ಚೆಸ್ ಚಾಂಪಿಯನ್ಷಿಪ್: ಮಣಿ, ದಿವಿ ಬಿಜೇಶ್ಗೆ ಚಾಂಪಿಯನ್ ಪಟ್ಟ
ಮಂಗಳೂರು: ಪಶ್ಚಿಮ ಬಂಗಾಳದ ಮಣಿ ಸರ್ಬಾರ್ತೊ ಮತ್ತು ಕೇರಳದ ದಿವಿ ಬಿಜೇಶ್, ಭಾರತೀಯ ಚೆಸ್ ಫೆಡರೇಷನ್ ಸಹಯೋಗದಲ್ಲಿ ದಕ್ಷಿಣ ಕನ್ನಡ ಚೆಸ್ ಸಂಸ್ಥೆ ನಗರದಲ್ಲಿ ಆಯೋಜಿಸಿದ್ದ 11 ವರ್ಷದೊಳಗಿನವರ ಫಿಡೆ ರೇಟೆಡ್ ಎನ್ಎಂಪಿಎ ರಾಷ್ಟ್ರೀಯ ಚೆಸ್ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಬಾಲಕರ ಓಪನ್ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.ಶನಿವಾರ ನಡೆದ ಕುತೂಹಲಕಾರಿ ಅಂ

ಮಂಗಳೂರು: ಪಶ್ಚಿಮ ಬಂಗಾಳದ ಮಣಿ ಸರ್ಬಾರ್ತೊ ಮತ್ತು ಕೇರಳದ ದಿವಿ ಬಿಜೇಶ್, ಭಾರತೀಯ ಚೆಸ್ ಫೆಡರೇಷನ್ ಸಹಯೋಗದಲ್ಲಿ ದಕ್ಷಿಣ ಕನ್ನಡ ಚೆಸ್ ಸಂಸ್ಥೆ ನಗರದಲ್ಲಿ ಆಯೋಜಿಸಿದ್ದ 11 ವರ್ಷದೊಳಗಿನವರ ಫಿಡೆ ರೇಟೆಡ್ ಎನ್ಎಂಪಿಎ ರಾಷ್ಟ್ರೀಯ ಚೆಸ್ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಬಾಲಕರ ಓಪನ್ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.ಶನಿವಾರ ನಡೆದ ಕುತೂಹಲಕಾರಿ ಅಂತಿಮ, 11ನೇ ಸುತ್ತಿನಲ್ಲಿ ಅಗ್ರ ಶ್ರೇಯಾಂಕಿತೆ ದಿವಿ 3ನೇ ಶ್ರೇಯಾಂಕಿತೆ ಕರ್ನಾಟಕದ ನಕ್ಷತ್ರ ಗುಮುದವೆಲ್ಲಿ ವಿರುದ್ಧ ಜಯ ಗಳಿಸಿ 9.5 ಪಾಯಿಂಟ್ ಕಲೆ ಹಾಕಿದರು. ಈಚೆಗೆ ಜಾರ್ಜಿಯಾದಲ್ಲಿ ನಡೆದ 12 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ದಿವಿ ಮಂಗಳೂರಿನಲ್ಲಿ ಮೊದಲ ಸುತ್ತಿನಲ್ಲಿ ಮಾತ್ರ ಅಗ್ರ ಸ್ಥಾನ ಗಳಿಸಿದ್ದರು. ನಂತರ ಏಳು–ಬೀಳುಗಳನ್ನು ಕಂಡ ಅವರು ಶುಕ್ರವಾರ ನಕ್ಷತ್ರ ಜೊತೆ ಅಗ್ರಸ್ಥಾನ ಹಂಚಿಕೊಂಡಿದ್ದರು. 8ನೇ ಸುತ್ತಿನಿಂದ ಮೊದಲ ಸ್ಥಾನದಲ್ಲಿದ್ದ ನಕ್ಷತ್ರ 8.5 ಪಾಯಿಂಟ್ಗಳೊಂದಿಗೆ 4ನೇ ಸ್ಥಾನಕ್ಕೆ ಕುಸಿದರು. 9 ಪಾಯಿಂಟ್ ಗಳಿಸಿದ 9ನೇ ಶ್ರೇಯಾಂಕಿತೆ ನವದೆಹಲಿಯ ವಂಶಿರಾ ರಾವತ್ ರನ್ನರ್ ಅಪ್, ಮಹಾರಾಷ್ಟ್ರದ ಪ್ರಿಶಾ ಘೊಲಪ್ (8.5) 3ನೆಯವರಾದರು. ಬಾಲಕರ ವಿಭಾಗದಲ್ಲಿ 7ನೇ ಸುತ್ತಿನಿಂದ ಅಗ್ರಸ್ಥಾನ ಉಳಿಸಿಕೊಂಡಿದ್ದ 2ನೇ ಶ್ರೇಯಾಂಕದ ಮಣಿ ಕೊನೆಯ ಸುತ್ತಿನಲ್ಲಿ 23ನೇ ಶ್ರೇಯಾಂಕಿತ, ಕೇರಳದ ದೇವನಾರಾಯಣನ್ ಕಳ್ಳಿಯತ್ ವಿರುದ್ಧ ಜಯ ಗಳಿಸಿದರು. ಅವರು ಇಡೀ ಟೂರ್ನಿಯಲ್ಲಿ ಅತ್ಯಧಿಕ ಪಾಯಿಂಟ್ ಗಳಿಸಿದ ಏಕೈಕ ಆಟಗಾರ ಎನಿಸಿಕೊಂಡರು. 5ನೇ ಶ್ರೇಯಾಂಕಿತ, ಒಡಿಶಾದ ಸಾತ್ವಿಕ್ ಸ್ವಾಯ್ನ್ 9.5 ಪಾಯಿಂಟ್ಗಳೊಂದಿಗೆ ರನ್ನರ್ ಅಪ್ ಆದರು. ಅಗ್ರ ಶ್ರೇಯಾಂಕಿತ ಮಹಾರಾಷ್ಟ್ರದ ಅದ್ವಿಕ್ ಅಗರವಾಲ್ (9 ಪಾಯಿಂಟ್) 3ನೇ ಸ್ಥಾನ ಗಳಿಸಿದರು. ಅವರೊಂದಿಗೆ ಪಾಯಿಂಟ್ ಹಂಚಿಕೊಂಡ ಮಹಾರಾಷ್ಟ್ರದ ಪರ್ವ್ ಹಕಾರಿ 4ನೇ ಸ್ಥಾನ ಗಳಿಸಿದರು.ಕೊನೆಯ ಸುತ್ತಿನ ಅಗ್ರ 10 ಬೋರ್ಡ್ಗಳ ಫಲಿತಾಂಶಗಳು: ಬಾಲಕರ ಓಪನ್ ವಿಭಾಗ: ಪಶ್ಚಿಮ ಬಂಗಾಳದ ಮಣಿ ಸರ್ಬಾರ್ತೊಗೆ ಕೇರಳದ ದೇವನಾರಾಯಣನ್ ಕಳ್ಳಿಯತ್ ವಿರುದ್ಧ ಜಯ; ಒಡಿಶಾದ ಸಾತ್ವಿಕ್ ಸ್ವಾಯ್ನ್ಗೆ ಉತ್ತರ ಪ್ರದೇಶದ ಅಂಶ್ ಕಾಬ್ರ ವಿರುದ್ಧ, ಮಹಾರಾಷ್ಟ್ರದ ಅದ್ವಿಕ್ ಅಮಿತ್ ಅಗರವಾಲ್ಗೆ ಉತ್ತರ ಪ್ರದೇಶದ ಅಯಾಂಶ್ ಸಿಂಗ್ ವಿರುದ್ಧ, ಮಹಾರಾಷ್ಟ್ರದ ಪರ್ವ್ ಹಕಾನಿಗೆ ತಮಿಳುನಾಡಿನ ವರ್ಚಸ್ ಜಯರಾಮನ್ ವಿರುದ್ಧ ಗೆಲುವು; ಗುಜರಾತ್ನ ಧ್ಯಾನ್ ಪಟೇಲ್–ಮಹಾರಾಷ್ಟ್ರದ ಮೇಧಾಂಶ್ ದಿನೇಶ್ ಪೂಜಾರಿ ನಡುವೆ ಡ್ರಾ; ಪಶ್ಚಿಮ ಬಂಗಾಳದ ಒಯ್ಶಿಕ್ ಮೊಂಡಲ್ಗೆ ಬಿಹಾರದ ದೇವಾಂಶ್ ಕೇಶ್ರಿ ವಿರುದ್ಧ, ಕರ್ನಾಟಕದ ಸ್ರಗ್ವಿದಾಗೆ ಗೋವಾದ ಗವಾಸ್ ರಿಷಿತ್ ವಿರುದ್ಧ, ಮಹಾರಾಷ್ಟ್ರದ ಅನೀಶ್ ಜಾವಳ್ಕರ್ಗೆ ತಮಿಳುನಾಡಿನ ಲಿಶಾಂತ್ ವಿರುದ್ಧ ಜಯ; ನವದೆಹಲಿಯ ವಿವಾನ್ ಚಾವ್ಲಾ–ಉತ್ತರಪ್ರದೇಶದ ಗರ್ವಿತ್ ಜೈನ್ ನಡುವೆ ಡ್ರಾ.ಬಾಲಕಿಯರ ವಿಭಾಗ: ಕೇರಳದ ದಿವಿ ಬಿಜೇಶ್ಗೆ ಕರ್ನಾಟಕದ ನಕ್ಷತ್ರ ಗುಮುದವೆಲ್ಲಿ ವಿರುದ್ಧ ಗೆಲುವು; ನವದೆಹಲಿಯ ವಂಶಿಕಾ ರಾವತ್ಗೆ ಪಂಜಾಬ್ನ ರಾಧ್ಯಾ ಮಲ್ಹೋತ್ರ ವಿರುದ್ಧ ಜಯ; ಮಹಾರಾಷ್ಟ್ರದ ಪ್ರಿಶಾ ಘೊಲಪ್–ತೆಲಂಗಾಣದ ಸಯ್ಯದ್ ರೌದಾ ನಡುವೆ ಡ್ರಾ; ತೆಲಂಗಾಣದ ಅನಯ ಶರ್ಮಾಗೆ ಮಹಾರಾಷ್ಟ್ರದ ತ್ವೇಶಾ ಆಶಿಶ್ ಜೈನ್ ವಿರುದ್ಧ, ಕೇರಳದ ಸಹ್ಯ ಕೈಲಾಸ್ಗೆ ತಮಿಳುನಾಡಿನ ದೇನಿಯಾ ವಿರುದ್ಧ, ಮಹಾರಾಷ್ಟ್ರದ ಮಿಶ್ಕಾ ತ್ರಿಪಾಠಿಗೆ ತಮಿಳುನಾಡಿನ ಶ್ರೀಯಾ ವಿರುದ್ಧ ಗೆಲುವು; ತಮಿಳುನಾಡಿನ ಮೈತ್ರೇಯಿ– ತೆಲಂಗಾಣದ ಸಾಯ್ ಅಂಶಿತಾ ನಡುವೆ ಡ್ರಾ; ತಮಿಳುನಾಡಿನ ಯಕ್ಷಿಣಿಗೆ ತೆಲಂಗಾಣದ ವಂಶಿಕಾ ಬೋಗ ವಿರುದ್ಧ, ತಮಿಳುನಾಡಿನ ಹರ್ಷಿಕಾಗೆ ಪಶ್ಚಿಮ ಬಂಗಾಳದ ಉಪಧೃತಿ ಭಟ್ಟಾಚಾರ್ಯ ವಿರುದ್ಧ, ಮಹಾರಾಷ್ಟ್ರದ ಅನ್ವಿ ದೀಪಕ್ ಹಿಂಗೆಗೆ ಕರ್ನಾಟಕದ ನಿಯೋಲ ಪಿಂಟೊ ಎದುರು ಗೆಲುವು.ಓಪನ್ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಮಣಿ ಸರ್ಬಾರ್ತೊ (ಮಧ್ಯ) ರನ್ನರ್ ಅಪ್ ಸಾತ್ವಿಕ್ ಸ್ವಾಯ್ನ್ (ಎಡ) ಮತ್ತು 3ನೇ ಸ್ಥಾನ ಗಳಿಸಿದ ಅದ್ವಿಕ್ ಅಗರವಾಲ್