ಗುಲಾಬಿ, ನೀಲಿ ಮಾರ್ಗ: ಸಿಬಿಟಿಸಿ ಸಿಗ್ನಲಿಂಗ್ಗೆ ಅನುಮೋದನೆ
ಬೆಂಗಳೂರು: ನಮ್ಮ ಮೆಟ್ರೊ ಗುಲಾಬಿ ಮಾರ್ಗ ಹಾಗೂ ನೀಲಿ ಮಾರ್ಗಗಳ ಸಂವಹನ ಆಧಾರಿತ ರೈಲು ನಿಯಂತ್ರಣ (ಸಿಬಿಟಿಸಿ) ಸಿಗ್ನಲಿಂಗ್ ಮತ್ತು ರೈಲು ನಿಯಂತ್ರಣ ವ್ಯವಸ್ಥೆಗೆ ರೈಲ್ವೆ ಮಂಡಳಿಯು ತಾತ್ವಿಕ ಅನುಮೋದನೆ ನೀಡಿದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಗುಲಾಬಿ ಮಾರ್ಗದ ಕಾರ್ಯಾರಂಭದ ನಿಟ್ಟಿನಲ್ಲಿ ಈ ಅನುಮೋದನೆ ಪ್ರಮುಖ ಮೈಲಿಗಲ್ಲಾಗಿದೆ. ಅನುಮೋದನೆ ಪ್ರಕ್ರಿಯೆ

ಬೆಂಗಳೂರು: ನಮ್ಮ ಮೆಟ್ರೊ ಗುಲಾಬಿ ಮಾರ್ಗ ಹಾಗೂ ನೀಲಿ ಮಾರ್ಗಗಳ ಸಂವಹನ ಆಧಾರಿತ ರೈಲು ನಿಯಂತ್ರಣ (ಸಿಬಿಟಿಸಿ) ಸಿಗ್ನಲಿಂಗ್ ಮತ್ತು ರೈಲು ನಿಯಂತ್ರಣ ವ್ಯವಸ್ಥೆಗೆ ರೈಲ್ವೆ ಮಂಡಳಿಯು ತಾತ್ವಿಕ ಅನುಮೋದನೆ ನೀಡಿದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಗುಲಾಬಿ ಮಾರ್ಗದ ಕಾರ್ಯಾರಂಭದ ನಿಟ್ಟಿನಲ್ಲಿ ಈ ಅನುಮೋದನೆ ಪ್ರಮುಖ ಮೈಲಿಗಲ್ಲಾಗಿದೆ. ಅನುಮೋದನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬಿಎಂಆರ್ಸಿಎಲ್ ಒಂದು ತಿಂಗಳಿನಿಂದ ರೈಲ್ವೆ ಮಂಡಳಿ ಹಾಗೂ ಸಂಶೋಧನಾ ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆ (ಆರ್ಡಿಎಸ್ಒ) ಜೊತೆ ನಿರಂತರವಾಗಿ ಸಮನ್ವಯ ಸಾಧಿಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ನೀಲಿ ಮಾರ್ಗಕ್ಕೂ ಇದು ಅನ್ವಯವಾಗುತ್ತಿದೆ. ಗುಲಾಬಿ ಮಾರ್ಗಕ್ಕೆ ಸಿಗ್ನಲಿಂಗ್ ಅನುಮೋದನೆಯು ಬಾಕಿ ಇದ್ದ ಪ್ರಮುಖ ಹಂತವಾಗಿದ್ದರೆ, ನೀಲಿ ಮಾರ್ಗದ ಉದ್ದೇಶಿತ ಕಾರ್ಯಾರಂಭಕ್ಕೂ ಸಾಕಷ್ಟು ಮುಂಚಿತವಾಗಿಯೇ ಈ ಅನುಮೋದನೆ ದೊರೆತಿದ್ದು, ಅಗತ್ಯ ಪರೀಕ್ಷೆ ಹಾಗೂ ಸುರಕ್ಷತಾ ಪ್ರಮಾಣೀಕರಣ ಪ್ರಕ್ರಿಯೆಗಳನ್ನು ಸಕಾಲದಲ್ಲಿ ಕೈಗೊಳ್ಳಲು ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.ಗುಲಾಬಿ ಮಾರ್ಗಕ್ಕೆ ಸಂಬಂಧಿಸಿದಂತೆ, ಬಿಎಂಆರ್ಸಿಎಲ್ ಇನ್ನುಳಿದ ತಾಂತ್ರಿಕ ಮತ್ತು ಶಾಸನಬದ್ಧ ಪ್ರಕ್ರಿಯೆಗಳಾದ ಆರ್ಡಿಎಸ್ಒದಿಂದ ಮಧ್ಯಂತರ ವೇಗ ಪ್ರಮಾಣೀಕರಣ, ಸಿಸಿಆರ್ಎಸ್ ಮೂಲಕ ರೈಲುಗಳ ಶಾಸನಬದ್ಧ ಪರಿಶೀಲನೆ, ಪ್ರಾಯೋಗಿಕ ಸಂಚಾರ, ನಂತರ ಅಂತಿಮ ಶಾಸನಬದ್ಧ ಪರಿಶೀಲನೆ ಹಾಗೂ ಪ್ರಯಾಣಿಕರ ಸೇವೆ ಆರಂಭಿಸಲು ಅಗತ್ಯವಿರುವ ಅನುಮತಿ ಪಡೆಯುವ ಪ್ರಕ್ರಿಯೆಯನ್ನು ಮುಂದುವರಿಸಲಿದೆ ಎಂದು ವಿವರಿಸಿದ್ದಾರೆ.ಉಳಿದ ಪ್ರಕ್ರಿಯೆಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ, ಗುಲಾಬಿ ಮಾರ್ಗದಲ್ಲಿ ಸಂಚಾರ ಆರಂಭಿಸಲು ಬಿಎಂಆರ್ಸಿಎಲ್ ರೈಲ್ವೆ ಮಂಡಳಿ, ಆರ್ಡಿಎಸ್ಒ, ಸಿಸಿಆರ್ಎಸ್ ಹಾಗೂ ಸಂಬಂಧಪಟ್ಟ ಇತರ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ. ಹಸಿರು ಮಾರ್ಗದಲ್ಲಿ ತಪಾಸಣೆ ಚೀನಾ ರೈಲ್ವೆ ರೋಲಿಂಗ್ಸ್ಟಾಕ್ ಕಾರ್ಪೊರೇಷನ್ನ (ಸಿಆರ್ಆರ್ಸಿ) ನೂತನ ರೈಲುಗಳನ್ನು ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ಸೇರ್ಪಡೆಗೊಳಿಸುವುದಕ್ಕೆ ಪೂರ್ವಭಾವಿಯಾಗಿ ಗುರುವಾರ ರಾತ್ರಿ ಬಿಎಂಆರ್ಸಿಎಲ್ ಹಾಗೂ ಸಿಎಂಆರ್ಎಸ್ ಅಧಿಕಾರಿಗಳ ತಂಡ ತಪಾಸಣೆ ನಡೆಸಿತು. ಮೆಟ್ರೊ ರೈಲು ಸುರಕ್ಷತಾ ಆಯುಕ್ತರ (ಸಿಎಂಆರ್ಎಸ್) ಮುಖ್ಯ ತಪಾಸಣೆ ಮುಂದೆ ನಡೆಯಲಿದ್ದು ಅದಕ್ಕೆ ಪೂರ್ವಭಾವಿಯಾಗಿ ಗುರುವಾರ ರಾತ್ರಿ 10.30ರ ನಂತರ ಈ ತಂಡ ಪ್ರಾಯೋಗಿಕ ಸಂಚಾರ ನಡೆಸಿ ತಪಾಸಣೆ ಮಾಡಿತು.