ಭೂಮಿ ಖರೀದಿಗೆ ಸಹಾಯ ಕೋರಿದ್ದ ಕ್ರಿಕೆಟಿಗ ರಿಷಭ್ ಪಂತ್ಗೆ ಸಿಎಂ ಧಾಮಿ ಭರವಸೆ
ಡೆಹ್ರಾಡೂನ್: ಭೂಮಿ ಖರೀದಿಸಲು ಸಹಾಯ ಕೋರಿ ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ (Rishabh Pant) ಮಾಡಿದ್ದ ಮನವಿಗೆ ಉತ್ತರಾಖಂಡದ ಸಿಎಂ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಅವರು ಪ್ರತಿಕ್ರಿಯಸಿದ್ದಾರೆ. ಶುಕ್ರವಾರ (ಆ.7) ಮಧ್ಯರಾತ್ರಿ ರಿಷಬ್ ಪಂತ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು, ಉತ್ತರಾಖಂಡದಲ್ಲಿ ನನ್ನ ಮೊದಲ ಮನೆ ನಿರ್ಮಿಸಲು ಜಾಗ ಕೊಡಿಸಿ

ಡೆಹ್ರಾಡೂನ್: ಭೂಮಿ ಖರೀದಿಸಲು ಸಹಾಯ ಕೋರಿ ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ (Rishabh Pant) ಮಾಡಿದ್ದ ಮನವಿಗೆ ಉತ್ತರಾಖಂಡದ ಸಿಎಂ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಅವರು ಪ್ರತಿಕ್ರಿಯಸಿದ್ದಾರೆ. ಶುಕ್ರವಾರ (ಆ.7) ಮಧ್ಯರಾತ್ರಿ ರಿಷಬ್ ಪಂತ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು, ಉತ್ತರಾಖಂಡದಲ್ಲಿ ನನ್ನ ಮೊದಲ ಮನೆ ನಿರ್ಮಿಸಲು ಜಾಗ ಕೊಡಿಸಿ ಎಂದು ಮನವಿ ಮಾಡಿ, ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಟ್ಯಾಗ್ ಮಾಡಿದ್ದರು. ಇದಕ್ಕೆ ಸಿಎಂ ಪುಷ್ಕರ್ ಧಾಮಿ ಪ್ರತಿಕ್ರಿಯಿಸಿದ್ದು, ನಿಯಮದ ಪ್ರಕಾರವೇ ಈ ಕೆಲಸ ಮಾಡಿಕೊಟ್ಟು, ಪಂತ್ ಅವರಿಗೆ ಎಲ್ಲಾ ರೀತಿಯ ಸಹಾಯ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕುಡಿದು ಮರ್ಸಿಡಿಸ್ ಕಾರು ಚಲಾಯಿಸಿದ ಪೊಲೀಸ್ ಅಧಿಕಾರಿ ಪುತ್ರ; ಅಪಘಾತಕ್ಕೆ ವೃದ್ಧೆ ಬಲಿ ಪಂತ್ ಮನವಿಗೆ ಸಿಎಂ ಪ್ರತಿಕ್ರಿಯೆ: ನೀವು ಉತ್ತರಾಖಂಡದ ಹೆಮ್ಮೆ. ನಿಮ್ಮ ಅದ್ಭುತ ಆಟ ಮತ್ತು ಸಾಧನೆಗಳಿಂದ ನೀವು ದೇಶ ಹಾಗೂ ಜಗತ್ತಿನಲ್ಲಿ ದೇವಭೂಮಿಯ ಹೆಸರನ್ನು ಬೆಳಗಿದ್ದೀರಿ. ನಿಮ್ಮ ತಾಯ್ನಾಡಿನ ಮೇಲಿನ ಪ್ರೀತಿ ಮತ್ತು ಇಲ್ಲಿಗೆ ಮರಳುವ ನಿಮ್ಮ ಭಾವನೆ ಅತ್ಯಂತ ಶ್ಲಾಘನೀಯ. ನೀವು ಪ್ರಸ್ತಾಪಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ, ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಅವರು ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸಿ, ನಿಯಮಗಳ ಪ್ರಕಾರ ನಿಮಗೆ ಸಿಗಬೇಕಾದ ಎಲ್ಲಾ ರೀತಿಯ ಸಹಾಯವನ್ನು ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಪಂತ್ನಲ್ಲಿ ಪೋಸ್ಟ್ನಲ್ಲಿ ಏನಿದೆ? ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸಿದ್ದಕ್ಕೆ ಉಡುಗೊರೆಯಾಗಿ ಜಾಗ ಸಿಕ್ಕರೆ ಚೆನ್ನಾಗಿರುತ್ತೆ, ಆದರೆ ನಿಮಗೆ ಒಪ್ಪಿಗೆಯಿದ್ದರೆ ನಾನು ಅದನ್ನು ಸರ್ಕಾರ ನಿಗದಿಪಡಿಸಿರುವ ದರಕ್ಕೆ ಖರೀದಿಸಲು ಬಯಸುತ್ತೇನೆ. ಹೇಗಾದರೂ ಮಾಡಿ ನನ್ನ ಸ್ವಂತ ರಾಜ್ಯದಲ್ಲಿ ನನ್ನ ಮೊದಲನೆಯ ಮನೆ ಕಟ್ಟಿಕೊಳ್ಳಬೇಕು, ದಯವಿಟ್ಟು ಸಹಾಯ ಮಾಡಿ. ಆದರೆ ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ ಎಂದು ಬರೆದುಕೊಂಡಿದ್ದರು. ಇದನ್ನೂ ಓದಿ: ನಮಗೆ ನಿಮ್ಮ ಮೇಲೆ ನಂಬಿಕೆ ಇದೆ, ದೇಶಕ್ಕೆ ನಿಮ್ಮ ಅಗತ್ಯವಿದೆ – ʻಕಾಕ್ರೋಚ್ʼ ಪ್ರತಿಭಟನೆ ಬಳಿಕ ಜೆನ್-ಝಿ ಉದ್ದೇಶಿಸಿ ಪ್ರಧಾನಿಯ ಮೊದಲ ಭಾಷಣ