ಇಬ್ಬರ ಮಧ್ಯೆ ಮತ್ತೆ ಭಿನ್ನ – ಟ್ರಂಪ್ 15 ಅಂಶಗಳ ಗಾಜಾ ಪೀಸ್ ಪ್ಲ್ಯಾನ್ಗೆ ಒಪ್ಪದ ನೆತನ್ಯಾಹು!
– ನಾನು ಪ್ರಧಾನಿ ಆಗಿರುವವರೆಗೂ ಪ್ಯಾಲೆಸ್ತೀನ್ ರಾಷ್ಟ್ರ ರಚನೆಯಾಗಲ್ಲ; ಇಸ್ರೇಲ್ ಪ್ರಧಾನಿ – ಅಮೆರಿಕ ವಿರುದ್ಧವೇ ತಿರುಗಿಬೀಳು ಮುಂದಾಯ್ತಾ ಇಸ್ರೇಲ್? ಜೆರುಸಲೇಂ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಪ್ರಸ್ತಾಪಿಸಿರುವ ಗಾಜಾ ಶಾಂತಿ ಯೋಜನೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಟ್ರಂಪ್ ಮುಂದ

– ನಾನು ಪ್ರಧಾನಿ ಆಗಿರುವವರೆಗೂ ಪ್ಯಾಲೆಸ್ತೀನ್ ರಾಷ್ಟ್ರ ರಚನೆಯಾಗಲ್ಲ; ಇಸ್ರೇಲ್ ಪ್ರಧಾನಿ – ಅಮೆರಿಕ ವಿರುದ್ಧವೇ ತಿರುಗಿಬೀಳು ಮುಂದಾಯ್ತಾ ಇಸ್ರೇಲ್? ಜೆರುಸಲೇಂ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಪ್ರಸ್ತಾಪಿಸಿರುವ ಗಾಜಾ ಶಾಂತಿ ಯೋಜನೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಟ್ರಂಪ್ ಮುಂದಿಟ್ಟಿರುವ 15 ಅಂಶಗಳ ಶಾಂತಿ ಯೋಜನೆಯನ್ನು ಇಸ್ರೇಲ್ ತಿರಸ್ಕರಿಸಿದೆ ಎಂದು ನೆತನ್ಯಾಹು (Benjamin Netanyahu) ಭಾನುವಾರ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ತಾವು ಪ್ರಧಾನಿಯಾಗಿರುವವರೆಗೂ ಪ್ಯಾಲೆಸ್ತೀನ್ (Palestinian) ರಾಷ್ಟ್ರ ರಚನೆಗೆ ಅವಕಾಶ ನೀಡುವುದಿಲ್ಲ ಎಂದು ಅವರು ಕಠಿಣವಾಗಿ ಹೇಳಿದ್ದಾರೆ. ಗಾಜಾದಿಂದ ಇಸ್ರೇಲಿ ಸೇನೆಯನ್ನ ಸಂಪೂರ್ಣವಾಗಿ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಹಮಾಸ್ ಸಂಪೂರ್ಣವಾಗಿ ಶಸ್ತ್ರತ್ಯಾಗ ಮಾಡುವವರೆಗೂ ಇಸ್ರೇಲಿ ಪಡೆಗಳು ಗಾಜಾದಿಂದ (Gaza) ಹಿಂದೆ ಸರಿಯುವುದಿಲ್ಲ ಎಂದು ನೆತನ್ಯಾಹು ಘೋಷಿಸಿದ್ದಾರೆ. ‘15 ಅಂಶಗಳ ಯೋಜನೆ ತಿರಸ್ಕಾರ’ ಭಾನುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ನೆತನ್ಯಾಹು, ಹಮಾಸ್ ಕಳೆದ ತಿಂಗಳು ಬೆಂಬಲಿಸಿದ್ದ ಟ್ರಂಪ್ ಅವರ 15 ಅಂಶಗಳ ಯೋಜನೆಯನ್ನ ಇಸ್ರೇಲ್ ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ. ʻಇಸ್ರೇಲ್ 15 ಅಂಶಗಳ ದಾಖಲೆಗಳನ್ನ ತಿರಸ್ಕರಿಸಿದೆ. ಹಮಾಸ್ ನಿಜವಾಗಿಯೂ ಶಸ್ತ್ರತ್ಯಾಗ ಮಾಡುವವರೆಗೂ ಇಸ್ರೇಲ್ ತನ್ನ ಸೇನೆಯನ್ನ ಹಿಂತೆಗೆದುಕೊಳ್ಳುವುದಿಲ್ಲ. ನಮ್ಮ ಪಡೆಗಳು ಮತ್ತು ನಾಗರಿಕರ ವಿರುದ್ಧದ ಬೆದರಿಕೆಗಳನ್ನ ತಡೆಯುತ್ತೇವೆʼ ಎಂದು ನೆತನ್ಯಾಹು ಹೇಳಿದ್ದಾರೆ. ಅಮೆರಿಕದೊಂದಿಗೆ ಈ ವಿಚಾರವಾಗಿ ಚರ್ಚೆಗಳು ನಡೆಯುತ್ತಿವೆ. ಅಮೆರಿಕದ ಬಳಿ ಕೆಲವು ಪ್ರಸ್ತಾಪಗಳಿವೆ. ಅವುಗಳಲ್ಲಿ ಕೆಲವು ಇಸ್ರೇಲ್ಗೆ ಒಪ್ಪಿಗೆಯಾಗಿವೆ, ಇನ್ನೂ ಕೆಲವು ಒಪ್ಪಿಗೆಯಾಗಿಲ್ಲ. ಒಪ್ಪಿಗೆಯಾಗದ ವಿಚಾರಗಳ ವಿರುದ್ಧ ಹೇಗೆ ನಿಲ್ಲಬೇಕು ಎಂಬುದು ನಮಗೆ ಗೊತ್ತಿದೆ ಎಂದು ನೆತನ್ಯಾಹು ಟ್ರಂಪ್ಗೂ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ‘ನಾನು ಪ್ರಧಾನಿ ಆಗಿರುವವರೆಗೂ ಪ್ಯಾಲೆಸ್ತೀನ್ ರಾಷ್ಟ್ರ ಇಲ್ಲ’ ಪ್ಯಾಲೆಸ್ತೀನ್ ರಾಷ್ಟ್ರ ರಚನೆ ಕುರಿತು ನೆತನ್ಯಾಹು ಮತ್ತಷ್ಟು ಕಠಿಣ ನಿಲುವು ಪ್ರಕಟಿಸಿದ್ದಾರೆ. ʻನಾನು ಪ್ರಧಾನಿಯಾಗಿರುವವರೆಗೂ ಪ್ಯಾಲೆಸ್ತೀನ್ ರಾಷ್ಟ್ರ ಸ್ಥಾಪನೆಯಾಗುವುದಿಲ್ಲ. ಗಾಜಾದಲ್ಲೂ ಇಲ್ಲ, ವೆಸ್ಟ್ ಬ್ಯಾಂಕ್ನಲ್ಲೂ ಇಲ್ಲʼ ಎಂದು ಅವರು ಹೇಳಿದ್ದಾರೆ. ನೆತನ್ಯಾಹು ಅವರ ಹೇಳಿಕೆಗೆ ಅಮೆರಿಕದ ಶ್ವೇತಭವನ ಅಥವಾ ಹಮಾಸ್ ಕಡೆಯಿಂದ ತಕ್ಷಣ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಟ್ರಂಪ್ ಘೋಷಿಸಿದ್ದ ‘ಗಾಜಾ ಡೀಲ್’ ಏನಾಗಿತ್ತು? ಇದಕ್ಕೂ ಮುನ್ನ ಜುಲೈ 30 ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಮಾಸ್ ಶಸ್ತ್ರತ್ಯಾಗ ಮಾಡಲು ಮತ್ತು ಇಸ್ರೇಲಿ ಪಡೆಗಳು ಗಾಜಾದಿಂದ ಹಿಂಪಡೆಯಲು ಒಪ್ಪಂದ ರೂಪುಗೊಂಡಿದೆ ಎಂದು ಘೋಷಿಸಿದ್ದರು. ಆದರೆ ಈ ಒಪ್ಪಂದ ಜಾರಿಯಾಗಲು ಇನ್ನೂ ಹಲವು ಅಡೆತಡೆಗಳು, ಷರತ್ತುಗಳು ಮತ್ತು ದೀರ್ಘ ಕಾಲಾವಧಿ ಎದುರಾಗಿದ್ದವು. ಟ್ರಂಪ್ ಘೋಷಣೆ ಬಳಿಕವೂ ಹಮಾಸ್ ಮತ್ತು ಇಸ್ರೇಲ್ ಎರಡೂ ತಕ್ಷಣವೇ ಈ ಒಪ್ಪಂದಕ್ಕೆ ತಮ್ಮ ಒಪ್ಪಿಗೆಯನ್ನು ಅಧಿಕೃತವಾಗಿ ದೃಢಪಡಿಸಿರಲಿಲ್ಲ. ವೈಟ್ ಹೌಸ್ ಪ್ರಕಾರ, ಗಾಜಾದಲ್ಲಿ ಯುದ್ಧ ಅಂತ್ಯಗೊಳಿಸುವ ಪ್ರಕ್ರಿಯೆಯನ್ನ ಹಂತ ಹಂತವಾಗಿ ಜಾರಿಗೊಳಿಸುವ ಉದ್ದೇಶ ಹೊಂದಲಾಗಿತ್ತು. ಗಾಜಾ ಶಾಂತಿ ಯೋಜನೆಗೆ ಭಾರೀ ಹಿನ್ನಡೆ? ಗಾಜಾ ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಗಳು ಹಲವು ತಿಂಗಳುಗಳಿಂದ ನಡೆಯುತ್ತಿವೆ. ಆದರೆ ಹಮಾಸ್ ಶಸ್ತ್ರತ್ಯಾಗ, ಇಸ್ರೇಲಿ ಸೇನೆಯ ಹಿಂಪಡೆಯುವಿಕೆ ಮತ್ತು ಗಾಜಾದ ಭವಿಷ್ಯದ ಆಡಳಿತ ಸೇರಿದಂತೆ ಪ್ರಮುಖ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಮುಂದುವರಿದಿದೆ.