ಯಶ್ ಅಬ್ಬರ: ಬಿಡುಗಡೆಯಾದ ಗಂಟೆಯಲ್ಲೇ ದಶಲಕ್ಷ ವೀಕ್ಷಣೆ ಕಂಡ ‘ಟಾಕ್ಸಿಕ್’ ಟ್ರೇಲರ್
ನಟ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್’ ಇಂದು (ಆಗಸ್ಟ್ 8) ರಾತ್ರಿ 7ಕ್ಕೆ ಬಿಡುಗಡೆಯಾಗಿದೆ.ಗೀತು ಮೋಹನ್ದಾಸ್ ಕಥೆ ಬರೆದು, ನಿರ್ದೇಶನ ಮಾಡಿರುವ ಈ ಸಿನಿಮಾ, ಇದೇ ತಿಂಗಳು 26ರಂದು ತೆರೆಗೆ ಅಪ್ಪಳಿಸಲಿದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಇಂಗ್ಲಿಷ್ ಭಾಷೆಗಳಲ್ಲಿ ನಿರ್ಮಾಣ ಮಾಡಲಾಗಿದೆ.ಅಂದಹಾಗೆ,

ನಟ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್’ ಇಂದು (ಆಗಸ್ಟ್ 8) ರಾತ್ರಿ 7ಕ್ಕೆ ಬಿಡುಗಡೆಯಾಗಿದೆ.ಗೀತು ಮೋಹನ್ದಾಸ್ ಕಥೆ ಬರೆದು, ನಿರ್ದೇಶನ ಮಾಡಿರುವ ಈ ಸಿನಿಮಾ, ಇದೇ ತಿಂಗಳು 26ರಂದು ತೆರೆಗೆ ಅಪ್ಪಳಿಸಲಿದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಇಂಗ್ಲಿಷ್ ಭಾಷೆಗಳಲ್ಲಿ ನಿರ್ಮಾಣ ಮಾಡಲಾಗಿದೆ.ಅಂದಹಾಗೆ, ಈ ಸಿನಿಮಾದ ಟ್ರೇಲರ್ ಬಿಡುಗಡೆಯಾದ ಒಂದೇ ಗಂಟೆಯಲ್ಲಿ ಮಿಲಿಯನ್ ಗಟ್ಟೆಲೆ ವೀಕ್ಷಣೆ ಪಡೆದುಕೊಂಡಿದೆ.ರಾತ್ರಿ 8ರ ವರೆಗೆ ಹಿಂದಿ ಆವೃತ್ತಿಯನ್ನು 11 ಲಕ್ಷ, ಕನ್ನಡ ಆವೃತ್ತಿಯನ್ನು 7.5 ಲಕ್ಷ, ತಮಿಳು ಆವೃತ್ತಿಯು 2.6 ಲಕ್ಷ, ತೆಲುಗು ಆವೃತ್ತಿಯು 3.7 ಲಕ್ಷ ಹಾಗೂ ಮಲಯಾಳಂ ಆವೃತ್ತಿಯು 90 ಸಾವಿರ ವೀಕ್ಷಣೆ ಪಡೆದಿದೆ.ಟಾಕ್ಸಿಕ್ ಟ್ರೇಲರ್ ಬಿಡುಗಡೆ: ಸಿನಿರಸಿಕರನ್ನು ತುದಿಗಾಲಲ್ಲಿ ನಿಲ್ಲಿಸಿದ ‘ರಾಯ’‘ರಾಕಿಂಗ್ ಸ್ಟಾರ್’ ಯಶ್ ಇಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಅವರಿಗೆ, ‘ಲೇಡಿ ಸೂಪರ್ಸ್ಟಾರ್’ ನಯನತಾರಾ, ಚೆಂದುಳ್ಳಿ ಚೆಲುವೆಯರಾದ ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಸಾಥ್ ನೀಡಿದ್ದಾರೆ.ಟ್ರೇಲರ್ 4.38 ನಿಮಿಷವಿದೆ. ಪ್ರತಿಯೊಂದು ಫ್ರೇಮ್ ಸಿನಿಮಾದ ಗುಣಮಟ್ಟ ಮತ್ತು ಅದ್ದೂರಿತನವನ್ನು ಸಾರುತ್ತಿವೆ. ರಾಜೀವ್ ರವಿ ಛಾಯಾಚಿತ್ರಗ್ರಹಣ, ರವಿ ಬಸ್ರೂರು ಹಿನ್ನೆಲೆ ಸಂಗೀತ ಸಿನಿರಸಿಕರನ್ನು ಸೆಳೆದಿವೆ.ಸೇಡಿನ ಕಥಾಹಂದರವಿರುವ ಟ್ರೇಲರ್ ಉದ್ದಕ್ಕೂ ಬರುವ ಟ್ವಿಸ್ಟ್ಗಳು ಯಶ್ ಅಭಿಮಾನಿಗಳು ತುದಿಗಾಲಲ್ಲಿ ನಿಲ್ಲುವಂತೆ ಮಾಡಿವೆ.ಕೆವಿಎನ್ ನಿರ್ಮಾಣ ಸಂಸ್ಥೆ ಹಾಗೂ ಯಶ್ ಅವರ ಮಾನ್ಸ್ಟರ್ಮೈಂಡ್ ಕ್ರಿಯೇಷನ್ಸ್, ಈ ಸಿನಿಮಾಗೆ ಬಂಡವಾಳ ಹೂಡಿದೆ.