ಶಿವಗಂಗೆ ಬೆಟ್ಟದಲ್ಲಿ ಯುವಕ ನಾಪತ್ತೆ
ದಾಬಸ್ಪೇಟೆ: ಚಾರಣಕ್ಕೆ ಬಂದ ಯುವಕನೊಬ್ಬ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾಗಿದ್ದು, ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಹುಡುಕಾಟ ನಡೆಸಿದರೂ ಯುವಕನ ಸುಳಿವು ಸಿಕ್ಕಿಲ್ಲ.ಪ್ರತೀಕ್ ಉಪಾಧ್ಯಾಯ (31) ನಾಪತ್ತೆಯಾದ ಯುವಕ. ಆಗಸ್ಟ್ 7ರಂದು ಚಾರಣಕ್ಕೆ ಬಂದಿದ್ದರು. ಪ್ರತೀಕ್ ಅವರು ಉದ್ಯಮಿಯೊಬ್ಬರ ಪುತ್ರ.ಶುಕ್ರವಾರ ಬೆಳಿಗ್ಗೆ ಬೆಟ್ಟ ಏರುತ್ತಿ

ದಾಬಸ್ಪೇಟೆ: ಚಾರಣಕ್ಕೆ ಬಂದ ಯುವಕನೊಬ್ಬ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾಗಿದ್ದು, ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಹುಡುಕಾಟ ನಡೆಸಿದರೂ ಯುವಕನ ಸುಳಿವು ಸಿಕ್ಕಿಲ್ಲ.ಪ್ರತೀಕ್ ಉಪಾಧ್ಯಾಯ (31) ನಾಪತ್ತೆಯಾದ ಯುವಕ. ಆಗಸ್ಟ್ 7ರಂದು ಚಾರಣಕ್ಕೆ ಬಂದಿದ್ದರು. ಪ್ರತೀಕ್ ಅವರು ಉದ್ಯಮಿಯೊಬ್ಬರ ಪುತ್ರ.ಶುಕ್ರವಾರ ಬೆಳಿಗ್ಗೆ ಬೆಟ್ಟ ಏರುತ್ತಿರುವುದು ದಾಸೋಹದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಆದರೆ ಕೆಳಗೆ ಇಳಿದಿರುವ ದೃಶ್ಯಗಳು ಕಾಣಿಸುತ್ತಿಲ್ಲ. ಬುಲೆಟ್ ಬೈಕ್ನಲ್ಲಿ ಬಂದಿದ್ದ ಯುವಕ, ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನಿಲುಗಡೆ ಮಾಡಿ ಬೆಟ್ಟ ಏರಿದ್ದರು ಎಂದು ಹೇಳಲಾಗಿದೆ.ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯದಲ್ಲಿ ಯುವಕನ ಚಹರೆ ಪತ್ತೆಯಾಗಿದೆ. ಬೆಟ್ಟ ಇಳಿದು ಹೋಗಿರುವ ದೃಶ್ಯ ಇಲ್ಲ. ಬೆಟ್ಟದಲ್ಲೇ ನಾಪತ್ತೆಯಾಗಿರುವ ಶಂಕೆಯಿದೆ. ಮೊಬೈಲ್ ಫೋನ್ ಸಹ ಸ್ವಿಚ್ ಆಫ್ ಆಗಿದೆ. ಒಬ್ಬನೇ ಚಾರಣಕ್ಕೆ ಬಂದಿದ್ದರೇ ಅಥವಾ ಬೇರೆಯಾರಾದರೂ ಜತೆಗೆ ಇದ್ದರೇ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದರು.ನೆಲಮಂಗಲ ಹಾಗೂ ದಾಬಸ್ಪೇಟೆ ಪೊಲೀಸರು, ಶಿವಗಂಗೆ ಬೆಟ್ಟದ ಶಾಂತಲಾ ಡ್ರಾಪ್ನಲ್ಲಿ ಡ್ರೋನ್ ಕ್ಯಾಮೆರಾದ ಮೂಲಕ ಶೋಧ ನಡೆಸಿದರೂ ಸುಳಿವು ಸಿಕ್ಕಿಲ್ಲ. ಶಾಂತಲಾ ಡ್ರಾಪ್ ಅಪಾಯಕಾರಿ ಸ್ಥಳವಾಗಿದ್ದು, ಅಲ್ಲಿ ಭಾನುವಾರವೂ ಶೋಧ ನಡೆಸಲಾಗುವುದು ಎಂದು ಪೊಲೀಸರು ಹೇಳಿದರು.ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.ಪಾರ್ಕಿಂಗ್ ಜಾಗದಲ್ಲಿ ನಿಂತಿರುವ ಬುಲೆಟ್ ಬೈಕ್