ರೈಲ್ವೆ ಜಾಲತಾಣಗಳಲ್ಲಿ ಕನ್ನಡಕ್ಕೂ ಸ್ಥಾನ ನೀಡಿ: ಬಿಳಿಮಲೆ
ಬೆಂಗಳೂರು: ‘ಕೇಂದ್ರ ರೈಲ್ವೆ ಸಚಿವಾಲಯವು ದೇಶದ ವಿವಿಧ ರೈಲ್ವೆ ವಲಯಗಳ ಜಾಲತಾಣಗಳನ್ನು ಇಂಗ್ಲಿಷ್ ಜತೆಗೆ ಹಿಂದಿಯಲ್ಲಿಯೂ ಆರಂಭಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ, ಕನ್ನಡ ಸೇರಿ ಪ್ರಾದೇಶಿಕ ಭಾಷೆಗಳಿಗೂ ಸಮಾನ ಆದ್ಯತೆ ನೀಡಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.ಈ ಬಗ್ಗೆ ಅವರು&nbs

ಬೆಂಗಳೂರು: ‘ಕೇಂದ್ರ ರೈಲ್ವೆ ಸಚಿವಾಲಯವು ದೇಶದ ವಿವಿಧ ರೈಲ್ವೆ ವಲಯಗಳ ಜಾಲತಾಣಗಳನ್ನು ಇಂಗ್ಲಿಷ್ ಜತೆಗೆ ಹಿಂದಿಯಲ್ಲಿಯೂ ಆರಂಭಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ, ಕನ್ನಡ ಸೇರಿ ಪ್ರಾದೇಶಿಕ ಭಾಷೆಗಳಿಗೂ ಸಮಾನ ಆದ್ಯತೆ ನೀಡಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.ಈ ಬಗ್ಗೆ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಪತ್ರ ಬರೆದಿದ್ದಾರೆ. ‘ಭಾರತದ ಒಕ್ಕೂಟ ವ್ಯವಸ್ಥೆ ಮತ್ತು ಬಹುಭಾಷಿಕ ಪರಂಪರೆಗೆ ಅನುಗುಣವಾಗಿ ರಾಜ್ಯಗಳ ಅಧಿಕೃತ ಭಾಷೆಗಳಿಗೂ ರೈಲ್ವೆ ಜಾಲತಾಣಗಳಲ್ಲಿ ಅವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿದ್ದಾರೆ.‘ಇಲ್ಲಿನ ಲಕ್ಷಾಂತರ ಪ್ರಯಾಣಿಕರ ಅನುಕೂಲಕ್ಕಾಗಿ ಕನ್ನಡದಲ್ಲಿಯೂ ಜಾಲತಾಣ ಸೇವೆಗಳನ್ನು ಒದಗಿಸುವುದು ಅತ್ಯಗತ್ಯ. ಇದರಿಂದ ಸಾರ್ವಜನಿಕರಿಗೆ ಮಾಹಿತಿ ಸುಲಭವಾಗಿ ದೊರೆಯುವುದಲ್ಲದೆ, ಇದು ಆಡಳಿತದಲ್ಲಿ ಭಾಷಾ ಸಮಾನತೆ ಸಾಧಿಸಲು ಉತ್ತೇಜಿಸಲಿದೆ’ ಎಂದು ಹೇಳಿದ್ದಾರೆ.‘ಭಾರತದ ಭಾಷಾ ವೈವಿಧ್ಯತೆ ಮತ್ತು ಒಕ್ಕೂಟ ವ್ಯವಸ್ಥೆಯ ಮೌಲ್ಯಗಳನ್ನು ಗೌರವಿಸುವ ನಿಟ್ಟಿನಲ್ಲಿ ಹಿಂದಿ ಹಾಗೂ ಇಂಗ್ಲಿಷ್ ಜತೆಗೆ, ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳಲ್ಲಿಯೂ ರೈಲ್ವೆ ಜಾಲತಾಣಗಳನ್ನು ಅಭಿವೃದ್ಧಿಪಡಿಸಬೇಕು’ ಎಂದು ಮನವಿ ಮಾಡಿದ್ದಾರೆ.