ಕರ್ನಾಟಕವು ತಮಿಳುನಾಡನ್ನು ಚರಂಡಿಯಂತೆ ಬಳಸಿಕೊಳ್ಳುತ್ತಿದೆ: ಎಐಎಡಿಎಂಕೆ ನಾಯಕ
ಮದುರೈ (ತಮಿಳುನಾಡು): ಕರ್ನಾಟಕವು ತನ್ನ ಹೆಚ್ಚುವರಿ ನೀರನ್ನು ಹೊರಹಾಕಲು ತಮಿಳುನಾಡನ್ನು ಕೇವಲ ಚರಂಡಿಯಂತೆ ಬಳಸಿಕೊಳ್ಳುವ ಮೂಲಕ ‘ಆಧಿಪತ್ಯದ ಧೋರಣೆ’ ಪ್ರದರ್ಶಿಸುತ್ತಿದೆ ಎಂದು ಎಐಎಡಿಎಂಕೆ ಹಿರಿಯ ನಾಯಕ ಆರ್.ಬಿ.ಉದಯಕುಮಾರ್ ಶುಕ್ರವಾರ ಆರೋಪಿಸಿದ್ದಾರೆ.‘ಕಾವೇರಿ ನೀರಿನ ವಿಚಾರವಾಗಿ ರಾಜ್ಯದ ಹಕ್ಕುಗಳ ಕುರಿತು ಒಮ್ಮತದ ನಿಲುವನ್ನು ಪ್ರದರ್ಶಿಸಲು ತಕ್ಷಣವೇ ಸರ್ವ

ಮದುರೈ (ತಮಿಳುನಾಡು): ಕರ್ನಾಟಕವು ತನ್ನ ಹೆಚ್ಚುವರಿ ನೀರನ್ನು ಹೊರಹಾಕಲು ತಮಿಳುನಾಡನ್ನು ಕೇವಲ ಚರಂಡಿಯಂತೆ ಬಳಸಿಕೊಳ್ಳುವ ಮೂಲಕ ‘ಆಧಿಪತ್ಯದ ಧೋರಣೆ’ ಪ್ರದರ್ಶಿಸುತ್ತಿದೆ ಎಂದು ಎಐಎಡಿಎಂಕೆ ಹಿರಿಯ ನಾಯಕ ಆರ್.ಬಿ.ಉದಯಕುಮಾರ್ ಶುಕ್ರವಾರ ಆರೋಪಿಸಿದ್ದಾರೆ.‘ಕಾವೇರಿ ನೀರಿನ ವಿಚಾರವಾಗಿ ರಾಜ್ಯದ ಹಕ್ಕುಗಳ ಕುರಿತು ಒಮ್ಮತದ ನಿಲುವನ್ನು ಪ್ರದರ್ಶಿಸಲು ತಕ್ಷಣವೇ ಸರ್ವಪಕ್ಷ ಸಭೆಯನ್ನು ಕರೆಯಿರಿ’ ಎಂದು ಮುಖ್ಯಮಂತ್ರಿ ವಿಜಯ್ ಅವರಿಗೆ ಮನವಿ ಮಾಡಿದ್ದಾರೆ.ಕರ್ನಾಟಕ ಸರ್ಕಾರವು ನಿರಂತರವಾಗಿ ಸುಪ್ರೀಂ ಕೋರ್ಟ್, ಕಾವೇರಿ ನೀರು ನಿರ್ವಹಣಾ ಸಮಿತಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ಜಲವಿವಾದ ಮಂಡಳಿಯ ನಿರ್ದೇಶನಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ್ದಾರೆ.ಕರ್ನಾಟಕವು ಐತಿಹಾಸಿಕ ಒಪ್ಪಂದಗಳನ್ನು ಉಲ್ಲಂಘಿಸಿ ಈಗಾಗಲೇ ಐದು ಅಣೆಕಟ್ಟೆಗಳನ್ನು ನಿರ್ಮಿಸಿದೆ. ಇದೀಗ ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಮುಂದಾಗಿದೆ ಎಂದಿದ್ದಾರೆ.‘ಸರ್ವಪಕ್ಷಗಳ ನಿಯೋಗ ಕೊಂಡೊಯ್ಯಿರಿ’ಚೆನ್ನೈ: ಕರ್ನಾಟಕದ ಮೇಕೆದಾಟು ಯೋಜನೆಗೆ ತಡೆಯೊಡ್ಡಲು ಸರ್ವಪಕ್ಷಗಳ ನಿಯೋಗವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಕೊಂಡೊಯ್ಯಬೇಕು ಎಂದು ಡಿಎಂಡಿಕೆ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ವಿಜಯಕಾಂತ್ ಅವರು ಮುಖ್ಯಮಂತ್ರಿ ವಿಜಯ್ ಅವರಲ್ಲಿ ಮನವಿ ಮಾಡಿದ್ದಾರೆ.ವಿಧಾನಸಭೆಯಲ್ಲಿ ಮಾತನಾಡಿದ ಅವರು‘ಮೇಕೆದಾಟು ಯೋಜನೆ ಕಾರ್ಯಗತ ಆಗಬಾರದು ಮತ್ತು ಕಾವೇರಿ ವಿಚಾರದಲ್ಲಿ ನಮ್ಮ ಹಕ್ಕು ನಮಗೆ ಸಿಗಬೇಕು’ ಎಂದು ಹೇಳಿದ್ದಾರೆ.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ರಾಜ್ಯದ ರೈತರ ಹಿತಾಸಕ್ತಿಯ ರಕ್ಷಣೆಗಾಗಿ ಕಠಿಣ ನಿರ್ಧಾರಗಳ ಅಗತ್ಯವಿದೆ. ಮುಖ್ಯಮಂತ್ರಿ ವಿಜಯ್ ಅವರು ಸರ್ವಪಕ್ಷಗಳನ್ನು ಒಗ್ಗೂಡಿಸಿಕೊಂಡು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದಿದ್ದಾರೆ.ಶತ್ರು ದೇಶಗಳೇ ಮಾತಾಡುವಾಗ, ಕಾವೇರಿ ಚರ್ಚೆಗೆ ಹಿಂದೇಟು ಯಾಕೆ?: ಜೋಸೆಫ್ ವಿಜಯ್