15 ಅಂಶಗಳ ಒಪ್ಪಂದ ತಿರಸ್ಕರಿಸಿದ ಇಸ್ರೇಲ್
ಜರುಸಲೇಂ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗಾಜಾ ಶಾಂತಿ ಒಪ್ಪಂದ ಪ್ರಸ್ತಾವವನ್ನು ತಿರಸ್ಕರಿಸಿದ್ದಾರೆ.‘ಹಮಾಸ್ ಸಂಘಟನೆಯು ಸಂಪೂರ್ಣವಾಗಿ ನಿಶ್ಶಸ್ತ್ರಗೊಳ್ಳುವವರೆಗೆ ಗಾಜಾದಲ್ಲಿನ ತನ್ನ ಗಡಿ ರೇಖೆಗಳಿಂದ ಇಸ್ರೇಲ್ ಹಿಂದೆ ಸರಿಯುವುದಿಲ್ಲ’ ಎಂದು ಭಾನುವಾರ ಸ್ಪಷ್ಟಪಡಿಸಿದ್ದಾರೆ.ಸಂಪುಟ ಸಭೆಯಲ್ಲಿ ಮಾತನಾಡಿ

ಜರುಸಲೇಂ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗಾಜಾ ಶಾಂತಿ ಒಪ್ಪಂದ ಪ್ರಸ್ತಾವವನ್ನು ತಿರಸ್ಕರಿಸಿದ್ದಾರೆ.‘ಹಮಾಸ್ ಸಂಘಟನೆಯು ಸಂಪೂರ್ಣವಾಗಿ ನಿಶ್ಶಸ್ತ್ರಗೊಳ್ಳುವವರೆಗೆ ಗಾಜಾದಲ್ಲಿನ ತನ್ನ ಗಡಿ ರೇಖೆಗಳಿಂದ ಇಸ್ರೇಲ್ ಹಿಂದೆ ಸರಿಯುವುದಿಲ್ಲ’ ಎಂದು ಭಾನುವಾರ ಸ್ಪಷ್ಟಪಡಿಸಿದ್ದಾರೆ.ಸಂಪುಟ ಸಭೆಯಲ್ಲಿ ಮಾತನಾಡಿದ ಅವರು, ‘15 ಅಂಶಗಳ ಒಪ್ಪಂದವನ್ನು ಇಸ್ರೇಲ್ ತಿರಸ್ಕರಿಸಿದೆ. ನಮ್ಮ ಸೇನೆ ಮತ್ತು ನಾಗರಿಕರ ಮೇಲೆ ನಿರಂತರವಾಗಿ ಬೆದರಿಕೆಗಳು ಕೇಳಿಬರುತ್ತಿವೆ’ ಎಂದು ಹೇಳಿದ್ದಾರೆ. ‘ಒಪ್ಪಂದದ ಕೆಲವು ಅಂಶಗಳ ಬಗ್ಗೆ ಸಹಮತವಿದೆ, ಕೆಲವಕ್ಕೆ ಸಹಮತವಿಲ್ಲ. ನಮ್ಮ ನೆಲದ ವಿಚಾರದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿದಿದೆ. ಇಸ್ರೇಲ್ ಆಕ್ಷೇಪಗಳ ಬಗ್ಗೆ ಅಮೆರಿಕದೊಂದಿಗೆ ಚರ್ಚೆ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.ಈ ಒಪ್ಪಂದವನ್ನು ಹಮಾಸ್ ಜುಲೈ ಕೊನೆಯ ವಾರ ಅನುಮೋದಿಸಿದೆ.ಬೆಂಜಮಿನ್ ನೆತನ್ಯಾಹು ಇಸ್ರೇಲ್ ಪ್ರಧಾನಿಒಪ್ಪಂದ ಇರಲಿ ಅಥವಾ ಇಲ್ಲದಿರಲಿ ನಾನು ಪ್ರಧಾನಮಂತ್ರಿಯಾಗಿ ಇರುವವರೆಗೂ ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಬಿಡುವುದಿಲ್ಲಮೋದಿಗೆ ನೆತನ್ಯಾಹು ಕರೆ: ಪಶ್ಚಿಮ ಏಷ್ಯಾದಲ್ಲಿನ ಬೆಳವಣಿಗೆಗಳ ಕುರಿತು ಮಾತುಕತೆಗಾಜಾದಿಂದ ಹಿಂದೆ ಸರಿಯುವ ಅಮೆರಿಕದ ನಿರ್ಧಾರಕ್ಕೆ ನಾವು ಒಪ್ಪಿಲ್ಲ ಎಂದ ಇಸ್ರೇಲ್