'ಹರ್ ಘರ್ ತಿರಂಗಾ' ಅಭಿಯಾನದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಿ: ಪ್ರಧಾನಿ ಮೋದಿ ಕರೆ
ನವದೆಹಲಿ: 'ಹರ್ ಘರ್ ತಿರಂಗಾ' ಅಭಿಯಾನದಲ್ಲಿ ನಾಗರಿಕರು ಉತ್ಸಾಹದಿಂದ ಪಾಲ್ಗೊಳ್ಳುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ(ಆ.9) ಮನವಿ ಮಾಡಿದ್ದಾರೆ.2022ರಲ್ಲಿ 'ಆಜಾದಿ ಕಾ ಅಮೃತ ಮಹೋತ್ಸವ'ದ ಅಡಿಯಲ್ಲಿ ಪ್ರಾರಂಭವಾದ 'ಹರ್ ಘರ್ ತಿರಂಗಾ' ಅಭಿಯಾನವು ನಂತರದ ವರ್ಷಗಳ ಸ್ವಾತಂತ್ರ್ಯ ದಿನಾಚರಣೆಯಂದು ಮುಂದುವರೆದಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲ

ನವದೆಹಲಿ: 'ಹರ್ ಘರ್ ತಿರಂಗಾ' ಅಭಿಯಾನದಲ್ಲಿ ನಾಗರಿಕರು ಉತ್ಸಾಹದಿಂದ ಪಾಲ್ಗೊಳ್ಳುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ(ಆ.9) ಮನವಿ ಮಾಡಿದ್ದಾರೆ.2022ರಲ್ಲಿ 'ಆಜಾದಿ ಕಾ ಅಮೃತ ಮಹೋತ್ಸವ'ದ ಅಡಿಯಲ್ಲಿ ಪ್ರಾರಂಭವಾದ 'ಹರ್ ಘರ್ ತಿರಂಗಾ' ಅಭಿಯಾನವು ನಂತರದ ವರ್ಷಗಳ ಸ್ವಾತಂತ್ರ್ಯ ದಿನಾಚರಣೆಯಂದು ಮುಂದುವರೆದಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ‘ತ್ರಿವರ್ಣ ಧ್ವಜವು ನಮ್ಮ ಹೆಮ್ಮೆ. ದೇಶಕ್ಕಾಗಿ ಕೊಡುಗೆ ನೀಡಲು ಇದು ನಿರಂತರ ಪ್ರೇರಣೆಯಾಗಿದೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು 'ಹರ್ ಘರ್ ತಿರಂಗಾ' ಅಭಿಯಾನದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳೋಣ. ವಿಕಸಿತ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡುವ ನಮ್ಮ ಸಾಮೂಹಿಕ ಸಂಕಲ್ಪವನ್ನು ಪುನರುಜ್ಜೀವನಗೊಳಿಸೋಣ’ ಎಂದಿದ್ದಾರೆ.Our Tricolour is our pride and a constant source of inspiration to always give our best for the nation.Let us participate enthusiastically in the #HarGharTiranga movement and renew our collective resolve to contribute towards building a Viksit Bharat. Glad that this year’s… https://t.co/XH8Z1JI6my— Narendra Modi (@narendramodi) August 9, 2026 2026ರ 'ಹರ್ ಘರ್ ತಿರಂಗಾ' ಅಭಿಯಾನಕ್ಕೆ ಆಗಸ್ಟ್ 6ರಂದು ಚಾಲನೆ ನೀಡಲಾಗಿದ್ದು, ಆಗಸ್ಟ್ 9ರಿಂದ 17ರವರೆಗೆ ದೇಶದಾದ್ಯಂತ ಆಚರಿಸಲಾಗುತ್ತದೆ. ಈ ವೇಳೆ ನಾಗರಿಕರು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಮತ್ತು ದೇಶಭಕ್ತಿ ಹಾಗೂ ರಾಷ್ಟ್ರೀಯ ಏಕತೆಯ ಭಾವನೆಯನ್ನು ಆಚರಿಸುವ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಉತ್ತೇಜಿಸಲಾಗುತ್ತದೆ.