ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್: ಅಥರ್ವ, ಐರೀನ್ಗೆ ಸಿಂಗಲ್ಸ್ ಕಿರೀಟ
ಬೆಂಗಳೂರು: ಅಥರ್ವ ನವರಂಗೆ ಮತ್ತು ಐರೀನ್ ಅನ್ನಾ ಸುಭಾಷ್ ಅವರು ಮಲ್ಲೇಶ್ವರಂ ಅಸೋಸಿಯೇಷನ್ ಆಶ್ರಯದ ನಾಲ್ಕನೇ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 17 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಕಿರೀಟ ಧರಿಸಿದರು.ಅಸೋಷಿಯೇಷನ್ ಸಭಾಂಗಣದಲ್ಲಿ ನಡೆದ ಟೂರ್ನಿಯ ಫೈನಲ್ನಲ್ಲಿ ಅಥರ್ವ ಹಿನ್ನಡೆಯಿಂದ ಚೇತರಿಸಿ 8–11, 11–4, 8–

ಬೆಂಗಳೂರು: ಅಥರ್ವ ನವರಂಗೆ ಮತ್ತು ಐರೀನ್ ಅನ್ನಾ ಸುಭಾಷ್ ಅವರು ಮಲ್ಲೇಶ್ವರಂ ಅಸೋಸಿಯೇಷನ್ ಆಶ್ರಯದ ನಾಲ್ಕನೇ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 17 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಕಿರೀಟ ಧರಿಸಿದರು.ಅಸೋಷಿಯೇಷನ್ ಸಭಾಂಗಣದಲ್ಲಿ ನಡೆದ ಟೂರ್ನಿಯ ಫೈನಲ್ನಲ್ಲಿ ಅಥರ್ವ ಹಿನ್ನಡೆಯಿಂದ ಚೇತರಿಸಿ 8–11, 11–4, 8–11, 11–8, 14–12 ರಿಂದ ಆರ್ಣವ್ ನವೀನ್ ಅವರನ್ನು ಸೋಲಿಸಿದರು.ಸೆಮಿಫೈನಲ್ ಪಂದ್ಯಗಳಲ್ಲಿ ಆರ್ಣವ್ 10–12, 11–6, 12–14, 14–12, 11–9 ರಿಂದ ವೇದಾಂತ್ ವಸಿಷ್ಟ ಅವರನ್ನು, ಅಥರ್ವ 11–2, 11–6, 11–3 ರಲ್ಲಿ ನೇರ ಸೆಟ್ಗಳಿಂದ ಶುಭಂ ತ್ರಿವೇದಿ ಅವರನ್ನು ಸೋಲಿಸಿದ್ದರು.17 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ಫೈನಲ್ನಲ್ಲಿ ಐರೀನ್ 11–7, 14–12, 4–11, 11–8 ರಿಂದ ಹಿಯಾ ಸಿಂಗ್ ವಿರುದ್ಧ ಜಯಗಳಿಸಿದರು. ಸೆಮಿಫೈನಲ್ ಪಂದ್ಯಗಳಲ್ಲಿ ಐರೀನ್ 12–10, 9–11, 11–8, 7–11, 11–5 ರಿಂದ ಶಿವಾನಿ ಮಹೇಂದ್ರನ್ ವಿರುದ್ಧ, ಹಿಯಾ 9–11, 11–3, 11–6, 11–5 ರಿಂದ ಸಾಕ್ಷ್ಯಾ ಸಂತೋಷ್ ವಿರುದ್ಧ ಜಯಗಳಿಸಿದ್ದರು.
Read the complete story at Prajavani