‘ಪಬ್ಲಿಕ್ ಟಿವಿ’ ವಿದ್ಯಾಮಂದಿರ; ಪಿಜಿ ಶೈಕ್ಷಣಿಕ & ಉದ್ಯೋಗ ಮೇಳಕ್ಕೆ ಅದ್ದೂರಿ ಚಾಲನೆ
– ಮೇಳಕ್ಕೆ ಚಾಲನೆ ನೀಡಿದ ನಟಿ ಪ್ರಿಯಾಂಕಾ ಉಪೇಂದ್ರ – ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ & ಗಣ್ಯರು ಸಾಥ್ ಬೆಂಗಳೂರು: ಪಬ್ಲಿಕ್ ಟಿವಿ (PUBLiC TV) ಪ್ರಸ್ತುತ ಪಡಿಸುವAD6 ಅಡ್ವರ್ಟೈಸಿಂಗ್ ಸಹಯೋಗದಲ್ಲಿ ವಿದ್ಯಾಮಂದಿರ (Vidhya Mandira) 2 ದಿನಗಳ ಮೆಗಾ ಶೈಕ್ಷಣಿಕ ಮತ್ತು ಉದ್ಯೋಗ ಮೇಳಕ್ಕೆ ಇಂದು ಅದ್ದೂರಿ ಚಾಲನೆ ಸಿಕ್ಕಿದೆ. ನಗರದ ಅರಮನೆ ಮೈದಾನ

– ಮೇಳಕ್ಕೆ ಚಾಲನೆ ನೀಡಿದ ನಟಿ ಪ್ರಿಯಾಂಕಾ ಉಪೇಂದ್ರ – ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ & ಗಣ್ಯರು ಸಾಥ್ ಬೆಂಗಳೂರು: ಪಬ್ಲಿಕ್ ಟಿವಿ (PUBLiC TV) ಪ್ರಸ್ತುತ ಪಡಿಸುವAD6 ಅಡ್ವರ್ಟೈಸಿಂಗ್ ಸಹಯೋಗದಲ್ಲಿ ವಿದ್ಯಾಮಂದಿರ (Vidhya Mandira) 2 ದಿನಗಳ ಮೆಗಾ ಶೈಕ್ಷಣಿಕ ಮತ್ತು ಉದ್ಯೋಗ ಮೇಳಕ್ಕೆ ಇಂದು ಅದ್ದೂರಿ ಚಾಲನೆ ಸಿಕ್ಕಿದೆ. ನಗರದ ಅರಮನೆ ಮೈದಾನ ಗಾಯತ್ರಿ ವಿಹಾರದ ಗೇಟ್ ನಂಬರ್ 4ರಲ್ಲಿ ನಡೆದ ಕಾರ್ಯಕ್ರಮಕ್ಕೆ ಇಂದು ಬೆಳಗ್ಗೆ 10:30ಕ್ಕೆ ಟೇಪ್ ಕತ್ತರಿಸುವ ಮೂಲಕ ನಟಿ ಪ್ರಿಯಾಂಕಾ ಉಪೇಂದ್ರ ಚಾಲನೆ ನೀಡಿದರು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್, ರೇವಾ ಯೂನಿವರ್ಸಿಟಿ ಚಾನ್ಸಲರ್ ಡಾ. ಪಿ.ಶ್ಯಾಮರಾಜು, ಕೇಂಬ್ರಿಡ್ಜ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಚೇರ್ಮನ್ ಡಿ.ಕೆ.ಮೋಹನ್ ಗಣ್ಯರು ಸಾಥ್ ನೀಡಿದರು. ಇದನ್ನೂ ಓದಿ: ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ‘ಪಬ್ಲಿಕ್ ಟಿವಿ ವಿದ್ಯಾಮಂದಿರ’ – ಇಂದಿನಿಂದ 2 ದಿನಗಳ ಮೆಗಾ ಶೈಕ್ಷಣಿಕ, ಉದ್ಯೋಗ ಮೇಳ ಉದ್ಘಾಟನೆ ಬಳಿಕ ಗಣ್ಯರು ಸ್ಟಾಲ್ಗಳನ್ನು ವೀಕ್ಷಣೆ ಮಾಡಿದರು. 40 ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು ಶೈಕ್ಷಣಿಕ ಮೇಳದಲ್ಲಿ ಭಾಗವಹಿಸಿವೆ. ಪ್ರತಿಯೊಂದು ಸ್ಟಾಲ್ಗಳಿಗೆ ಗಣ್ಯರು ಭೇಟಿ ನೀಡಿದರು. ಈ ವೇಳೆ, ರೇವಾ ಯೂನಿವರ್ಸಿಟಿಯ ಸ್ಟಾಲ್ಗೆ ಭೇಟಿ ನೀಡಿದ ಹೆಚ್.ಆರ್.ರಂಗನಾಥ್ ಅವರು, ಚಾನ್ಸಲರ್ ಪಿ.ಶ್ಯಾಮರಾಜು ಅವರಿಂದು ಮಾಹಿತಿ ಪಡೆದುಕೊಂಡರು. ವಿದ್ಯಾಮಂದಿರ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರ ದಂಡು ಹರಿದುಬರುತ್ತಿದೆ. ತಮ್ಮ ಕನಸಿನ ಕೋರ್ಸ್ ಹಾಗೂ ಭವಿಷ್ಯ ರೂಪಿಸಿಕೊಳ್ಳಲು ಉದ್ಯೋಗ ಮೇಳಕ್ಕೆ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಸ್ಟಾಲ್ಗಳಿಗೆ ತೆರಳಿ ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಡಿಗ್ರಿ ಬಳಿಕ ಪಿಜಿ ಕೋರ್ಸ್ಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಪಡೆಯುತ್ತಿದ್ದಾರೆ. ಯುಜಿ, ಪಿಜಿ ಮುಗಿಸಿದ ಬಳಿಕ ಉದ್ಯೋಗ ಹುಡುಕುತ್ತಿರುವವರಿಗೂ ‘ಪಬ್ಲಿಕ್ ಟಿವಿ’ಯ ವಿದ್ಯಾಪೀಠ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ತಮ್ಮ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಕೆಲಸ ಹುಡುಕಲು ನೂರಾರು ಸಂಖ್ಯೆಯಲ್ಲಿ ಅಭ್ಯರ್ಥಿಗಳು ಮೇಳಕ್ಕೆ ಆಗಮಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ತಿರುಪತಿಯಲ್ಲಿ ಭಕ್ತರು ನಿಂತಲ್ಲೇ ಬರುತ್ತೆ ಪ್ರಸಾದ ಪಬ್ಲಿಕ್ ಟಿವಿಯ ಐದನೇ ಆವೃತ್ತಿಯ ವಿದ್ಯಾಮಂದಿರ ವೇದಿಕೆ ಕಾರ್ಯಕ್ರಮದಲ್ಲಿ ಹೂಗುಚ್ಛ ನೀಡಿ ಗಣ್ಯರನ್ನು ಹೆಚ್.ಆರ್.ರಂಗನಾಥ್ ಅವರು ಸ್ವಾಗತಿಸಿದರು. ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿಲಾಯಿತು.