ಎಸ್ಐಆರ್, ಬಿಡದಿ ಟೌನ್ಶಿಪ್, ಮೇಕೆದಾಟು ಯೋಜನೆ...: ಈ ವಾರದ ಪ್ರಮುಖ ಸುದ್ದಿಗಳು
ಬಿಡದಿ ಟೌನ್ಶಿಪ್, ಮೇಕೆದಾಟು ವಿವಾದ, ಹೊಸೂರು ಮೆಟ್ರೊ ಯೋಜನೆ ಮತ್ತು ಐಎಎಸ್ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಈ ವಾರದ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.ಬಿಡದಿ ಟೌನ್ಶಿಪ್: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ಬೆಂಗಳೂರು: ‘ಉದ್ದೇಶಿತ ಬಿಡದಿ ಟೌನ್ಶಿಪ್ ಯೋಜನೆಯಡಿ ಈತನಕ ಭೂ ಸ್ವಾಧೀನಕ್ಕೆ ಪರಿಹಾರ ಘೋಷಣೆ ಮಾಡಿ ಐತೀರ್ಪು ಹೊರಡಿಸದೇ ಇರುವ ಹಿ

ಬಿಡದಿ ಟೌನ್ಶಿಪ್, ಮೇಕೆದಾಟು ವಿವಾದ, ಹೊಸೂರು ಮೆಟ್ರೊ ಯೋಜನೆ ಮತ್ತು ಐಎಎಸ್ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಈ ವಾರದ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.ಬಿಡದಿ ಟೌನ್ಶಿಪ್: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ಬೆಂಗಳೂರು: ‘ಉದ್ದೇಶಿತ ಬಿಡದಿ ಟೌನ್ಶಿಪ್ ಯೋಜನೆಯಡಿ ಈತನಕ ಭೂ ಸ್ವಾಧೀನಕ್ಕೆ ಪರಿಹಾರ ಘೋಷಣೆ ಮಾಡಿ ಐತೀರ್ಪು ಹೊರಡಿಸದೇ ಇರುವ ಹಿನ್ನೆಲೆಯಲ್ಲಿ ಅರ್ಜಿದಾರ ಭೂ ಮಾಲೀಕರನ್ನು ಒಕ್ಕಲೆಬ್ಬಿಸುವುದಿಲ್ಲ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ.ಬಿಡದಿ ಟೌನ್ಶಿಪ್: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ಮೇಕೆದಾಟು ಯೋಜನೆ: ವಿಜಯ್–ಉದಯನಿಧಿ ನಡುವೆ ಮಾತಿನ ಚಕಮಕಿಚೆನ್ನೈ: ಮೇಕೆದಾಟು ಯೋಜನೆಯು ತಮಿಳುನಾಡು ವಿಧಾನಸಭೆಯಲ್ಲಿ ಮಾತಿನ ಚಕಮಕಿಗೆ ಕಾರಣವಾಗಿದ್ದು, ಮುಖ್ಯಮಂತ್ರಿ ಜೋಸೆಫ್ ವಿಜಯ್ ಮತ್ತು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ನಡುವೆ ಸದನದಲ್ಲಿ ತೀವ್ರ ವಾಗ್ವಾದ ನಡೆಯಿತು.ಮೇಕೆದಾಟು ಯೋಜನೆ: ವಿಜಯ್–ಉದಯನಿಧಿ ನಡುವೆ ಮಾತಿನ ಚಕಮಕಿಹೊಸೂರು–ಬೊಮ್ಮಸಂದ್ರ ಮೆಟ್ರೊ: ಕರ್ನಾಟಕದೊಂದಿಗೆ ಚರ್ಚೆ ಎಂದ ತಮಿಳುನಾಡು ಸರ್ಕಾರಚೆನ್ನೈ: ಕೃಷ್ಣಗಿರಿಯ ಹೊಸೂರು ಮತ್ತು ಕರ್ನಾಟಕದ ಬೊಮ್ಮಸಂದ್ರದ ನಡುವೆ ಮೆಟ್ರೊ ರೈಲು ಸಂಪರ್ಕ ಕಲ್ಪಿಸುವ ಯೋಜನೆಯ ಅನುಷ್ಠಾನಕ್ಕೆ ತಮಿಳುನಾಡು ಸರ್ಕಾರ ಯತ್ನಿಸಲಿದೆ. ಈ ಸಂಬಂಧ ಕೇಂದ್ರ ಹಾಗೂ ಕರ್ನಾಟಕ ಸರ್ಕಾರದೊಂದಿಗೆ ಚರ್ಚಿಸಲಿದೆ ಎಂದು ತಮಿಳುನಾಡು ಹಣಕಾಸು ಸಚಿವ ಎನ್. ಮೇರಿ ವಿಲ್ಸನ್ ಬುಧವಾರ ತಿಳಿಸಿದರು. ಹೊಸೂರು–ಬೊಮ್ಮಸಂದ್ರ ಮೆಟ್ರೊ: ಕರ್ನಾಟಕದೊಂದಿಗೆ ಚರ್ಚೆ ಎಂದ ತಮಿಳುನಾಡು ಸರ್ಕಾರಬೆಂಗಳೂರು: ನೈಸ್ ರಸ್ತೆಯಲ್ಲಿ ಬಿಎಂಟಿಸಿ ಸುಲಿಗೆಬೆಂಗಳೂರು: ಶಾಲಾ ಕಾಲೇಜುಗಳಿಗೆ ಹೋಗುವ ಬಾಲಕಿಯರಿಗೆ ಅಷ್ಟೇ ಅಲ್ಲ, ಬಾಲಕರಿಗೂ ಬಸ್ ಪ್ರಯಾಣ ಉಚಿತ ಎಂದು ಸರ್ಕಾರ ಘೋಷಣೆ ಮಾಡಿದ್ದರೂ ನೈಸ್ ರಸ್ತೆಯಲ್ಲಿ ಬಿಎಂಟಿಸಿ ಬಸ್ಗಳಲ್ಲಿ ಸಂಚರಿಸುವ ಬಾಲಕರಿಂದ ಟೋಲ್ ಹೆಸರಲ್ಲಿ ದುಬಾರಿ ಮೊತ್ತವನ್ನು ವಸೂಲಿ ಮಾಡಲಾಗುತ್ತಿದೆ.ಬೆಂಗಳೂರು: ನೈಸ್ ರಸ್ತೆಯಲ್ಲಿ ಬಿಎಂಟಿಸಿ ಸುಲಿಗೆIAS Transfer: ಮತ್ತೆ 6 ಐಎಎಸ್ ಅಧಿಕಾರಿಗಳ ವರ್ಗ, ಮಂಜುಶ್ರೀಗೆ ಹೊಸ ಹುದ್ದೆಬೆಂಗಳೂರು: ಕರ್ನಾಟಕ ಸರ್ಕಾರವು ಮತ್ತಷ್ಟು ಐಎಎಸ್ ಅಧಿಕಾರಿಗಳನ್ನು ಗುರುವಾರ ವರ್ಗಾವಣೆ ಮಾಡಿ ಹೊಸ ಹುದ್ದೆ ನೀಡಿದೆ. ಯೋಜನೆ, ಕಾರ್ಯಕ್ರಮ ನಿರ್ವಹಣೆ ಹಾಗೂ ಸಾಂಖ್ಯಿಕ ಇಲಾಖೆ ಕಾರ್ಯದರ್ಶಿಯಾಗಿದ್ದ ಮನೋಜ್ ಜೈನ್ ಅವರನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.IAS Transfer: ಮತ್ತೆ 6 ಐಎಎಸ್ ಅಧಿಕಾರಿಗಳ ವರ್ಗ, ಮಂಜುಶ್ರೀಗೆ ಹೊಸ ಹುದ್ದೆ‘ನಮ್ಮೂರ ಮಂದಾರ ಹೂವೆ’ಗೆ 30 ವರ್ಷಗಳ ಸಂಭ್ರಮ: ನೆನಪು ಮೆಲುಕು ಹಾಕಿದ ನಟಿ ಸುಮನ್ ಕನ್ನಡ ಚಿತ್ರರಂಗದ ಸಾರ್ವಕಾಲಿಕ ಸೂಪರ್ಹಿಟ್ ಸಿನಿಮಾಗಳಲ್ಲಿ ಒಂದಾದ ‘ನಮ್ಮೂರ ಮಂದಾರ ಹೂವೆ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ ಬರೋಬ್ಬರಿ 30 ವರ್ಷಗಳು ಪೂರೈಸಿವೆ. ಈ ಸಿನಿಮಾದಲ್ಲಿ ನಟ ರಮೇಶ್ ಅರವಿಂದ್, ಶಿವರಾಜ್ಕುಮಾರ್ ಹಾಗೂ ಪ್ರೇಮಾ ಅಭಿನಯಿಸಿದ್ದರು. ‘ನಮ್ಮೂರ ಮಂದಾರ ಹೂವೆ’ಗೆ 30 ವರ್ಷಗಳ ಸಂಭ್ರಮ: ನೆನಪು ಮೆಲುಕು ಹಾಕಿದ ನಟಿ ಸುಮನ್ ಸಚಿವರಾಗಿ ಸೊರಬಕ್ಕೆ ಬಂದ ಮಧು ಬಂಗಾರಪ್ಪ: ಬೆಂಬಲಿಗರಿಂದ ಭರ್ಜರಿ ಸ್ವಾಗತಶಿವಮೊಗ್ಗ: ಎರಡನೇ ಬಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿ ಶುಕ್ರವಾರ ಸ್ವಕ್ಷೇತ್ರ ಸೊರಬಕ್ಕೆ ಬಂದ ಮಧು ಬಂಗಾರಪ್ಪ ಅವರಿಗೆ ಬೆಂಬಲಿಗರು ಭರ್ಜರಿ ಸ್ವಾಗತ ಕೋರಿದರು. ಶಿರಾಳಕೊಪ್ಪ ಹೊರವಲಯದಿಂದ ಸೊರಬ ಪಟ್ಟಣದವರೆಗೂ ಅಲ್ಲಲ್ಲಿ ರಸ್ತೆಗಳ ಪಕ್ಕ ನಿಂತ ಬೆಂಬಲಿಗರು, ನೂತನ ಸಚಿವರಿಗೆ ಹಾರ ಹಾಕಿ, ಶಾಲು ಹೊದಿಸಿ ಸ್ವಾಗತ ಕೋರಿದರು. ಶಿರಾಳಕೊಪ್ಪದಿಂದ ಸೊರಬದವರೆಗೆ ಬೆಂಬಲಿಗರ ವಾಹನಗಳು ಹಿಂಬಾಲಿಸಿದವು.ಸಚಿವರಾಗಿ ಸೊರಬಕ್ಕೆ ಬಂದ ಮಧು ಬಂಗಾರಪ್ಪ: ಬೆಂಬಲಿಗರಿಂದ ಭರ್ಜರಿ ಸ್ವಾಗತಗಯಾನಾದಲ್ಲಿ ಕನ್ನಡಿಗನ ಕೃಷಿ ಸಾಧನೆ: ನಿಪ್ಪಾಣಿಯ ಅಭಿಲಾಷ್ ಯಶೋಗಾಥೆಗಯಾನಾ. ವಿಸ್ತೀರ್ಣದಲ್ಲಿ ಕರ್ನಾಟಕಕ್ಕಿಂತ ಕಡಿಮೆ ಇರುವ ದಕ್ಷಿಣ ಅಮೆರಿಕದ ಈ ಪುಟ್ಟ ದೇಶದ ಹೆಸರು ಬಹುಶಃ ತುಂಬ ಜನರಿಗೆ ಅಪರಿಚಿತವಾಗಿರಬಹುದು. ಆದರೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮೂಲದ ಅಭಿಲಾಷ್ಗೆ ಆ ದೇಶ ಈಗ ಎರಡನೇ ಮನೆ. ಕಳೆದ ಕೆಲವು ವರ್ಷಗಳಿಂದ ಅಲ್ಲಿ 500 ಎಕರೆ ತೆಂಗಿನ ತೋಟ ಮಾಡಿದ್ದಾರೆ. ಸುಮಾರು 29 ಸಾವಿರ ಶಾರ್ಟ್ ಡ್ವಾರ್ಫ್ ತಳಿಯ ತೆಂಗಿನ ಸಸಿಗಳ ನಿರ್ವಹಣೆ ಅವರ ಜವಾಬ್ದಾರಿ. ಅವುಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಸಸಿಗಳು ಈಗಾಗಲೇ ಫಲ ನೀಡುತ್ತಿವೆ.ಗಯಾನಾದಲ್ಲಿ ಕನ್ನಡಿಗನ ಕೃಷಿ ಸಾಧನೆ: ನಿಪ್ಪಾಣಿಯ ಅಭಿಲಾಷ್ ಯಶೋಗಾಥೆಎಸ್ಐಆರ್: ಅರ್ಹರ ಹೊರಗಿರಿಸಿದ ಚುನಾವಣಾ ಆಯೋಗಬೆಂಗಳೂರು: ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಹೆಸರಿನಲ್ಲಿ ಅರ್ಹ ಮತದಾರರ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂಬ ಆರೋಪದ ಮಧ್ಯೆಯೇ, ರಾಜ್ಯದಲ್ಲಿ ‘ಪತ್ತೆಯಾಗದ ಅಥವಾ ಶಾಶ್ವತ ಸ್ಥಳಾಂತರ ಅಥವಾ ಇತರೆ’ ಎಂದು ಕರಡು ಮತದಾರರ ಪಟ್ಟಿಯಿಂದ ಅರ್ಹರನ್ನು ಹೊರಗೆ ಇಡಲಾಗುತ್ತಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.ಎಸ್ಐಆರ್: ಅರ್ಹರ ಹೊರಗಿರಿಸಿದ ಚುನಾವಣಾ ಆಯೋಗಕೇಂದ್ರ ಸರ್ಕಾರದ 14 ಉದ್ಯೋಗಗಳಿಗೆ ಆಯ್ಕೆ: ನಾಗೇಂದ್ರ ಸಾಯಿ ಯುವಕರಿಗೆ ಮಾದರಿಒಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪರದಾಡುವ ಈ ಕಾಲದಲ್ಲಿ ಆಂಧ್ರಪ್ರದೇಶ ಮೂಲದ ನಾಗೇಂದ್ರ ಸಾಯಿ ಎಂಬುವವರು ಒಂದೇ ವರ್ಷದಲ್ಲಿ ಬರೋಬ್ಬರಿ 14 ಕೇಂದ್ರ ಸರ್ಕಾರಿ ಉದ್ಯೋಗಗಳಿಗೆ ಆಯ್ಕೆಯಾಗಿ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ. ಕೇಂದ್ರ ಸರ್ಕಾರದ 14 ಉದ್ಯೋಗಗಳಿಗೆ ಆಯ್ಕೆ: ನಾಗೇಂದ್ರ ಸಾಯಿ ಯುವಕರಿಗೆ ಮಾದರಿ