ಬಿಗ್ಬಾಸ್ ಅಗ್ನಿ ಪರೀಕ್ಷೆಗೆ ಬರಲಿಲ್ಲ ಗಿಲ್ಲಿ ನಟ
ಕನ್ನಡ ಬಿಗ್ಬಾಸ್ ಸೀಸನ್ 13ಕ್ಕೆ (Bigg Boss 13) ದಿನಗಣನೆ ಶುರುವಾಗಿದೆ. ರಿಯಲ್ ಬಿಗ್ ಬಾಸ್ ಕಾಳಗ ಶುರುವಾಗುವ ಮುನ್ನ, ಸಾಮಾನ್ಯ ಸ್ಪರ್ಧಿಗಳನ್ನು ಆಯ್ಕೆ ಮಾಡುವುದಕ್ಕಾಗಿ ಅಗ್ನಿ ಪರೀಕ್ಷೆ ಎಂಬ ವಿಶೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಅಗ್ನಿ ಪರೀಕ್ಷೆಯಲ್ಲಿ ಗೆದ್ದವರು ದೊಡ್ಮನೆಗೆ ಎಂಟ್ರಿ ಕೊಡಬಹುದು ಅನ್ನುವುದು ಇದರ ಹಿಂದಿರುವ ಉದ್ದೇಶ. ಈ ಅಗ್ನಿ ಪರೀಕ್ಷೆಗ

ಕನ್ನಡ ಬಿಗ್ಬಾಸ್ ಸೀಸನ್ 13ಕ್ಕೆ (Bigg Boss 13) ದಿನಗಣನೆ ಶುರುವಾಗಿದೆ. ರಿಯಲ್ ಬಿಗ್ ಬಾಸ್ ಕಾಳಗ ಶುರುವಾಗುವ ಮುನ್ನ, ಸಾಮಾನ್ಯ ಸ್ಪರ್ಧಿಗಳನ್ನು ಆಯ್ಕೆ ಮಾಡುವುದಕ್ಕಾಗಿ ಅಗ್ನಿ ಪರೀಕ್ಷೆ ಎಂಬ ವಿಶೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಅಗ್ನಿ ಪರೀಕ್ಷೆಯಲ್ಲಿ ಗೆದ್ದವರು ದೊಡ್ಮನೆಗೆ ಎಂಟ್ರಿ ಕೊಡಬಹುದು ಅನ್ನುವುದು ಇದರ ಹಿಂದಿರುವ ಉದ್ದೇಶ. ಈ ಅಗ್ನಿ ಪರೀಕ್ಷೆಗೆ ಜಡ್ಜ್ ಆಗಿ ಗಿಲ್ಲಿ ನಟ (Gilli Nata) ಇರಲಿದ್ದಾರೆ ಅನ್ನುವ ಸುದ್ದಿ ಇತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆಗಳು ಕೂಡ ನಡೆದಿದ್ದವು. ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ ಗಿಲ್ಲಿ ಕಾಣಿಸಿಲ್ಲ. ಅಲ್ಲಿಗೆ ಗಿಲ್ಲಿ ಬಿಗ್ ಬಾಸ್ ಭಾಗವಾಗಿಲ್ಲ. ಕಳೆದ ಬಿಗ್ ಬಾಸ್ ನಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿದ್ದ ಗಿಲ್ಲಿ ನಟ. ಹನ್ನೊಂದು ಸೀಸನ್ಗಳಲ್ಲಿ ಯಾರ ಕೈಯಲ್ಲೂ ಆಗದೇ ಇರುವಂತಹ ಕಮಾಯಿ ಮಾಡಿದ್ದ. ಹಾಗಾಗಿ ಈ ಬಾರಿ ಅಗ್ನಿ ಪರೀಕ್ಷೆಗೆ ಬರುವವರನ್ನು ದೊಡ್ಮನೆ ಒಳಗಡೆ ಹೋಗಲು ಆಯ್ಕೆ ಮಾಡುವ ಸ್ಪರ್ಧೆಯಲ್ಲಿ ಗಿಲ್ಲಿ ಇರುತ್ತಾನೆ ಅಂತಾನೇ ಅವರ ಅಭಿಮಾನಿಗಳು ನಂಬಿದ್ದರು. ಆದರೆ, ಆ ನಂಬಿಕೆ ಈಗ ಸುಳ್ಳಾಗಿದೆ. ಅಗ್ನಿ ಪರೀಕ್ಷೆಗೆ ಜಡ್ಜ್ ಆಗಿ ಹಿರಿಯ ನಟಿ ಶ್ರುತಿ, ಸಂಗೀತಾ ಶೃಂಗೇರಿ, ವಿನಯ್ ಗೌಡ ಹಾಗೂ ಚಂದನ್ ಶೆಟ್ಟಿ ಸೇರಿದಂತೆ ಇತರರು ಇದ್ದಾರೆ. ಇದನ್ನೂ ಓದಿ: ದುನಿಯಾ ವಿಜಯ್ ನಿರ್ದೇಶನದ ‘ಸಿಟಿ ಲೈಟ್ಸ್’ ಸಿನಿಮಾದ ಹೊಸ ಸಾಂಗ್ ರಿಲೀಸ್ ಸದ್ಯ ಗಿಲ್ಲಿ ನಟ ಪಳಾರ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸತತ ಚಿತ್ರೀಕರಣ ನಡೆಯುತ್ತಿರುವುದರಿಂದ ಇದರಲ್ಲಿ ಭಾಗವಹಿಸಲು ಗಿಲ್ಲಿಗೆ ಸಾಧ್ಯವಾಗಿಲ್ಲವಂತೆ. ಹಾಗಾಗಿ ಅಗ್ನಿ ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ ಗಿಲ್ಲಿ.ಇದನ್ನೂ ಓದಿ: ವಿಶ್ವದ ಗಮನ ಸೆಳೆದ ಧುರಂಧರ್ – ಹಾಲಿವುಡ್ ಸಿನಿಮಾಗಳನ್ನ ಹಿಂದಿಕ್ಕಿ ಹೊಸ ದಾಖಲೆ