ರಾಜ್ಯವನ್ನು ಬರಪೀಡಿತವೆಂದು ಘೋಷಿಸುವಂತೆ ಸದನದಲ್ಲಿ ಧ್ವನಿ ಎತ್ತುತ್ತೇವೆ:ರವಿಕುಮಾರ
ರಾಮದುರ್ಗ: ‘ರಾಜ್ಯವನ್ನು ಬರಪೀಡಿತವೆಂದು ಘೋಷಿಸುವಂತೆ ಒತ್ತಾಯಿಸಿ, ಬಿಜೆಪಿ ಮತ್ತು ಜೆಡಿಎಸ್ ವತಿಯಿಂದ ಜಂಟಿಯಾಗಿ ವಿಧಾನಮಂಡಲ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಧ್ವನಿ ಎತ್ತಲಾಗುವುದು’ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಹೇಳಿದರು.ತಾಲ್ಲೂಕಿನ ಕೆ.ಚಂದರಗಿ ಮತ್ತು ಕಟಕೋಳ ಗ್ರಾಮದಲ್ಲಿ ರೈತರ ಜಮೀನಿಗೆ ತೆರಳಿ ಹಾನಿಗೆ ಒಳಗಾದ ಬೆಳೆ ಪರಿಶೀಲಿಸಿದ ನಂತರ, ರೈತ

ರಾಮದುರ್ಗ: ‘ರಾಜ್ಯವನ್ನು ಬರಪೀಡಿತವೆಂದು ಘೋಷಿಸುವಂತೆ ಒತ್ತಾಯಿಸಿ, ಬಿಜೆಪಿ ಮತ್ತು ಜೆಡಿಎಸ್ ವತಿಯಿಂದ ಜಂಟಿಯಾಗಿ ವಿಧಾನಮಂಡಲ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಧ್ವನಿ ಎತ್ತಲಾಗುವುದು’ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಹೇಳಿದರು.ತಾಲ್ಲೂಕಿನ ಕೆ.ಚಂದರಗಿ ಮತ್ತು ಕಟಕೋಳ ಗ್ರಾಮದಲ್ಲಿ ರೈತರ ಜಮೀನಿಗೆ ತೆರಳಿ ಹಾನಿಗೆ ಒಳಗಾದ ಬೆಳೆ ಪರಿಶೀಲಿಸಿದ ನಂತರ, ರೈತರೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.‘ರೈತರ ಸಾಲಮನ್ನಾ ಮಾಡಲು ಸರ್ಕಾರ ಮುಂದಾಗಬೇಕು’ ಎಂದರು.ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ‘ಜಲಾಶಯಗಳಲ್ಲಿ ನೀರಿನ ಕೊರತೆ ಇರುವುದನ್ನು ಅರಿತ ಮುಖ್ಯಮಂತ್ರಿಗಳು, ಜಲಾಶಯದ ನೀರು ನೆಚ್ಚಿಕೊಂಡು ಬಿತ್ತನೆ ಮಾಡಬೇಡಿ ಎನ್ನುತ್ತಾರೆ. ಆದರೆ, ರಾಜ್ಯವನ್ನು ಬರಪೀಡಿತ ಎಂದು ಘೋಷಿಸದಿರುವುದು ದುರ್ದೈವ’ ಎಂದರು.ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ‘ಕಾಳಿ ನದಿ ನೀರನ್ನು ಸೂಪಾ ಅಣೆಕಟ್ಟೆ ಮೂಲಕ ಮಲಪ್ರಭಾ ನದಿಗೆ ತರುವ ಯೋಜನೆ ಇದೆ. ಇದಕ್ಕಾಗಿ ₹7,500 ಕೋಟಿ ವೆಚ್ಚದ ಡಿಪಿಆರ್ ಸಿದ್ಧಪಡಿಸಿ ಸಲ್ಲಿಸಿದ ಪ್ರಸ್ತಾವಕ್ಕೆ ಕೇಂದ್ರ ಒಪ್ಪಿಗೆ ನೀಡಿದೆ. 65 ಕಿ.ಮೀ ಅಂತರದಿಂದ 10ರಿಂದ 15 ಟಿಎಂಸಿ ಅಡಿ ನೀರು ಮಲಪ್ರಭೆಗೆ ಬರಲಿದೆ’ ಎಂದರು.ಶಾಸಕರಾದ ದುರ್ಯೋಧನ ಐಹೊಳೆ, ವಿಠ್ಠಲ ಹಲಗೇಕರ, ಮಾಜಿ ಶಾಸಕ ಸಂಜಯ ಪಾಟೀಲ, ಸುಭಾಷ ಪಾಟೀಲ, ಕೆ.ವಿ.ಪಾಟೀಲ, ಸಿ.ಬಿ.ಪಾಟೀಲ, ಪಿ.ಎಫ್.ಪಾಟೀಲ, ಬಿ.ಎಸ್.ಬೆಳವಣಕಿ, ಗೋಪಾಲ ಸಂಶಿ ಇದ್ದರು.