ಎಸ್ಐಆರ್ ಗಣತಿ ನಮೂನೆ ಡಿಜಿಟಲೀಕರಣ: 1.40 ಲಕ್ಷ ಮತದಾರರ ‘ರೋಲ್ಬ್ಯಾಕ್’
ಬೆಂಗಳೂರು: ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ, ರಾಜ್ಯದ ಅರ್ಹ ಮತದಾರರನ್ನು ಎಎಸ್ಡಿಡಿಒ (ಪತ್ತೆಯಾಗದ/ಸ್ಥಳಾಂತರ/ಮೃತ/ಹೆಚ್ಚು ಕಡೆ ನೋಂದಣಿ/ಇತರೆ) ಎಂದು ವರ್ಗೀಕರಿಸಲಾಗಿದ್ದು, ಈ ಲೋಪವನ್ನು ‘ರೋಲ್ಬ್ಯಾಕ್’ ಹೆಸರಿನಲ್ಲಿ ಸರಿಪಡಿಸಲಾಗುತ್ತಿದೆ. ಈವರೆಗೆ 1.40 ಲಕ್ಷ ಮತದಾರರನ್ನು ಎಎಸ್ಡಿಡಿಒ ಪಟ್ಟಿಯಿಂದ ಹೊರತೆಗೆದು (ರೋಲ್ಬ್ಯ

ಬೆಂಗಳೂರು: ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ, ರಾಜ್ಯದ ಅರ್ಹ ಮತದಾರರನ್ನು ಎಎಸ್ಡಿಡಿಒ (ಪತ್ತೆಯಾಗದ/ಸ್ಥಳಾಂತರ/ಮೃತ/ಹೆಚ್ಚು ಕಡೆ ನೋಂದಣಿ/ಇತರೆ) ಎಂದು ವರ್ಗೀಕರಿಸಲಾಗಿದ್ದು, ಈ ಲೋಪವನ್ನು ‘ರೋಲ್ಬ್ಯಾಕ್’ ಹೆಸರಿನಲ್ಲಿ ಸರಿಪಡಿಸಲಾಗುತ್ತಿದೆ. ಈವರೆಗೆ 1.40 ಲಕ್ಷ ಮತದಾರರನ್ನು ಎಎಸ್ಡಿಡಿಒ ಪಟ್ಟಿಯಿಂದ ಹೊರತೆಗೆದು (ರೋಲ್ಬ್ಯಾಕ್), ಅವರ ಗಣತಿ ನಮೂನೆಗಳನ್ನು ಡಿಜಿಟಲೀಕರಿಸಲಾಗಿದೆ.ರಾಜ್ಯದ ಒಟ್ಟು 5.54 ಕೋಟಿ ಮತದಾರರ ಪೈಕಿ, ಆಗಸ್ಟ್ 4ರ ಸಂಜೆ ವೇಳೆಗೆ 1.11 ಕೋಟಿ ಮಂದಿಯನ್ನು ಎಎಸ್ಡಿಡಿಒ ಪಟ್ಟಿಗೆ ಸೇರಿಸಲಾಗಿತ್ತು. ಅರ್ಹರನ್ನು ಈ ಪಟ್ಟಿಯಿಂದ ತೆಗೆದು, ಲೋಪ ಸರಿಪಡಿಸಿದ ಕಾರಣಕ್ಕೆ ಶುಕ್ರವಾರ ಸಂಜೆ ವೇಳೆಗೆ ಎಎಸ್ಡಿಡಿಒ ಮತದಾರರ ಸಂಖ್ಯೆ 1.09 ಲಕ್ಷಕ್ಕೆ ಇಳಿಕೆಯಾಗಿದೆ.ಪತ್ತೆಯಿಲ್ಲದವರು ಪತ್ತೆಯಾದಾಗ...ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಆಗಸ್ಟ್ 4ರಂದು ನೀಡಿದ್ದ ಪ್ರಕಟಣೆಯಲ್ಲಿ 16.30 ಲಕ್ಷ (16,30,753) ಮತದಾರರನ್ನು ‘ಪತ್ತೆಯಾಗದ’ವರು ಎಂದು ಎಎಸ್ಡಿಡಿಒ ಪಟ್ಟಿಗೆ ಸೇರಿಸಲಾಗಿತ್ತು. ಆಗಸ್ಟ್ 7ರಂದು ನೀಡಿರುವ ಪ್ರಕಟಣೆಯಲ್ಲಿ ಈ ಸಂಖ್ಯೆ 15.90 ಲಕ್ಷಕ್ಕೆ (15,90,165) ಇಳಿಕೆಯಾಗಿದೆ.ಈ ಮೂರು ದಿನಗಳ ಅವಧಿಯಲ್ಲಿ 40,588 ಮತದಾರರನ್ನು ಎಎಸ್ಡಿಡಿಒನ ಪತ್ತೆಯಾಗದವರ ಪಟ್ಟಿಯಿಂದ ಹೊರಗೆ ತೆಗೆದು, ಅವರ ಗಣತಿ ನಮೂನೆಗಳನ್ನು ಡಿಜಿಟಲೀಕರಿಸಲಾಗಿದೆ.45,462 ಮಂದಿ ‘ಸ್ಥಳಾಂತರ’ದಿಂದ ಹೊರಕ್ಕೆಮತದಾರರ ಪಟ್ಟಿಯಲ್ಲಿ ಇರುವ ವಿಳಾಸ ಮತ್ತು ಮತದಾರರು ಹಾಲಿ ವಾಸವಿರುವ ವಿಳಾಸದಲ್ಲಿ ವ್ಯತ್ಯಾಸವಿದ್ದರೆ, ಅಂತಹವರನ್ನು ‘ಶಾಶ್ವತವಾಗಿ ಸ್ಥಳಾಂತರ’ ಎಂದು ವರ್ಗೀಕರಿಸಲಾಗುತ್ತಿದೆ. ಆಗಸ್ಟ್ 4ರ ಪ್ರಕಟಣೆಯ ಪ್ರಕಾರ ರಾಜ್ಯದಾದ್ಯಂತ 66.60 ಲಕ್ಷ (66,60,416) ಮತದಾರರನ್ನು ಹೀಗೆ ಎಎಸ್ಡಿಡಿಒ ಪಟ್ಟಿಗೆ ಸೇರಿಸಲಾಗಿತ್ತು.ತಕರಾರುಗಳು ದಾಖಲಾದ ಕಾರಣ 45,462 ಮತದಾರರನ್ನು ಎಎಸ್ಡಿಡಿಒನ ‘ಶಾಶ್ವತವಾಗಿಸ್ಥಳಾಂತರ’ ಪಟ್ಟಿಯಿಂದ ಹೊರಗೆ ತೆಗೆದು, ಗಣತಿ ನಮೂನೆಗಳನ್ನು ಡಿಜಿಟಲೀಕರಿಸಲಾಗಿದೆ. ಹೀಗಾಗಿ ಆಗಸ್ಟ್ 7ರ ಸಂಜೆ ವೇಳೆಗೆ ‘ಶಾಶ್ವತವಾಗಿ ಸ್ಥಳಾಂತರ’ವಾದ ಮತದಾರರ ಸಂಖ್ಯೆ 66.14 ಲಕ್ಷಕ್ಕೆ (66,14,954) ಇಳಿಕೆಯಾಗಿದೆ.54,315 ಮತದಾರರು ನಿರಾಳಗಣತಿ ನಮೂನೆ ಸ್ವೀಕರಿಸಲು ಒಪ್ಪಲಿಲ್ಲ ಅಥವಾ ಸಹಿ ಮಾಡಲಿಲ್ಲ ಎಂದು ಆಗಸ್ಟ್ 4ರವರೆಗೆ ಒಟ್ಟು 5.02 ಲಕ್ಷ (5,02,235) ಮತದಾರರನ್ನು ಬಿಎಲ್ಒಗಳು ‘ಇತರೆ’ ಎಂದು ವರ್ಗೀಕರಿಸಿದ್ದರು. ಆಗಸ್ಟ್ 7ರ ಸಂಜೆ 4ರ ಹೊತ್ತಿಗೆ ಈ ಸಂಖ್ಯೆ 4.47 ಲಕ್ಷಕ್ಕೆ (4,47,920) ಇಳಿಕೆಯಾಗಿದೆ. ಮೂರು ದಿನಗಳ ಅವಧಿಯಲ್ಲಿ ಬಿಎಲ್ಒಗಳು ರಾಜ್ಯದಾದ್ಯಂತ ಒಟ್ಟು 54,315 ಮತದಾರರನ್ನು ‘ಇತರೆ’ ವರ್ಗೀಕರಣದಿಂದ ರೋಲ್ಬ್ಯಾಕ್ ಮಾಡಿ, ಡಿಜಿಟಲೀಕರಿಸಿದ್ದಾರೆ.