗಳನ್ನು ತ್ವರಿತವಾಗಿ, ಪಾರದರ್ಶಕವಾಗಿ ನಡೆಸಲು ಸಾಧ್ಯವಾಗಲಿದೆ.ಪ್ತಸ್ತುತ ಕೆಇಎ ವಿವಿಧ ಹುದ್ದೆಗಳ ನೇಮಕಾತಿಗೆ ಪ್ರಸ್ತಾವ ಸ್ವೀಕೃತವಾದ ನಂತರ ಅಧಿಸೂಚನೆ ಹೊರಡಿಸಿ, ಪರೀಕ್ಷೆ ನಡೆಸುತ್ತಿದ್ದು, ನಂತರ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದಲ್ಲಿ ಅರ್ಹತಾ ಪಟ್ಟಿ ಸಿದ್ಧಪಡಿಸಿ ಆಯಾ ಇಲಾಖೆಗಳಿಗೆ ಕಳುಹಿಸಿಕೊಡುತ್ತದೆ. ಕೆಇಎಯಿಂದ ಅರ್ಹತಾ ಪಟ್ಟಿ ತಲುಪಿದ ನಂತರವೂ ನೇಮಕಾತಿ ಆದೇಶ ನೀಡಲು ಕೆಲ ಇಲಾಖೆಗಳು ಬಹಳ ಸಮಯ ವ್ಯರ್ಥ ಮಾಡುತ್ತಿವೆ. ಇಂತಹ ವಿಳಂಬ ತಪ್ಪಿಸಲು, ವಿವಿಧ ಇಲಾಖೆಗಳ ನೇಮಕಾತಿ ಪಟ್ಟಿಯಲ್ಲಿ ಅಭ್ಯರ್ಥಿಗಳ ಪುನರಾವರ್ತನೆ ತಪ್ಪಿಸಲು ಕೆಪಿಎಸ್ಸಿ ಮಾದರಿಯ ಅಧಿಕಾರದ ಅಗತ್ಯವಿತ್ತು.ಒಂದೇ ರೀತಿಯ ವಿದ್ಯಾರ್ಹತೆ ಹಾಗೂ ಒಂದೇ ಪಠ್ಯಕ್ರಮ ಇರುವ ವಿವಿಧ ಇಲಾಖೆಗಳ, ವಿವಿಧ ಹುದ್ದೆಗಳ ಪ್ರಸ್ತಾವಗಳಿಗೆ ಒಂದೇ ಬಾರಿ ಅಧಿಸೂಚನೆಯನ್ನು ಹೊರಡಿಸಿ, ಪರೀಕ್ಷೆ ನಡೆಸಲಾಗುವುದು. ಸರ್ಕಾರ ಅನುಮತಿ ನೀಡಿದರೆ ಜನವರಿ ಹಾಗೂ ಅಕ್ಟೋಬರ್ನಲ್ಲಿ ವರ್ಷಕ್ಕೆ ಎರಡು ಬಾರಿ ನಿಯಮಿತವಾಗಿ ನೇಮಕಾತಿ ಪರೀಕ್ಷೆ ನಡೆಸಲು ಪ್ರಾಧಿಕಾರ ಸಿದ್ಧವಿದೆ.* ಕೆಇಎ ನೇಮಕಾತಿಗೆ ಬೇಡಿಕೆ ಹೆಚ್ಚುತ್ತಿದೆಯಲ್ಲ?ಕೆಇಎ ಅತ್ಯಂತ ಪಾರದರ್ಶಕವಾಗಿ, ತ್ವರಿತವಾಗಿ ನೇಮಕಾತಿ ಪರೀಕ್ಷೆಗಳನ್ನು ನಡೆಸುತ್ತಿರುವ ಕಾರಣ ಹಲವು ಇಲಾಖೆಗಳು ಖಾಲಿ ಹುದ್ದೆಗಳ ಭರ್ತಿಗೆ ಪರೀಕ್ಷೆ ನಡೆಸುವ ಜವಾಬ್ದಾರಿ ನೀಡುತ್ತಿವೆ.ಸರ್ಕಾರದ 18 ಇಲಾಖೆಗಳ ವಿವಿಧ ವೃಂದಗಳ 11,938 ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಿದ್ಧತೆ ನಡೆಸಿದೆ. ಯಾವುದೇ ಅಕ್ರಮಗಳಿಗೆ ಆಸ್ಪದ ಇಲ್ಲದಂತೆ, ಪಾರದರ್ಶಕತೆಯಿಂದ ತ್ವರಿತಗತಿಯಲ್ಲಿ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಕಾರಣಕ್ಕೆ ಬಹುತೇಕ ಇಲಾಖೆಗಳು ಖಾಲಿ ಹುದ್ದೆಗಳ ಭರ್ತಿಗೆ ಕೆಇಎ ಕಡೆಗೆ ಒಲವು ತೋರಿಸುತ್ತಿವೆ.ಎರಡು ವರ್ಷಗಳಲ್ಲಿ ಸುಮಾರು 9,500 ಹುದ್ದೆಗಳ ಭರ್ತಿಗೆ ಯಶಸ್ವಿಯಾಗಿ ಪರೀಕ್ಷೆ ನಡೆಸಿ, ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಆಯಾ ಇಲಾಖೆಗಳಿಗೆ ನೀಡಲಾಗಿದೆ. ಈ ನೇಮಕಾತಿ ಸಂದರ್ಭದಲ್ಲಿ ಅಂದಾಜು 22.50 ಲಕ್ಷ ಮಂದಿ ಅರ್ಜಿ ಸಲ್ಲಿಸಿ, ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, ಅದರ ನಿರ್ವಹಣೆಯನ್ನು ವ್ಯವಸ್ಥಿತವಾಗಿ, ಯಾವುದೇ ವಿವಾದ ಇಲ್ಲದೆ ಮಾಡಿ ಮುಗಿಸಲಾಗಿದೆ. ಕೆಲವು ಇಲಾಖೆಗಳಲ್ಲಿನ ಖಾಲಿ ಹುದ್ದೆಗಳಿಗೆ ನಡೆಸಿದ ನೇಮಕಾತಿಯ ಫಲಿತಾಂಶವನ್ನು ಕೇವಲ ಹತ್ತು ದಿನಗಳಲ್ಲೇ ನೀಡಲಾಗಿದೆ.