ವಾಟರ್ ಪೋಲೊ ಚಾಂಪಿಯನ್ಷಿಪ್: ನೆಟ್ಟಕಲ್ಲಪ್ಪ ಈಜು ಕೇಂದ್ರ ಬಾಲಕರಿಗೆ ಕಿರೀಟ
ಬೆಂಗಳೂರು: ನೆಟ್ಟಕಲ್ಲಪ್ಪ ಈಜು ಕೇಂದ್ರದ (ಎನ್ಎಸಿ) ಬಾಲಕರ ತಂಡವು ಶನಿವಾರ ಮುಕ್ತಾಯವಾದ ಎನ್ಆರ್ಜೆ ರಾಜ್ಯ ಜೂನಿಯರ್ ವಾಟರ್ ಪೋಲೊ ಚಾಂಪಿಯನ್ಷಿಪ್ನ ಕಿರೀಟ ಗೆದ್ದುಕೊಂಡಿತು. ಬಾಲಕಿಯರ ವಿಭಾಗದಲ್ಲಿ ಬಸವನಗುಡಿ ಈಜು ಕೇಂದ್ರ (ಬಿಎಸಿ) ತಂಡ ಪ್ರಶಸ್ತಿ ಜಯಿಸಿದರೆ, ಎನ್ಎಸಿ ತಂಡ ರನ್ನರ್ಸ್ ಅಪ್ ಆಯಿತು.ಹಲಸೂರಿನ ಕೆನ್ಸಿಂಗ್ಟನ್ ಈಜುಕೊಳದಲ್ಲಿ ನಡೆದ ಫೈನಲ್ನಲ್

ಬೆಂಗಳೂರು: ನೆಟ್ಟಕಲ್ಲಪ್ಪ ಈಜು ಕೇಂದ್ರದ (ಎನ್ಎಸಿ) ಬಾಲಕರ ತಂಡವು ಶನಿವಾರ ಮುಕ್ತಾಯವಾದ ಎನ್ಆರ್ಜೆ ರಾಜ್ಯ ಜೂನಿಯರ್ ವಾಟರ್ ಪೋಲೊ ಚಾಂಪಿಯನ್ಷಿಪ್ನ ಕಿರೀಟ ಗೆದ್ದುಕೊಂಡಿತು. ಬಾಲಕಿಯರ ವಿಭಾಗದಲ್ಲಿ ಬಸವನಗುಡಿ ಈಜು ಕೇಂದ್ರ (ಬಿಎಸಿ) ತಂಡ ಪ್ರಶಸ್ತಿ ಜಯಿಸಿದರೆ, ಎನ್ಎಸಿ ತಂಡ ರನ್ನರ್ಸ್ ಅಪ್ ಆಯಿತು.ಹಲಸೂರಿನ ಕೆನ್ಸಿಂಗ್ಟನ್ ಈಜುಕೊಳದಲ್ಲಿ ನಡೆದ ಫೈನಲ್ನಲ್ಲಿ ಎನ್ಎಸಿ ಬಾಲಕರ ತಂಡವು 14–9 ಗೋಲುಗಳಿಂದ ಬಿಎಸಿ ತಂಡವನ್ನು ಸೋಲಿಸಿತು. ಕಂಚಿನ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ ಸ್ಟಾರ್ ಅಕ್ವಾಟಿಕ್ಸ್ ತಂಡವು 15–4ರಿಂದ ಸ್ವಿಮ್ಲೈಫ್ ತಂಡದ ವಿರುದ್ಧ ಗೆಲುವು ಸಾಧಿಸಿತು.ತೀವ್ರ ಪೈಪೋಟಿಯಿದ್ದ ಬಾಲಕಿಯರ ವಿಭಾಗದ ಫೈನಲ್ನಲ್ಲಿ ಬಿಎಸಿ ತಂಡವು 10–8ರಿಂದ ರೋಚಕ ಜಯ ಸಾಧಿಸಿತು. ತೃತೀಯ ಸ್ಥಾನದ ನಿರ್ಧಾರಕ್ಕಾಗಿ ನಡೆದ ಪಂದ್ಯದಲ್ಲಿ ಸ್ಟಾರ್ ಅಕ್ವಾಟಿಕ್ಸ್ ತಂಡವು 15–6ರಿಂದ ಮೈಸೂರು ಈಜು ಸಂಸ್ಥೆ (ಸಂಯೋಜಿತ) ತಂಡದ ವಿರುದ್ಧ ಗೆಲುವು ಸಾಧಿಸಿತು.ಎನ್ಎಸಿ ತಂಡದ ಧ್ಯಾನ್ ನಾಯ್ಡು ಅವರು ಬಾಲಕರ ವಿಭಾಗದ ಟೂರ್ನಿಯ ಆಟಗಾರ ಪ್ರಶಸ್ತಿ ಪಡೆದರು. ಬಾಲಕಿಯರ ವಿಭಾಗದಲ್ಲಿ ಬಿಎಸಿ ತಂಡದ ಐಶಾನಿ ಕಿರಣ್ ಈ ಗೌರವಕ್ಕೆ ಪಾತ್ರರಾದರು. ಸ್ವಿಮ್ಲೈಫ್ ತಂಡದ ವಿಶ್ರುತ್ ಮತ್ತು ಬಿಎಸಿ ತಂಡದ ಗೌರಿ ತೇಜಸ್ ಅವರು ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಟೂರ್ನಿಯ ಗೋಲ್ಕೀಪರ್ ಎನಿಸಿದರು.ಮೂರು ದಿನ ನಡೆದ ಈ ಚಾಂಪಿಯನ್ಷಿಪ್ನಲ್ಲಿ ಬಾಲಕರ ವಿಭಾಗದಲ್ಲಿ ಆರು ಮತ್ತು ಬಾಲಕಿಯರ ವಿಭಾಗದಲ್ಲಿ ಐದು ತಂಡಗಳು ಭಾಗವಹಿಸಿದ್ದವು.ಎನ್ಆರ್ಜೆ ರಾಜ್ಯ ಜೂನಿಯರ್ ವಾಟರ್ ಪೋಲೊ ಚಾಂಪಿಯನ್ಷಿಪ್ನಲ್ಲಿ ರನ್ನರ್ಸ್ಅಪ್ ಆದ ನೆಟ್ಟಕಲ್ಲಪ್ಪ ಈಜು ಕೇಂದ್ರ ತಂಡದ ಆಟಗಾರ್ತಿಯರು ಟ್ರೋಫಿಯೊಂದಿಗೆ ಸಂಭ್ರಮಿಸಿದರು ಚಿತ್ರ: ಕಿಶೋರ್ ಕುಮಾರ್ ಬೋಳಾರ್