ಕೌಶಲಗಳನ್ನು ಪಕ್ವ ಮಾಡಿಕೊಳ್ಳಲು, ಬದುಕು ಕಟ್ಟಿಕೊಳ್ಳಲು ಉನ್ನತ ಶಿಕ್ಷಣ ಬೇಕು: ಹೆಚ್.ಆರ್.ರಂಗನಾಥ್
– ಎಐ ಉದ್ಯೋಗಗಳನ್ನು ಕೊಡಬಹುದು, ಕಿತ್ತುಕೊಳ್ಳಲೂಬಹುದು – ಸಾಕಷ್ಟು ಕಡೆ ಉದ್ಯೋಗಗಳು ಲಭ್ಯವಿದ್ರೂ, ಕೆಲಸ ಮಾಡಲು ಜನರಿಲ್ಲ ಬೆಂಗಳೂರು: ಕೌಶಲಗಳನ್ನು ಪಕ್ವ ಮಾಡಿಕೊಳ್ಳಲು ಮತ್ತು ಬದುಕು ಕಟ್ಟಿಕೊಳ್ಳಲು ಉನ್ನತ ಶಿಕ್ಷಣ ಬೇಕು ಎಂದು ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (H.R.Ranganath) ತಿಳಿಸಿದರು. ಪಬ್ಲಿಕ್ ಟಿವಿ (PUBLiC TV) ಪ್ರಸ್ತುತ ಪಡಿಸುವಂಆ6

– ಎಐ ಉದ್ಯೋಗಗಳನ್ನು ಕೊಡಬಹುದು, ಕಿತ್ತುಕೊಳ್ಳಲೂಬಹುದು – ಸಾಕಷ್ಟು ಕಡೆ ಉದ್ಯೋಗಗಳು ಲಭ್ಯವಿದ್ರೂ, ಕೆಲಸ ಮಾಡಲು ಜನರಿಲ್ಲ ಬೆಂಗಳೂರು: ಕೌಶಲಗಳನ್ನು ಪಕ್ವ ಮಾಡಿಕೊಳ್ಳಲು ಮತ್ತು ಬದುಕು ಕಟ್ಟಿಕೊಳ್ಳಲು ಉನ್ನತ ಶಿಕ್ಷಣ ಬೇಕು ಎಂದು ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (H.R.Ranganath) ತಿಳಿಸಿದರು. ಪಬ್ಲಿಕ್ ಟಿವಿ (PUBLiC TV) ಪ್ರಸ್ತುತ ಪಡಿಸುವಂಆ6 ಅಡ್ವರ್ಟೈಸಿಂಗ್ ಸಹಯೋಗದಲ್ಲಿ ವಿದ್ಯಾಮಂದಿರ (Vidhya Mandira) 2 ದಿನಗಳ ಮೆಗಾ ಶೈಕ್ಷಣಿಕ ಮತ್ತು ಉದ್ಯೋಗ ಮೇಳ ಉದ್ಘಾಟನೆ ಬಳಿಕ ಅವರು ಮಾತನಾಡಿದರು. ಭಾರತವೂ ಸೇರಿದಂತೆ ಬಹಳಷ್ಟು ದೇಶಗಳಲ್ಲಿ ಮಕ್ಕಳು ಒಂದು ಹಂತದ ಶಿಕ್ಷಣ ಮುಗಿಸಿದ ಮೇಲೆ ಮುಂದಕ್ಕೆ ಹೋಗ್ತಾನೆ ಇಲ್ಲ. ಬೇಗ ಕೆಲಸಕ್ಕೆ ಸೇರಿಕೊಳ್ತಿದ್ದಾರೆ. ಸಣ್ಣಪುಟ್ಟ ಕೆಲಸಗಳಲ್ಲೇ ನೆಮ್ಮದಿ, ಶಾಂತಿ ಕಾಣುತ್ತಿದ್ದಾರೆ. ಇಷ್ಟೇ ಸಾಕು ಎನ್ನುವ ನಿರ್ಧಾರಕ್ಕೆ ಬರುತ್ತಿದ್ದಾರೆ. ಹಾಗಾಗಿ, ಉನ್ನತ ಶಿಕ್ಷಣಕ್ಕೆ ಹೋಗ್ತಾನೆ ಇಲ್ಲ. ಮೋಸ್ಟ್ ಅಡ್ವಾನ್ಸ್ಡ್ ದೇಶ ಅಂತ ಕರೆಸಿಕೊಳ್ಳುವ ಅಮೆರಿಕಗೂ ಇದೇ ಸಮಸ್ಯೆ ಎಂದು ಹೇಳಿದರು. ಉನ್ನತ ಶಿಕ್ಷಣ ಏಕೆ ಬೇಕು? ಕೌಶಲ್ಯದಲ್ಲಿ ಪರಿಪೂರ್ಣವಾಗಿ ನಮ್ಮನ್ನು ತಯಾರಿ ಮಾಡುವುದೇ ಉನ್ನತ ಶಿಕ್ಷಣ. ನಮ್ಮನ್ನು ಜೀವನಕ್ಕೆ ತಯಾರಿ ಮಾಡುವುದು ಪದವಿಪೂರ್ವ ಶಿಕ್ಷಣ. ಆದರೆ, ಜೀವನ ಕಟ್ಟಿಕೊಳ್ಳಲು ಬೇಕಾದ ಕೌಶಲವನ್ನು ಉನ್ನತ ಶಿಕ್ಷಣ ಮಾತ್ರ ಕೊಡಲು ಸಾಧ್ಯ. ಹಳೆ ಕಾಲದಲ್ಲಿ ಎಸ್ಎಸ್ಎಲ್ಸಿಯನ್ನ ಗಂಭೀರವಾಗಿ ಪರಿಗಣಿಸುತ್ತಿದ್ದರು. ಯಾಕಂದ್ರೆ, ಆಗ ಕೇಂದ್ರ ಸರ್ಕಾರದ ಪೋಸ್ಟಲ್ ಮತ್ತು ರೈಲ್ವೆ ಇನ್ನಿತರ ವಲಯಗಳಲ್ಲಿ ಎಸ್ಎಸ್ಎಲ್ಸಿ ಬೇಸ್ ಮೇಲೆ ಉದ್ಯೋಗ ಕೊಡುತ್ತಿದ್ದರು. ನಂತರದ ದಿನಗಳಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಹೋಯ್ತು. ಬಳಿಕ ನನ್ನ ಮಗ ಡಿಗ್ರಿ ಮಾಡಿಕೊಂಡಿದ್ದಾನೆ ಅನ್ನೋದೇ ಪೋಷಕರಿಗೆ ಹೆಮ್ಮೆಯ ವಿಚಾರ ಆಗಿತ್ತು. ಈಗ ಡಿಗ್ರಿಯೂ ಹೋಗಿದೆ. ಪಿಜಿಗೆ ಬಂದು ನಿಂತಿದ್ದೇನೆ. ಮುಂದಿನ ದಿನಗಳಲ್ಲಿ ಪಿಜಿಯೂ ಹೋಗಬಹುದೇನೋ ಎಂದು ವಿವರಿಸಿದರು. ಓದುವ ಟೈಮಲ್ಲಿ ಓದಬೇಕು. ಕಾಲೇಜಿನಲ್ಲಿದ್ದಾಗ ಆ ಜೀವನವನ್ನು ಬಹಳಷ್ಟು ಮಕ್ಕಳು ಹೇಟ್ ಮಾಡುತ್ತಾರೆ. ಆದರೆ, ಕಾಲೇಜು ಬಿಟ್ಟ ಮೇಲೆ ಗೊತ್ತಾಗುತ್ತೆ ಅದು ಬೆಸ್ಟ್ ಇತ್ತು ಅಂತ. ನನಗೂ ಅದೇ ಅನುಭವ ಆಗಿದೆ ಎಂದು ತಿಳಿಸಿದರು. ಪಿಜಿ ಮಾಡೋದರಿಂದ ಕೌಶಲ್ಯಗಳನ್ನ ಪಕ್ವ ಮಾಡಿಕೊಳ್ಳಲು, ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ. ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಇಲ್ಲದಿದ್ರೆ ಕಷ್ಟ ಆಗಬಹುದು ಎಂದು ವಿದ್ಯಾರ್ಥಿಗಳಿಗೆ ಎಚ್ಚರಿಸಿದರು. ಎಐ ಉದ್ಯೋಗಗಳನ್ನ ಕೊಡಬಹುದು, ಕಿತ್ತುಕೊಳ್ಳಲೂಬಹುದು. ಬಹುಜನಸಂಖ್ಯೆ ಇರುವ ಭಾರತದಂತಹ ದೇಶದಲ್ಲಿ, ಕೆಲವೊಮ್ಮೆ ಉದ್ಯೋಗ ಕೊಡುವುದೇ ಕಷ್ಟ ಎನಿಸಿಬಿಡುತ್ತದೆ. ಆದರೀಗ, ಅದು ಉಲ್ಟಾ ಆಗುತ್ತಿದೆ. ಬಹಳ ಉದ್ಯೋಗಳು ಲಭ್ಯವಿದ್ರೂ ಜನರಿಲ್ಲ. ಸಣ್ಣ ಉದ್ಯೋಗಗಳಿವೆ. ಡ್ರೈವರ್ಗಳು ಬೇಕು ಅಂತ ವಾಹನಗಳ ಮೇಲೆ ಬರೆದಿರುತ್ತಾರೆ. ಇತ್ತೀಚೆಗೆ ನಾನು ವಿದೇಶ ಪ್ರವಾಸದಲ್ಲಿದ್ದೆ. ಯಾವ ಶಾಪ್ ನೋಡಿದರೂ, ಉದ್ಯೋಗ ಖಾಲಿ ಇದೆ ಅಂತ ಬೋರ್ಡ್ ಹಾಕಿದ್ದರು. ಕೆಲಸ ಇದೆ, ಆದ್ರೆ ಬರೋರಿಲ್ಲ ಎಂದು ತಿಳಿಸಿದರು. ಹೆಚ್.ಆರ್.ರಂಗನಾಥ್ ಅವರು ಇದೇ ವೇಳೆ ತಮ್ಮ ಹಳೆಯ ಕೀ-ಪ್ಯಾಡ್ ಫೋನ್ ಬಗ್ಗೆಯೂ ಅನುಭವ ಹಂಚಿಕೊAಡರು. ವಿದೇಶ ಪ್ರವಾಸದಲ್ಲಿದ್ದಾಗ ಹಳೆಯ ಫೋನ್ನಲ್ಲಿ ಸಮಸ್ಯೆ ಇದೆ ಅಂತ ಫೋನ್ ಶೋರೂಂಗೆ ಹೋದಾಗ, ಸಿಬ್ಬಂದಿ ಮೊದಲು ಫೋನ್ ಜೊತೆಗೆ ನನ್ನ ಫೋಟೊ ತೆಗೆದುಕೊಂಡರು. ಹಳೆ ಫೋನನ್ನು ಇನ್ನೂ ಬಳಕೆ ಮಾಡುತ್ತಿರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು ಎಂದು ನೆನಪಿಸಿಕೊಂಡರು. ಕಾರ್ಯಕ್ರಮದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ, ರೇವಾ ಯೂನಿವರ್ಸಿಟಿ ಚಾನ್ಸಲರ್ ಡಾ. ಪಿ.ಶ್ಯಾಮರಾಜು, ಕೇಂಬ್ರಿಡ್ಜ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಚೇರ್ಮನ್ ಡಿ.ಕೆ.ಮೋಹನ್ ಉಪಸ್ಥಿತರಿದ್ದರು.