ತಾರಾ ಹೋಟೆಲ್ಗಳಿಗೆ ಉತ್ಪನ್ನ ಪೂರೈಕೆ: ಆಹಾರ ದಾಸ್ತಾನು ಕೇಂದ್ರಗಳ ಮೇಲೆ ದಾಳಿ
ಬೆಂಗಳೂರು: ತಾರಾ ಹೋಟೆಲ್ಗಳಿಗೆ ಆಹಾರ ಉತ್ಪನ್ನಗಳನ್ನು ಪೂರೈಕೆ ಮಾಡುವ ದಾಸ್ತಾನು ಕೇಂದ್ರಗಳ ಮೇಲೆ ಶನಿವಾರ ದಿಢೀರ್ ದಾಳಿ ನಡೆಸಿದ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು, ಅವಧಿ ಮುಕ್ತಾಯಕ್ಕೆ ಸಮೀಪದಲ್ಲಿರುವ ಪಾನೀಯ, ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಂಡರು.ವಿಶೇಷ ತಪಾಸಣೆ ಕಾರ್ಯಾಚರಣೆಯ ಭಾಗವಾಗಿ ಅಧಿಕಾರಿಗಳ 30 ತಂಡಗಳು ನಗರದ ಪ್ರಮುಖ ಆಹಾರ ದಾಸ್ತಾನು ಕೇಂದ್

ಬೆಂಗಳೂರು: ತಾರಾ ಹೋಟೆಲ್ಗಳಿಗೆ ಆಹಾರ ಉತ್ಪನ್ನಗಳನ್ನು ಪೂರೈಕೆ ಮಾಡುವ ದಾಸ್ತಾನು ಕೇಂದ್ರಗಳ ಮೇಲೆ ಶನಿವಾರ ದಿಢೀರ್ ದಾಳಿ ನಡೆಸಿದ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು, ಅವಧಿ ಮುಕ್ತಾಯಕ್ಕೆ ಸಮೀಪದಲ್ಲಿರುವ ಪಾನೀಯ, ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಂಡರು.ವಿಶೇಷ ತಪಾಸಣೆ ಕಾರ್ಯಾಚರಣೆಯ ಭಾಗವಾಗಿ ಅಧಿಕಾರಿಗಳ 30 ತಂಡಗಳು ನಗರದ ಪ್ರಮುಖ ಆಹಾರ ದಾಸ್ತಾನು ಕೇಂದ್ರಗಳಿಗೆ ಭೇಟಿ ನೀಡಿ, ಗುಣಮಟ್ಟವನ್ನು ಪರಿಶೀಲನೆ ನಡೆಸಿದವು.ನಗರದ ತಾರಾ ಹೋಟೆಲ್ಗಳಿಗೆ ಕೋಲ್ಡ್ಮ್ಯಾನ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ರಾಧಾಕೃಷ್ಣ ಫುಡ್ಲ್ಯಾಂಡ್ ಲಿಮಿಟೆಡ್ನ ಕೇಂದ್ರಗಳು ಆಹಾರ ಪದಾರ್ಥಗಳನ್ನು ಸರಬರಾಜು ಮಾಡುತ್ತಿವೆ. ಈ ಕೇಂದ್ರಗಳಲ್ಲಿನ ಆಹಾರೋತ್ಪನ್ನಗಳ ದಾಸ್ತಾನು, ಗುಣಮಟ್ಟ ಹಾಗೂ ಸುರಕ್ಷತಾ ಕ್ರಮಗಳ ಕುರಿತು ತಂಡ ಪರಿಶೀಲನೆ ನಡೆಸಿತು. ಈ ಕೇಂದ್ರಗಳಲ್ಲಿ ಅವಧಿ ಮುಕ್ತಾಯಕ್ಕೆ ಸಮೀಪದಲ್ಲಿದ್ದ ಸೋಯಾ ಸೇರಿ ವಿವಿಧ ಬಗೆಯ 70 ಕೆ.ಜಿ. ಸಾಸ್ಗಳನ್ನು ವಶಪಡಿಸಿಕೊಳ್ಳಲಾಯಿತು. ಸುಹಾಸನೆ ಭರಿತ ವಿವಿಧ ಪಾನೀಯಗಳ ಬಳಕೆಯ ಅವಧಿ ಮುಕ್ತಾಯಕ್ಕೆ ಬಂದಿರುವುದನ್ನು ಗಮನಸಿದ ಅಧಿಕಾರಿಗಳು, 10 ಲೀಟರ್ನಷ್ಟು ಪಾನೀಯವನ್ನು ವಶಪಡಿಸಿಕೊಂಡು ನಾಶಪಡಿಸಿದರು. ಮಾಂಸದ ಐದು ಮಾದರಿಗಳು ಹಾಗೂ 13 ಇತರೆ ಆಹಾರ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯದ ವಿಶ್ಲೇಷಣೆಗೆ ಕಳುಹಿಸಿದರು. ‘ಕೋಲ್ಡ್ಮ್ಯಾನ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ರಾಧಾಕೃಷ್ಣ ಫುಡ್ಲ್ಯಾಂಡ್ ಲಿಮಿಟೆಡ್ನ ಕೇಂದ್ರಗಳಲ್ಲಿ ಮಾಂಸವನ್ನು 18 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಲಾಗಿದೆ. ಬಳಕೆಯ ಅವಧಿ ಒಂಬತ್ತು ತಿಂಗಳೆಂದು ಸಮೂದಿಸಲಾಗಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸುವ ಆಹಾರ ಉದ್ದಿಮೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಇಲಾಖೆ ಆಯುಕ್ತ ಕೆ. ಶ್ರೀನಿವಾಸ ತಿಳಿಸಿದ್ದಾರೆ.